Breaking News

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala

ಜಾಹೀರಾತು

ಕುಷ್ಟಗಿ (ಹನುಮಸಾಗರ): ಕೊಪ್ಪಳ ಜಿಲ್ಲೆಯ ಪ್ರತಿಭೆಗಳಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಮೂಲಕ ಜಿಲ್ಲೆಯನ್ನು ಕ್ರೀಡಾ ಕ್ಷೇತ್ರದ ಸಾಧನೆಯಲ್ಲಿ ತೊಡಗುವಂತೆ ಮಾಡುವ ಜೊತೆಗೆ ಸಿಲಾತ್‌ಗೆ ರಾಜ್ಯ ಮಾನ್ಯತೆ ಕೊಡಿಸುವದಾಗಿ ಸಂಸದ ಕೆ. ರಾಜಶೇಖರ ಹಿಟ್ನಾಳ ಭರವಸೆ ನೀಡಿದರು.
ಅವರು ಹನುಮಸಾಗರದ ಶ್ರೀ ಲಕ್ಷಿ÷್ಮÃ ವೆಂಕಟೇಶ್ವರ ಬೆಟ್ಟದಲ್ಲಿರುವ ಸಮುದಾಯ ಭವನದಲ್ಲಿ ಭಾನುವಾರ ೧೧ನೇ ರಾಜ್ಯ ಪೆಂಚಾಕ್ ಸಿಲಾತ್ ಚಾಂಪಿಯನ್‌ಶಿಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ೧೮೦ ದೇಶಗಳಲ್ಲಿ ಭಾರತವೂ ಸಹ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು, ಅಂತಾರಾಷ್ಟಿçÃಯ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಪ್ರೋತ್ಸಾಹ ಕಡಿಮೆ ಸಿಗುತ್ತಿದೆ ಎಂದು ಸಂಸದರು ಬೇಸರ ವ್ಯಕ್ತಪಡಿಸಿ ಅವರು ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಅತ್ಯುನತ್ತ ಹುದ್ದೆ ಸೇರಿದಂತೆ ಸರ್ಕಾರಿ ನೌಕರಿ ಹೊಂದಬೇಕು ಎಂದು ಪಾಲಕರು ಆಶಯ ಪಡುತ್ತಾರೆ. ಅದರ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಲು ಮುಂದಾಗಬೇಕು. ಕ್ರೀಡಾ ಮೀಸಲಾತಿಯಿಂದ ನಾನಾ ರೀತಿಯ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ಬೇರೆ ರಾಜ್ಯದಂತೆ ಇಲ್ಲಿಯು ಸಹ ಸಿಲಾತ್ ಕ್ರೀಡೆಗೆ ಸರ್ಕಾರದ ಮಟ್ಟದಲ್ಲಿ ಮಾನ್ಯತೆ ಮಾಡಲು ಪ್ರಯತ್ನಿಸಲಾಗುವುದು. ಕ್ರೀಡೆ ಬೆಳೆಯಲು ಎಲ್ಲರ ಸಹಕಾರ ಅವಶ್ಯ. ಇದಕ್ಕೆ ಬೇಕಾದ ಸೌಲಭ್ಯ ಮತ್ತು ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಪೆಂಚಾಕ್ ಸಿಲಾತ್ ರಾಷ್ಟಿçÃಯ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ ಟೈÃಲರ ಪ್ರಾಸ್ತಾವಿಕ ಮಾತನಾಡಿ, ಗ್ರಾಮದ ಪ್ರಮುಖರ ಸಹಕಾರದಿಂದ ಉನ್ನತಮಟ್ಟದ ಕ್ರೀಡೆ ನಡೆಯುತ್ತಿದೆ ಮುಂದೆ ರಾಜ್ಯ ಸರಕಾರ ಸಿಲಾತ್‌ಗೆ ಮಾನ್ಯತೆ ನೀಡಿದಲ್ಲಿ ಎಲ್ಲಾ ರೀತಿಯ ಮೀಸಲಾತಿ ಲಭ್ಯವಾಗುತ್ತದೆ, ರಾಷ್ಟಿçÃಯ ಮಾನ್ಯತೆ ದೊರೆತಿದ್ದು, ಏಷಿಯನ್ ಗೇಮ್ಸ್, ಓಲಂಪಿಕ್ ಗೇಮ್ಸ್ನಲ್ಲಿರುವ ಸಿಲಾತ್ ಅದ್ಭುತ ಆತ್ಮರಕ್ಷಣಾ ಕಲೆ ಎಂದರು. ಅಬ್ದುಲ್ ಕರೀಂ ವಂಟೇಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದೊಡ್ಡಬಸವಗೌಡ ಪಾಟೀಲ್ ಬಯ್ಯಾಪುರ, ವಿಶ್ವನಾಥ ಕನ್ನೂರ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ವಿಶ್ವನಾಥ ನಾಗೂರ, ಬಸವರಾಜ ಬಾಚಲಾಪುರ, ಉಮೇಶ ಮಂಗಳೂರ, ಶ್ರೀಶೈಲಪ್ಪ ಮೋಟಗಿ, ಫಾರುಕ್ ಡಾಲಾಯತ್, ಮೌಲಿಮೋಟಗಿ, ಮಲ್ಲಿಕಾರ್ಜುನ ಬಡಿಗೇರ, ಶಿವಪ್ಪ ಕಂಪ್ಲಿ, ಭರಮಪ್ಪ ದೇವರಮನಿ, ಜ್ಯೋತಿ ಎಂ. ಗೊಂಡಬಾಳ, ರಾಜ್ಯ ಪೆಂಚಾಕ್ ಸಿಲತ್ ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಮಣಿಪುರ ರಾಜ್ಯ ಹಿರಿಯ ತರಬೇತುದಾರ ಗೊಯಿನೊ, ಜಿಲ್ಲಾ ಕಾರ್ಯದರ್ಶಿ ಈರಣ್ಣ ಬಾದಾಮಿ, ಕೋಚ್ ಆಕಾಶ್ ದೊಡ್ಡವಾಡ, ಜಂಪ್ ರೋಪ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷೆ ರೇಣುಕಾ ಪುರದ ಸೇರಿದಂತೆ ರಾಜ್ಯದ ನಾನಾ ಭಾಗಗಳ ಕಾರ್ಯದರ್ಶಿಗಳು ಇದ್ದರು. ಚಿಕ್ಕಮಗಳೂರು, ಮೈಸೂರ, ಬೆಂಗಳೂರು, ರಾಯಚೂರ, ಕೊಪ್ಪಳ, ಮಂಗಳೂರ, ಶಿವಮೊಗ್ಗ, ಯಾದಗಿರಿ, ಧಾರವಾಡ ಸೇರಿದಂತೆ ರಾಜ್ಯದ ೧೪ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಾಹಿತ್ಯ ಎಂ. ಗೊಂಡಬಾಳ ಪ್ರಾರ್ಥಿಸಿದರು, ವಿಜಯಕುಮಾರ ಹಂಚಿನಾಳ ಸ್ವಾಗÀತಿಸಿದರು, ಮಂಜುನಾಥ ಜಿ. ಗೊಂಡಬಾಳ ನಿರ್ವಹಿಸಿದರು, ಮಹ್ಮದ್ ಅಜರುದ್ದಿನ್ ವಂದಿಸಿದರು. ಪೆಂಚಾಕ್ ಸಿಲಾತ್‌ನ ಟ್ಯಾಂಡಿAಗ್, ತುಂಗಲ್, ಸೋಲೊ ಕ್ರಿಯೇಟಿವ್, ಗಾಂಡಾ ಮತ್ತು ರೇಗು ಎಂಬ ಐದು ಪ್ರಕಾರದ ಸ್ಪರ್ಧೆಗಳು ಪುರುಷ ಮತ್ತು ಮಹಿಳೆಯರ ವಿವಿಧ ವಯಸ್ಸು ಮತ್ತು ವೇಟ್ ಕೆಟಗರಿಯಲ್ಲಿ ಜರುಗಿದವು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.