Breaking News

ಸಂಪೂರ್ಣವಾಗಿ ಸಂವಿಧಾನ ಜಾರಿಯಾಗಿಲ್ಲ : ಎನ್. ಕೃಷ್ಣಮೂರ್ತಿ.

The Constitution has not been fully implemented: N. Krishnamurthy.

ಗಂಗಾವತಿ : ನಗರದ ಸರ್ಕಿಟ್ ಹೌಸ್ ನಲ್ಲಿ ನಡೆದ ಬ

ಜಾಹೀರಾತು

ಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ಆಯ್ಕೆ ಕಾನ್ಶಿಯರಂ ಮತ್ತು ಅಂಬೇಡ್ಕರ್ ಫೋಟೋಗಳಿಗೆ ಪುಷ್ಪಾರ್ಪಣೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎನ್ ಕೃಷ್ಣಮೂರ್ತಿ ರಾಜ್ಯಾಧ್ಯಕ್ಷರು ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಸಿದ್ಧಾಂತ ಬಗ್ಗೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥಾಪಕರು ದಾದಾಸಾಹೇಬ್ ಕಾನ್ಶಿಯರಂ. ಇವರ ಮಾರ್ಗದರ್ಶನದಲ್ಲಿ ಯಾವುದೇ ಹಣ ಮತ್ತು ಆಮಿಷಗಳನ್ನು ನೀಡದೆ ಪಕ್ಷ ಸಂಘಟನೆ ಮಾಡಿ ಜನರನ್ನು ಜಾಗೃತ ರನ್ನಾಗಿ ಮಾಡಿ ನಾಲ್ಕು ಬಾರಿ ಸಿ.ಎಂ. ಆಗಿ ಕು.ಮಾಯಾವತಿ ಜಿ ಆಡಳಿತದ ಚುಕ್ಕಾಣಿಯನ್ನು ಹಿಡಿದರು ಎಂದು ರಾಜ್ಯಾಧ್ಯಕ್ಷರು ತಿಳಿಸಿದರು.

ಗಂಗಾಧರ್ ಬಹುಜನ್ ರಾಜ್ಯ ಉಸ್ತುವಾರಿ ಮಾತನಾಡಿ
ನಮ್ಮ ಪಕ್ಷವು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ವಿಶಿಷ್ಟ ಮತ್ತು ವಿಶೇಷವಾದ ಸ್ಥಾನಮಾನಗಳನ್ನು ಗುರುತಿಸಿ ಅಂಥವರಿಗೆ ಮಾತ್ರ ನಮ್ಮ ಪಕ್ಷ ಟಿಕೆಟ್ ನೀಡುತ್ತದೆ. ಹಣ ಇದ್ದವರಿಗೆ ಮಾತ್ರ ಟಿಕೆಟ್ ಎನ್ನುವುದು ನಮ್ಮ ಪಕ್ಷದಲ್ಲಿ ಇಲ್ಲ. ಆದ್ದರಿಂದ ತಾವುಗಳು ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಬೇಕು ಎಂದು ಕಾರ್ಯಕ್ರಮಕ್ಕೆ ಬಂದ ಪದಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಹಾದೇವ್ ದನ್ನಿ, ಕೆ.ಆರ್. ತೊರ್ವಿ, ರಾಜ್ಯ ಸಮಿತಿ ಮುಖಂಡರು ಹುಲಿಗೇಶ್ ದೇವರಮನೆ ಕೊಪ್ಪಳ ಜಿಲ್ಲಾಧ್ಯಕ್ಷರು ದೊಡ್ಡಪ್ಪ ಪೂಜಾರಿ ಉಪಾಧ್ಯಕ್ಷರು, ರಾಮಣ್ಣ ಬಜಂತ್ರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಸವರಾಜ್ ನಾಯಕ್ ಜಿಲ್ಲಾ ಖಚಾಂಚಿ, ತಿಮ್ಮಣ್ಣ ಹಂಚಿನಾಳ ಜಿಲ್ಲಾ ಕಚೇರಿ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿಗಳು ನಿಂಗಪ್ಪ ನಾಯಕ್, ನಾಗರಾಜ್ ಜಿಟಿ, ಮೆಹಬೂಬ್ ಖಾನ್, ಹುಚ್ಚಪ್ಪ ದೊಡ್ಮನಿ, ಶಿವಪುತ್ರಪ್ಪ ಹಂಚಿನಾಳ್,BVF ಆಗಿ ನಾಗರಾಜ ಕೊಟ್ನೆಕಲ್ ಮಂಜುನಾಥ್, ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.