Breaking News

ಜಾತಿ ನಿಂದನೆ ಮಾಡಿದ ಶಿವಪುರ ಶಾಲಾ ಶಿಕ್ಷಕ ಪ್ರಸಾದ್ ಪಿ ಬಿ ವಜಾ ಮಾಡಿ ದಲಿತ ಯುವ ಮುಖಂಡ ಮಂಜು ಗುರುಗದಹಳ್ಳಿಒತ್ತಾಯ.

Dalit youth leader Manju Gurugadahalli has urged the dismissal of Shivpur school teacher Prasad PB for caste abuse.

ತಿಪಟೂರು:ದಲಿತ ಮುಖಂಡ ಕುಮಾರಯ್ಯನವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಅಟ್ರಾಸಿಟಿ ಕೇಸ್ ಹಾಕುತ್ತೀಯಾ ಹಾಕು, ಇಂತಹವುಗಳನ್ನೆಲ್ಲಾ ಎಷ್ಟು ನೋಡಿಲ್ಲಾ ಎಂದು ಅಟ್ರಾಸಿಟಿ ಕಾಯ್ದೆಯನ್ನೇ ಅಣಕಿಸುವ ರೀತಿ ಅಪಹಾಸ್ಯ ಮಾಡಿ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುತ್ತಿರುವವರನ್ನು ಕೀಳುಮಟ್ಟದಲ್ಲಿ ಮಾತನಾಡಿರುವ ಶಿವಪುರ ಶಾಲಾ ಶಿಕ್ಷಕ ಪ್ರಸಾದ್ ಪಿ.ಬಿ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ದಲಿತರನ್ನು ಕಾಪಾಡಲು ಇರುವ ಕಾಯ್ದೆಯ ಗೌರವ ಕಾಪಾಡಬೇಕು
ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಜಾತಿ ಸಮೀಕ್ಷೆ ಮಾಡಲು ಆಯೋಗ ರಚನೆ ಮಾಡಿದ್ದು ಅವರು ಎಲ್ಲಾ ಅಧಿಕಾರಿಗಳಿಗೂ ಕಟ್ಟುನಿಟ್ಚಾಗಿ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದರೂ ಈ ಆದೇಶವನ್ನು ಧಿಕ್ಕರಿಸಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಯಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣೇನಹಳ್ಳಿ ಗ್ರಾಮದಲ್ಲಿ ನಾಲ್ಕು ಕುಟುಂಬಗಳ ಮನೆಗೆ ಭೇಟಿ ನೀಡದೇ ಸಮೀಕ್ಷೆ ಮಾಡದೇ ನಿರ್ಲಕ್ಷ್ಯ ಮಾಡಿದ್ದೂ ಅಲ್ಲದೇ ಈ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಕರೆ ಮಾಡಿದ ದಲಿತ ಮುಖಂಡರಾದ ಕುಮಾರಯ್ಯರವರಿಗೆ
ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಸಾದ್ ಪಿ.ಬಿ ರವರು ಏಕಾಏಕಿ ಅಟ್ರಾಸಿಟಿ ನಾ ಹಾಕ್ಯೋ ಹೋಗೋ ಅವನ್ನೆಲ್ಲ ಬೇಕಾದಷ್ಟು ನೋಡಿದ್ದೀನಿ ಎಂದು ತುಂಬಾ ಕೆಟ್ಟ
ಪದಗಳಿಂದ ಅವ್ಯಾಚ್ಯವಾಗಿ ಬೈದು ಫೋನ್ ಇಡು ಎಂದು ಫೋನ್ ಕಟ್ ಮಾಡ್ತಾರೆ. ಮತ್ತೆ ಕುಮಾರಯ್ಯ ಅವರು ಫೋನ್ ಮಾಡಿ ಪ್ರಸಾದ್ ಸಾರ್ ರವರಾ ಎಂದು ಮತ್ತೆ ತಾಳ್ಮೆಯಿಂದ ಕೇಳಿದಾಗ ‘ಇಲ್ಲ ಅವರಪ್ಪ’ ಎಂದು ಉಡಾಫೆಯಿಂದ ಮಾತನಾಡಿ ನಮ್ಮ ಸಮುದಾಯದ ತೇಜೋವಧೆ ಮಾಡಿದ್ದಾರೆ. ಅಂತಹ ಬೇಜಾವಾಬ್ದಾರಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುವುದನ್ನು ಬಿಟ್ಟು ಕೂಡಲೇ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು’, ಎಂದು ಎಚ್ಚರಿಕೆ ನೀಡಿದರು.
‘ನಮ್ಮ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಜಯ ಸಿಗುವುದು ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಮಾಜ ಘಾತುಕ ವ್ಯಕ್ತಿಗಳಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಹಾಗೂ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಾತಿ ನಿಂದಿಸುವುದನ್ನು ಇನ್ನೂ ಮುಂದುವರೆಸುತ್ತಿರುವ ಇಂತಹ ನೀಚ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’, ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಏಕ ಸದಸ್ಯ ವಿಚಾರಣಾ ಆಯೋಗದ ನಾಗಮೋಹನ್ ದಾಸ್ ರವರು ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದ್ದರೂ ಹಾಗೂ ದೂರು ನೀಡಿ 10-15 ದಿನಗಳು ದಿನಗಳು ಕಳೆದರೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಿಕ್ಷಣ ಸಚಿವರು
ಹಾಗೂ ಹಾಸನ ಜಿಲ್ಲಾಧಿಕಾರಿಗಳು,
ಅರಸೀಕೆರೆ ತಾಲೂಕು ದಂಡಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲಾ ಶಿಕ್ಷಕ ಪ್ರಸಾದ್ ಪಿಬಿ ವಿರುದ್ಧ ಜಾತಿನಿಂದನೆ ಕೇಸ್ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಗೊಳಿಸಬೇಕು ಎಂದು ಗುರುಗದಹಳ್ಳಿ ಮಂಜು ಆಗ್ರಹ

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.