Breaking News

ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ

Development officials inspect lake dredging work

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕಡಿವಾಳ ಸೂಚನೆ

ಗಂಗಾವತಿ : ತಾಲೂಕಿನ ಚಿಕ್ಕಜಂತಗಲ್ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕೂಲಿಕಾರರು ನಿರ್ವಹಿಸುತ್ತಿರುವ ಕಲಿಕೇರಿ ಮತ್ತು ಜೀರಾಳ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕಡಿವಾಳ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಗ್ರಾಪಂ ಪಿಡಿಓ ಮಲ್ಲಿಕಾರ್ಜುನ ಕಡಿವಾಳ ಅವರು ಮಾತನಾಡಿ,’ ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಬೇಕು. ಗ್ರಾಪಂ ಸಿಬ್ಬಂದಿಗಳು ದಿನಕ್ಕೆ 2 ಬಾರಿ NMMS ಹಾಜರಾತಿ ಪಾರದರ್ಶಕವಾಗಿ ಹಾಕಬೇಕು. ಕೆರೆ ಹೂಳೆತ್ತಿದರೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದ ಬೋರ್ ವೆಲ್ ರಿಚಾರ್ಜ್ ಕೂಡ ಆಗುತ್ತವೆ ಎಂದರು.

ಉದ್ಯೋಗ ಚೀಟಿಯಲ್ಲಿ ಹೆಸರು ಇರುವ ಹಾಗೂ ಎನ್ ಎಂಆರ್ ನಲ್ಲಿ ಹೆಸರು ಇರುವ ಕೂಲಿಕಾರರು ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಎನ್ ಎಂಆರ್ ನಲ್ಲಿ ಹೆಸರು ಇಲ್ಲದವರು ಕೆಲಸಕ್ಕೆ ಹಾಜರಾದರೇ ಅವರಿಗೆ ಕೂಲಿ ಪಾವತಿ ಆಗುವುದಿಲ್ಲ. ಜೊತೆಗೆ ದುಡಿಯೋಣ ಬಾ ಅಭಿಯಾನ ಹಾಗೂ ಸ್ತ್ರೀ ಚೇತನ ಅಭಿಯಾನದಡಿ ಕೂಲಿಕಾರರು ಗ್ರಾಪಂಗೆ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಗ್ರಾಪಂ ಸದಸ್ಯರಾದ ರವಿಕುಮಾರ, ಸಿಬ್ಬಂದಿ ಆನಂದ, ಬಿಎಫ್ ಟಿ ಮಾರುತಿ, ಕಾಯಕಬಂಧುಗಳಾದ ರಾಜಶೇಖರ, ಸದ್ಧಾಂ, ಮಂಜುನಾಥ ಸ್ವಾಮಿ, ನರಸೀಂಹ ನಾಯಕ, ಮಂಜುನಾಥ ನಾಯಕ, ಬೆಟ್ಟಪ್ಪ, ಹನುಮೇಶ ಸೇರಿ ಇತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *