Breaking News

ಅಂಬೇಡ್ಕರ್ ಸೇವಾ ಸಮಿತಿಸಹಯೋಗದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಬ್ಯಾಗ್ ವಿತರಣೆ.

Distribution of notebook bags to school children in collaboration with Ambedkar Seva Samiti.

ಜಾಹೀರಾತು

ತಿಪಟೂರು. ಬೆಳಗರಹಳ್ಳಿ ಗ್ರಾಮದ ಬಡ ದಲಿತ ಸಮುದಾಯದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ಪೆನ್ನು ಮುಂತಾದ ಸಲಕರಣೆಗಳು ಅವಶ್ಯಕತೆ ಇದ್ದು ಈ ವಿಚಾರವಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ಅವರ ಗಮನಕ್ಕೆ ತಂದ ಅಂಬೇಡ್ಕರ್ ಸೇವಾ ಸಮಿತಿ ತಂಡಕ್ಕೆ ಸ್ಪಂದಿಸಿ ಇಂದು ನಗರದ
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ
ಇ ಓ ಸುದರ್ಶನ್ ರವರು ವಿದ್ಯಾರ್ಥಿಗಳಾದ. ವರುಣ್ ಕಿಶೋರ್ .ಉದಯ್. ಹರ್ಷಿಲ್. ತರುಣ್ ಕುಮಾರ್. ಇವರುಗಳು ಬೆಳಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಡುಬಡತನದಲ್ಲಿ ಇದ್ದ ಮಕ್ಕಳಿಗೆ ಉಚಿತ ನೋಟ್ ಬುಕ್ ಬ್ಯಾಗ್ ಕಿಟ್ಗಳನ್ನು ವಿತರಿಸಿದರು.

ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ ‘ನಾವು ಮೊದಲು ನಮ್ಮ ಪರಿಸರದ ಸರ್ಕಾರಿ ಶಾಲೆಯನ್ನು ಪ್ರೀತಿಸಬೇಕು. ಸಂಘಟನೆಗಳು ಈ ರೀತಿಯ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬರಬೇಕು. ಮಕ್ಕಳು ಒಳ್ಳೆಯಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.
ಓದಲು ಆಗದೇ ಬಡತನದಲ್ಲಿರುವ ಮಕ್ಕಳಿಗೆ ದಾನಿಗಳು ಬಂದು ಕೈಜೋಡಿಸಬೇಕು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುವಲ್ಲಿ ಆದಷ್ಟು ಪ್ರಯತ್ನಿಸುತ್ತೇನೆ.
ಸಮಾಜದಲ್ಲಿ ಹಣ ಆಸ್ತಿ ಬೆಳ್ಳಿ ಬಂಗಾರ ಎಲ್ಲದಕ್ಕೂ ಮೂಲ ವಿದ್ಯೆ ಎಂದರು.

ಈ ಸಂದರ್ಭದಲ್ಲಿ.ಎ ಎಸ್ ಎಸ್ ಕೆ ತಾಲೂಕು ಅಧ್ಯಕ್ಷ ಶಿವಕುಮಾರ್ ಮತಿಘಟ್ಟ. ದಲಿತ ಮುಖಂಡ ರಾಘು ಯಗಚಿಗಟ್ಟೆ. ರಮೇಶ್ . ಬಸವರಾಜ್. ಮನು ಮಂಜು ದರ್ಶನ್ ಗಂಗಾಧರ್ ಪ್ರಕಾಶ್. ಹೇಮಣ್ಣ ರಘು ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ.ಮಂಜು. ಗುರುಗದಹಳ್ಳಿ

About Mallikarjun

Check Also

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷಿನಿ ಗೌಡಿವರಿಂದ ಖಂಡನೆ

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು         ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ …

Leave a Reply

Your email address will not be published. Required fields are marked *