New director of the union visits Pratyangira Devi

ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಬಳ್ಳಾರಿ ಹಾಲು ಒಕ್ಕೂಟದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ, ಹಾಲು ಸಹಕಾರ ಸಂಘದ ನಿರ್ದೇಶಕರಿಂದ ಆಯ್ಕೆಯಾಗಿ ಶ್ರೀ ಪ್ರತ್ಯಂಗಿರಾ ದೇವಿ ಸಂಗಾಪುರಕ್ಕೆ ಭೇಟಿ ದರ್ಶನ ದೇವಿಯ ಪಡೆದರು,ನಂತರದಲ್ಲಿ ಮಾತನಾಡಿದ ನೂತನ ನಿರ್ದೇಶಕರು/ ಮಾಜಿ ಅಧ್ಯಕ್ಷರು ಎನ್. ಸತ್ಯನಾರಾಯಣ ಮಾತನಾಡಿ ಗಂಗಾವತಿ ತಾಲೂಕಿನ ಉತ್ಪಾದಕರ ನಿರ್ದೇಶಕರು ಹಾಗೂ ಹಿರಿಯರ ಮೇರೆಗೆ ಅವಿರೋಧವಾಗಿ ನಿರ್ದೇಶಕರ ಆಯ್ಕೆ ಮಾಡಿ ಕೊಪ್ಪಳ ಜಿಲ್ಲೆಯ ಚುನಾವಣೆ ಸ್ಪರ್ಧೆಯಿಂದ ಗೆಲ್ಲಿಸಿ ಜಿಲ್ಲೆಯ ತಾಲೂಕಿನ ಅತ್ಯಂತ ಸಹಕಾರ ಸಂಘದ ಸದಸ್ಯರಿಗೆ ಅವರು ಹೃತ್ಪೂರ್ವಕವಾದ ಅಭಿನಂದನೆಗಳನ್ನು ತಿಳಿಸಿದರು, ಐದು ವರ್ಷ ಆಡಳಿತ ಅವಧಿಯಲ್ಲಿ ಬಹಳಷ್ಟು ಕುಂದು ಕೊರತೆಗಳಿದ್ದು ಅವುಗಳನ್ನು ಧೈರ್ಯದಿಂದ ಎದುರಿಸಿ ಸಂಘಗಳನ್ನು ಬಲವರ್ತನೆ ಮಾಡುವುದು ಗುರಿಯಾಗಿದೆ, ಸಂಘದಲ್ಲಿ ದುಡಿಯುವಂತ ಕಾರ್ಯದರ್ಶಿಗಳಿಗೆ, ಸಹಾಯಕರಿಗೆ ಮತ್ತು ಸಹಕಾರ ಸಂಘದ ರೈತರಿಗೆ ಒಳ್ಳೆ ಯೋಜನೆಗಳನ್ನು ರೂಪಿಸುವುದು, ರೈತರ ಒಳ್ಳೆ ಗುಣಮಟ್ಟದ ಹಾಲಿನೊಂದಿಗೆ ಉತ್ತಮ ಬೆಲೆಯನ್ನು ಒದಗಿಸುವುದು ನಮ್ಮೆಲ್ಲರ ಹೊಣೆಯಾಗಿದೆ, ಇದಕ್ಕೆ ಸಂಘದ ಅಧ್ಯಕ್ಷರು ಹಾಗೂ ಹಿರಿಯರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದರು. ಸಂದರ್ಭದಲ್ಲಿ ಮಲ್ಲಾಪುರ ,ಬಸವನದುರ್ಗ ಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಮಾನ್ಯರನ್ನು ಸನ್ಮಾನಿಸಿ ಗೌರವಿಸಿದರು.