Returning to the village, the fifth year of foot pilgrims arrived at Karkihalli, the holy site of the Sri Chidambara Dindi Yatra, on the 6th.

ಗಂಗಾವತಿ, ಮರಳಿ:ದಿ, 10.07.2025 ರಂದು ಕೊಪ್ಪಳ ತಾಲೂಕಿನ ಶ್ರೀ ಕ್ಷೇತ್ರ ಕರ್ಕಿಹಳ್ಳಿಯಲ್ಲಿ ಜರುಗಲಿರುವ ಶ್ರೀ ಮೃತ್ಯುಂಜಯೇಶ್ವರನ ಜಾತ್ರೆಗಾಗಿ ರಾಮಾಚಾರ್ಯ ಜೋಶಿ ಹಾಗೂ ಶ್ಯಾಮಾಚಾರ್ಯ ಜೋಶಿ ಇವರ ನೇತೃತ್ವದಲ್ಲಿ ಶ್ರೀ ಚಿದಂಬರ ದಿಂಡಿ ಯಾತ್ರೆ ರಾಯಚೂರು ಇವರಿಂದ ಶ್ರೀ ಕ್ಷೇತ್ರ ಕರ್ಕಿಹಳ್ಳಿಗೆ ಐದನೇ ವರ್ಷದ ಪಾದಯಾತ್ರೆ ದಿನಾಂಕ 01.07.2025ರಿಂದ ಹೊರಟಿದ್ದು, ಈ ವರ್ಷವೂ ಸಹ ನಮ್ಮ ಮರಳಿ ಗ್ರಾಮಕ್ಕೆ ದಿನಾಂಕ 06.07.2025 ರಂದು ಆಗಮಿಸಲಿದ್ದು ಮರಳಿ ಗ್ರಾಮದ ವಿಪ್ರ ಬಾಂಧವರು ಸ್ವಾಗತಿಸಿ, ರಮೇಶ್ ಕುಲಕರ್ಣಿ ಇವರ ಮನೆಯಲ್ಲಿ ಯಾತ್ರಾರ್ಥಿಗಳು ಭಜನೆ ಮಾಡಿ, ಉಪನ್ಯಾಸ ನೀಡಲಿದ್ದಾರೆ. ನಂತರ ದಿಂಡಿ ಯಾತ್ರಾರ್ಥಿಗಳ ಜೊತೆಯಲ್ಲಿ ಆಗಮಿಸಿದ ಎಲ್ಲಾ ಸದ್ಭಕ್ತರು ಏಕಾದಶಿಯ ನಿಮಿತ್ಯ ಫಲಾಹಾರ ಸ್ವೀಕರಿಸಿ, ನಂತರ ಜಂಗಮರಕಲ್ಗುಡಿಗೆ ಪ್ರಯಾಣ ಮಾಡಲಿದ್ದಾರೆ.
ಈ ದಿಂಡಿ ಯಾತ್ರೆಯ ಯಾತ್ರಾರ್ಥಿಗಳನ್ನು ಮರಳಿ ಗ್ರಾಮದ ವಿಪ್ರ ಬಾಂಧವರು ಜಂಗಮರ ಕಲ್ಗುಡಿಗೆ ಬಿಳ್ಕೊಡಲಿದ್ದಾರೆ ಎಂದು ರಮೇಶ ಕುಲಕರ್ಣಿ ತಿಳಿಸಿದ್ದಾರೆ.