Breaking News

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1.

ಜಾಹೀರಾತು

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೇ ನಂ: ೪೮, ವಿಸ್ತೀರ್ಣ ೪೨-೨೧ ಎ-ಗುಂ ವಿಸ್ತೀರ್ಣದ ವಿಜಯನಗರ ಪುರಾತನ ಕಾಲದ ಶ್ರೀ ಲಕ್ಷಿö್ಮÃನಾರಾಯಣ ಕೆರೆಯು ಜಲ ಸಂಪನ್ಮೂಲ ಇಲಾಖೆಗೆ ಸಂಬAಧಪಟ್ಟಿರುತ್ತದೆ. ಈ ಕೆರೆಯ ಜಾಗೆಯನ್ನು ಸುತ್ತಮುತ್ತಲಿನ ಜಮೀನುಗಳ ಮಾಲಿಕರು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರರಿಗೆ ಮನವಿ ಮಾಡಲಾಗಿದ್ದು, ಇದೇ ಜುಲೈ-೦೧ ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಸರ್ವೆ ಮಾಡಲಿದ್ದಾರೆ ಎಂದು ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಅಧ್ಯಕ್ಷರಾದ ಖಮರಪಾಷಾ ಆಗ್ರಹಿಸಿದ್ದಾರೆ.
ಕೆರೆ ಒತ್ತುವರಿಯಾದ ಬಗ್ಗೆ ನಮ್ಮ ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘ ನೀಡಿದ ದೂರನ್ನು ಕಂದಾಯ ಪರಿಶೀಲಿಸಿ ಒತ್ತುವರಿಯನ್ನು ತೆರವುಗೊಳಿಸಲು ಶ್ರೀ ಲಕ್ಷಿö್ಮÃನಾರಾಯಣ ಕೆರೆಯ ಜಾಗೆಯನ್ನು ಜುಲೈ-೦೧ ಮಂಗಳವಾರ ಸರ್ವೇ ಮಾಡಲು ಮಾಡಲಿದ್ದಾರೆ. ಸರ್ವೇ ಮಾಡಲು ಈಗಾಗಲೇ ಸುತ್ತಮುತ್ತಲಿನ ಜಮೀನುಗಳ ಮಾಲಿಕರುಗಳಿಗೆ ನೋಟಿಸ್ ನೀಡಿರುತ್ತಾರೆ ಎಂದು ತಿಳಿಸಿದರು.
ಐತಿಹಾಸಿಕ ಕೆರೆಯಾದ ಸಂಗಾಪುರದ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಉಳಿವಿಗಾಗಿ, ಸರ್ವೇ ಕಾರ್ಯ ನಡೆಯುವುದನ್ನು ವರದಿ ಮಾಡಲು ಎಲ್ಲಾ ಮುದ್ರಣ ಮಾದ್ಯಮ, ದೃಶ್ಯ ಮಾಧ್ಯಮಗಳ ಪತ್ರಿಕಾ ವರದಿಗಾರರು ಆಗಮಿಸುವಂತೆ ಕೋರಿದ್ದಾರೆ.

About Mallikarjun

Check Also

ಅಗ್ನಿ ಅವಘಡಗಳು, ತುರ್ತು ಸೇವೆಗಳ ಕುರಿತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗಳಿಂದ ಪ್ರಾತ್ಯಕ್ಷಿಕೆ

Demonstration by fire station staff on fire accidents and emergency services ಗಂಗಾವತಿ: ಸಮೀಪದ ವಡ್ಡರಹಟ್ಟಿ ಗ್ರಾಮದ …

Leave a Reply

Your email address will not be published. Required fields are marked *