A grand Guru Vandana program was held by the alumni at S.M.A.H.P.A. Proper School.

ಗಂಗಾವತಿ: ನಗರದ ಸ.ಮಾ.ಹಿ.ಪ್ರಾ ಪ್ರಾಪರ್ ಶಾಲೆಯಲ್ಲಿ ೧೯೯೮-೯೯ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಜುಲೈ-೧೨ ಶನಿವಾರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ ನಟೇಶ್ ರವರು ನೆರವೇರಿಸಿ ಮಾತನಾಡಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪ್ರಾಪರ್ ಶಾಲೆಯು ೧೧೯ನೇ ವಸಂತ ಪೂರೈಸಿ ೧೨೦ನೇ ವಸಂತ ಪ್ರಾರಂಭವಾಗಿದ್ದು, ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಾರಂಭದAತಹ ವಿಶೇಷ ಕಾರ್ಯಕ್ರಮದಲ್ಲಿ ಈ ಶಾಲೆಗೆ ಭೇಟಿ ನೀಡಿರುವುದು ಖುಷಿ ತಂದಿದೆ. ಈ ನಿಟ್ಟಿನಲ್ಲಿ ಸದರಿ ಶಾಲೆಯ ಹಳೆಯ ಶಿಕ್ಷಕರನ್ನು ಭೇಟಿಯಾಗಲು ಸುವರ್ಣಾವಕಾಶ ಲಭಿಸಿದೆ ಎಂದು ತಿಳಿಸುತ್ತಾ, ಹಳೆಯ ವಿದ್ಯಾರ್ಥಿಗಳು ಶಾಲೆಯ ಮೇಲೆ ಹೊಂದಿರುವ ಪ್ರೀತಿಯ ಕುರಿತು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಈರೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಂಜುನಾಥ ವಸ್ತçದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರೋಷಣ್ಣ, ಶಿಕ್ಷಣ ಸಂಯೋಜಕರಾದ ಆನಂದ ನಾಗಮ್ಮನವರ, ಬಿ.ಆರ್.ಪಿ ಆದ ಶ್ರೀಮತಿ ಶಶಿಕಲಾ ಜೆ., ಹಾಗೂ ಸಿ.ಆರ್.ಪಿ ಆದ ಶಿವಪ್ರಸಾದ್‌ರವರು ಆಗಮಿಸಿದ್ದರು.
ಶಾಲೆಯ ಹಳೆಯ ಶಿಕ್ಷಕರಾದ ಪಂಪಣ್ಣ, ವಿಷ್ಣುತೀರ್ಥ ದಿಗ್ಗಾವಿ, ಶ್ರೀಮತಿ ಚನ್ನಮ್ಮ, ಶ್ರೀಮತಿ ಮೇರಿ, ಶ್ರೀಮತಿ ಕೃಷ್ಣವೇಣಿ, ಶ್ರೀಮತಿ ಸುನಂದ, ಶ್ರೀಮತಿ ಭಾರತಿಬಾಯಿ, ರುದ್ರಯ್ಯಸ್ವಾಮಿ ರ‍್ಹಾಳ, ಹನುಮಂತಾಚಾರ್, ಶ್ರೀಮತಿ ನೀಲಮ್ಮ ಚನ್ನಬಸಪ್ಪ, ಗುರುಗಳಿಗೆ ಹಾಗೂ ಪ್ರಸ್ತುತ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಕರುಗಳಿಗೆ ಎಲ್ಲಾ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ ಮಾಡಲಾಯಿತು.
ಈ ಸಮಾರಂಭದಲ್ಲಿ ಶಾಲೆಯ ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿಗೊಳಿಸಿದರು.
