Breaking News

ಪೊಲೀಸ್ ಭದ್ರತೆಯಲ್ಲಿ ಯಶಸ್ವಿಯಾಗಿಜರುಗಿದಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಸರ್ವೆ ಕಾರ್ಯ.

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೇ ನಂ: ೪೮, ವಿಸ್ತೀರ್ಣ ೪೨-೨೧ ಎ-ಗುಂ ವಿಸ್ತೀರ್ಣದ ವಿಜಯನಗರ ಪುರಾತನ ಕಾಲದ ಶ್ರೀ ಲಕ್ಷ್ಮಿ. ನಾರಾಯಣ ಕೆರೆಯು ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟಿರುತ್ತದೆ. ಈ ಕೆರೆಯ ಜಾಗೆಯನ್ನು ಸುತ್ತಮುತ್ತಲಿನ ಜಮೀನುಗಳ ಮಾಲಿಕರು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರರಿಗೆ ಮನವಿ ಮಾಡಲಾಗಿದ್ದು, ಅದರಂತೆ ಜುಲೈ-೪ ಶುಕ್ರವಾರ ಪೊಲೀಸ್ ಭದ್ರತೆಯಲ್ಲಿ ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕೆರೆಯನ್ನು ಸರ್ವೆ ಮಾಡಿ ಹದ್ದುಬಸ್ತು ಮಾಡಿದರು ಎಂದು ಶ್ರೀ ಲಕ್ಷ್ಮಿ ನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಅಧ್ಯಕ್ಷರಾದ ಖಮರಪಾಷಾ ಆಗ್ರಹಿಸಿದ್ದಾರೆ.
ಸದರಿ ಕೆರೆಯ ಸರ್ವೆ ಕಾರ್ಯವನ್ನು ತಾಲೂಕ ಸರ್ವೇಯರ್ ಆದ ರಫೀಕ್‌ರವರು, ಸಂಗಾಪುರ ಪಿ.ಡಿ.ಓ ಅದ ಕಾಶೀನಾಥ, ಕಂದಾಯ ನಿರೀಕ್ಷಕ ಸೈಯ್ಯದ್ ಬಷೀರುದ್ದೀನ್, ಗ್ರಾಮ ಆಡಳಿತಾಧಿಕಾರಿ ಸಂಗೀತಾ ಹಾಗೂ ನೀರಾವರಿ ಇಲಾಖೆಯ ಎ.ಇ.ಇ ಆದ ಅಮರೇಶ ಹಾಗೂ ಜೆ.ಇ ಆದ ಅಮರೇಶ ಇವರ ಸಮ್ಮುದಲ್ಲಿ ಕೆರೆಯ ಜಾಗೆಯನ್ನು ಗುರುತಿಸಿ, ಕೆರೆ ಒತ್ತುವರಿ ಮಾಡಿದ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದರು ಹಾಗೂ ಸಂಗಾಪುರದಿAದ ಕೆರೆಯವರೆಗಿನ ೭೫೦ ಮೀಟರ್ ಹದಗೆಟ್ಟ ರಸ್ತೆಯನ್ನು ಈಗಾಗಲೇ ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಗ್ರಾಮದ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ಜಾಹೀರಾತು

About Mallikarjun

Check Also

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷಿನಿ ಗೌಡಿವರಿಂದ ಖಂಡನೆ

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು         ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ …

Leave a Reply

Your email address will not be published. Required fields are marked *