Magalamani urges the government not to assign teachers for the census.

ಗಂಗಾವತಿ -ರಾಜ್ಯ ಸರಕಾರವು 90 ದಿನಗಳಲ್ಲಿ ಮರು ಜಾತಿ ಸಮೀಕ್ಷೆ ಮಾಡುವಾದಾಗಿ ನಿರ್ಧಾರ ಮಾಡಿದೆ. ಜಾತಿ ಸಮೀಕ್ಷೆಯಾದರೂ ಮಾಡಲಿ, ಜನಗಣತಿಯಾದರೂ ಮಾಡಲಿ ದನ ಗಣತಿಯನ್ನಾದರೂ ಮಾಡಲಿ, ಸರಕಾರಿ ಶಾಲಾ ಶಿಕ್ಷಕರನ್ನು ಹಾಗೂ ಅಂಗನವಾಡಿಯವರನ್ನು ಕೆಲಸಕ್ಕೆ ನಿಯೋಜನೆ ಮಾಡಬಾರದು ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ. ಶಾಲೆಗಳು ಪ್ರಾರಂಭವಾಗಿ ಹದಿನೈದು ದಿನ ಕೂಡ ಕಳೆದಿಲ್ಲ, ದಾಖಲಾತಿ ಮಾಡಿಕೊಳ್ಳುವದು, ವರ್ಗಾವಣೆ ಪತ್ರ ನೀಡುವದು ಇನ್ನಿತರ ಕೆಲಸ ಗಳೊಂದಿಗೆ ಕಲಿಕಾ ಕಾರ್ಯ ಆರಂಭ ಹಂತದಲ್ಲಿದೆ. ಕಲಿಕೆಯ ಮೂಲ ಉದ್ದೇಶ ಬಿಟ್ಟು ಅನ್ಯ ಕೆಲಸಗಳಿಗೆ ಶಿಕ್ಷಕರನ್ನು ಬಳಸುವದರಿಂದ ಅನೇಕ ಶಾಲೆಗಳು ಮುಚ್ಚಿವೆ, ಇನ್ನೂ ಮುಚ್ಚುತ್ತಲೆ ಇವೆ. ಈಗಾದರೆ ಸರಕಾರಿ ಶಾಲೆಗಳು ಉಳಿಯುವುದು ಹೇಗೆ ಎಂದು ಮ್ಯಾಗಳಮನಿ ಪ್ರಶ್ನೆ. ಮಾಡಿದ್ದಾರೆ. ಅನ್ಯ ಕಾರ್ಯಗಳಿಗೆ ಶಿಕ್ಷಕರನ್ನು ಬಳಸುವದು ಒಂದು ಕಡೆಯಾದರೆ, ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವದು ಮತ್ತೊಂದು ಕಡೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ಉಳಿಯುವುದು ಹೇಗೆ ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಕನ್ನಡ ಭಾಷೆ ಬೆಳೆಸುವದು ಯಕ್ಷಪ್ರಶ್ನೆಯಾಗಿದೆ. ಆದ್ದರಿಂದ ಪಿ ಯು ಸಿ ಹಾಗೂ ಪದವಿ ಮುಗಿಸಿದ ವಿದ್ಯಾವಂತರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಸರಕಾರವು ಅವರನ್ನು ಗಣತಿ ಕಾರ್ಯಕ್ಕೆ ಬಳಸಿಕೊಂಡು ಅವರಿಗೆ ಆರ್ಥಿಕ ನೆರವು ನೀಡಿದರೆ ಅವರಿಗೂ ಅನುಕೂಲ ಮತ್ತು ಸರಕಾರಿ ಶಾಲೆಗಳ ಉಳಿಯುಗೂ ಅನುಕೂಲ. ಆದ್ದರಿಂದ ಶಿಕ್ಷಕರನ್ನು ನಿಯೋಜನೆ ಮಾಡಬಾರದೆಂದು ಮ್ಯಾಗಳಮನಿ ಸರಕಾರವನ್ನು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ್, ಕೃಷ್ಣ ಮೆಟ್ರಿ ಪಂಪಾಪತಿ ಕುರಿ, ಹಾಲಪ್ಪ, ಚಾಂದ ಭಾಷಾ, ಮತ್ತಿತರರು ಇದ್ದರು.