Breaking News

ಅರ್ಧಕ್ಕೆ ನಿಂತ ಕೃಷಿ ಇಲಾಖೆ ಕಟ್ಟಡ ಉದ್ಘಾಟನೆಸಚಿವರ ಮುಂದೆ ನಡೆದ ಹೈಡ್ರಾಮಾ

Half-built Agriculture Department building inaugurated; Hydrarama in front of the Minister

ಜಾಹೀರಾತು
20250603 093103 COLLAGE Scaled


ಜಮಖಂಡಿ: ಹಾಲಿ, ಮಾಜಿಗಳ ಮಧ್ಯೆ ಜಟಾಪಟಿ
ಸಾವಳಗಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕೃಷಿ ಇಲಾಖೆಯ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸರಕಾರಿ ಕಾರ್ಯಕ್ರಮ ಪೂರ್ಣವಾಗದೆ ಕಾಂಗ್ರೆಸ್-ಬಿಜೆಪಿ ಮುಖಂಡರ ಕಾರ್ಯಕರ್ತರ ಮಾತಿನ ಚಕಮಕಿಯಲ್ಲೆ ಅರ್ದದಲ್ಲೆ ಮೊಟಕುಗೊಂಡಿತು.
ಬಿಜೆಪಿ-ಕಾಂಗ್ರೇಸ್ ಮುಖಂಡರ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ, ಶಿಷ್ಟಾಚಾರ ಪಾಲಿಸುವಂತೆ ಶಾಸಕರ ಒತ್ತಾಯ, ಬ್ಯಾನರ್ ತೆಗೆದು ಹಾಕಿದ ಅಧಿಕಾರಿಗಳು, ವೇದಿಕೆಯಿಂದ ಕೆಳಗಿಳಿದು ಹೋದ ಜಿಲ್ಲಾ ಉಸ್ತುವಾರಿ ಸಚಿವ, ಪೊಲೀಸ್ ಬಿಗಿ ಬಂದೊಬಸ್ತ್ ಇದು ಜಮಖಂಡಿ ಕೃಷಿ ಇಲಾಖೆಯ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಹೈ ಡ್ರಾಮಾ ನಡೆಯಿತು. ನಗರದ ಉಪ ಕೃಷಿ ನಿರ್ದೇಶಕರು-2 ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಶುರುವಿನಲ್ಲೆ ಅರ್ದದಲ್ಲೆ ಮುಕ್ತಾಯಗೊಂಡಿತು.
ಘಟನೆ ವಿವರ: ಜಮಖಂಡಿ ಕೃಷಿಕ ಸಮಾಜದ ಆಡಳಿತ ಪದಾಧಿಕಾರಿಗಳು, ಸದಸ್ಯರು ಕಟ್ಟಡ ಉದ್ಘಾಟನೆಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಿದ್ದರು ಇದಕ್ಕೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು ಇದರಿಂದ ಬ್ಯಾನರ್‌ನ್ನು ತೆರವುಗೊಳಿಸಿದರು. ಬ್ಯಾನರ್‌ನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಫೊಟೊ ಇದ್ದರು ಯಾಕೆ ತೆರುವು ಮಾಡಬೇ
ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಸರ್ಕಾರಿ ಕಾರ್ಯಕ್ರಮ ಇದು ಇಲ್ಲಿ ಶಿಷ್ಟಾಚಾರ ಪಾಲನೆ ಆಗಬೇಕು ಬೇರೆಯವರು ಇಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳಲು ಬಿಡುವದಿಲ್ಲ, ಮಾಜಿ ಶಾಸಕ ಆನಂದ ನ್ಯಾಮಗೌಡ ಬಂದರೆ ನಾನು ವೇದಿಕೆಗೆ ಬರಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವೇದಿಕೆ ಬ್ಯಾನರ್‌ನಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಯಮನೂರ ಮೂಲಂಗಿ ಅಧಿಕಾರಿಗಳನ್ನು ಪ್ರಶ್ನಿಸಿದರು ಇದಕ್ಕೆ ಅಧಿಕಾರಿಗಳು ತರಾತುರಿಯಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ ಅವರ ಭಾವಚಿತ್ರದ ಬ್ಯಾನೇರ್ ಪ್ರಿಂಟ್ ಹಾಕಿಸಿ ವೇದಿಕೆಯಲ್ಲಿ ಹಾಕಿಸಿದರು. ನಗರಸಭೆ ಸದಸ್ಯರಿಗೆ ಹಾಗೂ ವಿವಿದ ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರಲಿಲ್ಲ ಇದಕ್ಕೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಯಾಕೆ ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡದ ಶಿಲಾನ್ಯಾಸ ಕಲ್ಲಿನಲ್ಲಿ ನಗರ ಪ್ರಥಮ ಪ್ರಜೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಅವರ ಹೆಸರನ್ನು ಯಾಕೆ ಹಾಕಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ತಿವ್ರ ಆಕ್ಷೇಪ ವ್ಯಕ್ತಪಡಿಸಿದರು ಇದಕ್ಕೆ ಬಿಜೆಪಿ ಮುಖಂಡರ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಹೋಯಿತು ಇದರಿಂದ ವೇದಿಕೆಯಲ್ಲಿ ಆಸನರಾಗಿದ್ದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವೇದಿಕೆಯಿಂದ ನಿರ್ಗಮಿಸಿದರು. ಅವರ ಜೋತೆ ಶಾಸಕ ನಾಡೋಜ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ ಅವರು ವೇದಿಕೆಯಿಂದ ಕೆಳಗಿಳಿದರು.
ತೇರದಾಳ ಶಾಸಕ ಸಿದ್ದು ಸವದಿ ಅವರು ನಗರಸಭೆ ಅಧ್ಯಕ್ಷ ಗವರೋಜಿ ಅವರ ಜೋತೆ ಅಗೌರವಾಗಿ ಮಾತನಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿದ್ದು ಸವದಿ ಅವರ ವಿರುದ್ದ ಘೋಷಣೆ ಕೂಗಿದರು.
1) ಬಾಕ್ಸ್:
ಶಾಸಕ ಜಗದೀಶ ಗುಡಗುಂಟಿ ಅವರು ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸಬೇಕು ಈ ಹಿಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಕುಳ್ಳರಿಸಿಕೊಂಡು ಕಾರ್ಯಕ್ರಮ ಮಾಡಿಲ್ವಾ ಅಂದು ಶಿಷ್ಟಾಚಾರ ನೇನಪು ಆಗಲಿಲ್ವಾ, ನಾನು ಅಧಿಕಾರದಲ್ಲಿದ್ದಾಗ ಬಿಜೆಪಿ ಸರ್ಕಾರ ಇದ್ದರು ನಾನು ಕ್ಷೇತ್ರಕ್ಕೆ ಬೇಕಾದ ಯೋಜನೆಗಳನ್ನು ತರುವಲ್ಲಿ ಪ್ರಾಮಾಣೀಕ ಕಾರ್ಯ ಮಾಡಿದ್ದೆನೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಸುದ್ದಿಗಾರರಿಗೆ ತಿಳಿಸಿದರು.
2) ಬಾಕ್ಸ್:
ಇಬ್ಬರು ಸಿಪಿಐ, ಆರು ಜನ ಪಿಎಸ್‌ಐ, ಎಎಸ್‌ಐ 10 ಜನ, ಡಿಆರ್ ವಾಹನ, 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಬಂದೊಬಸ್ತ್ನಲ್ಲಿ ಜಮಖಂಡಿ ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಇಡಾಗಿದೆ.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.