Koppal: Organization is important for journalists - State Committee Member H Mallikarjuna

ಕೊಪ್ಪಳ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸಭೆ,,
ಕೊಪ್ಪಳ : ಈಗ ಮಾಧ್ಯಮ ಅತಿ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದು, ಪತ್ರಕರ್ತರ ಪ್ರತಿ ದಿನ ಸಾಕಷ್ಟು ತೊಂದರೆ ತಾಪತ್ರಯಗಳಲ್ಲಿ ಜೀವನ ದೂಡುತ್ತಿದ್ದು ಅವರ ಶ್ರೇಯೋಭಿವೃದ್ದಿಗೆ ಸಂಘಟನೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್. ಮಲ್ಲಿಕಾರ್ಜುನ ಹೇಳಿದರು.
ಅವರು ನಗರದ ನೀರಿಕ್ಷಣಾ ಮಂದಿರದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಸಂಘಟನೆಯು ಉತ್ತಮ ಬರವಣಿಗೆಯುಳ್ಳ ಪತ್ರಕರ್ತರನ್ನು ಗುರುತಿಸುವ ಕಾರ್ಯ ಮಾಡುತ್ತಾ, ರಾಜ್ಯಾದ್ಯಂತ ನಮ್ಮ ಸಂಘ ಬಲಿಷ್ಠಗೊಳಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ರಾಜ್ಯ ಸರಕಾರದ ಯೋಜನೆಗಳನ್ನು ಪಡೆಯುವ ಮೂಲಕ ನಮ್ಮ ಸಂಘಟನೆಯ ವಿವಿಧ ಯೋಜನೆಗಳನ್ನು ಸಂಘದ ಪ್ರತಿಯೊಬ್ಬ ಸದಸ್ಯರಿಗೆ ತಲುಪಿಸಲಾಗುವುದು ಎಂದು ಅವರು ಹೆಳಿದರು.
ಇದೇ ಜುಲೈ 31ರಂದು ರಾಜಧಾನಿ ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಇವರ ನೇತೃತ್ವದಲ್ಲಿ ನಮ್ಮ ಮಾಧ್ಯಮ ಪತ್ರಕರ್ತರ ಸಂಘ ಅಧಿಕೃತವಾಗಿ ಉದ್ಘಾಟನೆ ಗೊಳ್ಳಲಿದೆ ಕಾರ್ಯಕ್ರಮ ದಲ್ಲಿ 300ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಕಾರಣ ಎಲ್ಲಾ ಪದಾಧಿಕಾರಿಗಳು ತಪ್ಪದೇ ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಮೇಶ ಕೋಟೆ, ಪಂಚಯ್ಯ ಗುರುರಾಜ ಡಂಬಳ ಹಿರೇಮಠ, ಲೊಕೇಶ ಬಜೇಂತ್ರಿ, ನಿಂಗರಾಜ ದೊಡ್ಡಮನಿ, ಮಂಗಳೇಶ ಮೆತಗಲ್, ರಾಘವೇಂದ್ರ ಅರಕೇರಿ ಸೇರಿದಂತೆ ಇತರರು ಇದ್ದರು.