Stop the killing of tribals in Chhattisgarh: Bharadwaj

ಗಂಗಾವತಿ: ಛತ್ತಿಸಘಡದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿAದಲೂ ಸುಮಾರು ೩೦೦೦ ಜನ ಆದಿವಾಸಿಗಳ ಹತ್ಯೆಯಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಹತ್ಯೆಗಳನ್ನು ನಿಲ್ಲಿಸಿ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಭಾರಧ್ವಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಛತ್ತಿಸಘಡ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿAದಲೂ ಸುಮಾರು ೫೦೦೦ ಜನ ಆದಿವಾಸಿಗಳನ್ನು ಹತ್ಯೆ ಮಾಡಿದ್ದು, ಕೂಡಲೇ ಈ ಹತ್ಯೆಗಳನ್ನು ನಿಲ್ಲಿಸಬೇಕು. ಸ್ಥಳೀಯ ಜನರ ಮೇಲೆ ಕೇಂದ್ರ ಸರ್ಕಾರ ಸೈನ್ಯವನ್ನು ಬಳಸುವುದನ್ನು ನಿಲ್ಲಿಸಬೇಕು. ನ್ಯಾಯಕ್ಕಾಗಿ, ಪೌರ ಹಕ್ಕುಗಳಿಗಾಗಿ ಹೋರಾಟ ಮಾಡುವವರನ್ನು, ಆದಿವಾಸಿಗಳನ್ನು ಕೊಲ್ಲುತ್ತಿರುವ ಕೇಂದ್ರ ಸರ್ಕಾರ ಕೂಡಲೇ ದಾಳಿಯನ್ನು ನಿಲ್ಲಿಸಿ ಅವರೊಂದಿಗೆ ಚರ್ಚಿಸಲು ಶಾಂತಿ ಸಭೆಯನ್ನು ಕರೆಯಬೇಕೆಂದು ಕ್ರಾಂತಿಚಕ್ರ ಬಳಗ ಕೇಂದ್ರಕ್ಕೆ ಒತ್ತಾಯಿಸಿದೆ