Breaking News

ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ನ್ಯಾಯಾಧೀಶ ರಮೇಶ ಗಾಣಿಗೇರ ಅವರಿಗೆ ಆತ್ಮೀಯ ಬೀಳ್ಕೊಡುಗೆ

A heartfelt farewell to Judge Ramesh Ganigera, who was popular for his social work.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಇಲ್ಲಿನ ಜೆಎಂಎಫ್‌ಸಿಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಹುಬ್ಬಳ್ಳಿಗೆ ವರ್ಗಾವಣೆಯಾಗಿರುವ ರಮೇಶ ಎಸ್. ಗಾಣಿಗೇರ ಅವರು, ಪವಿತ್ರ ನ್ಯಾಯಾಧೀಶ ವೃತ್ತಿಯ ಜೊತೆಗೆ ಸಮಾಜಮುಖಿಯಾಗಿ ಕೆಲಸ ಮಾಡಿ ಜನಾನುರಾಗಿಯಾದ ಪ್ರಯುಕ್ತ ಇವರನ್ನು ಅವರ ಪತ್ನಿ ಸಾವಿತ್ರಿ ಅವರನ್ನು ಜೂನ್-೦೧ ಭಾನುವಾರ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ಲಯನ್ಸ್ ಕ್ಲಬ್, ಗಂಗಾವತಿ ಚಾರಣ ಬಳಗ, ಕಿಷ್ಕಿಂದ ಚಾರಣ ಬಳಗ ಹಾಗೂ ಬಸವೇಶ್ವರ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು ಎಂದು ಚಾರಣ ಬಳಗದ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್ ತಿಳಿಸಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಹೆಚ್ಚುವರಿ ನ್ಯಾಯಧೀಶರಾದ ಸದಾನಂದ ನಾಗಪ್ಪ ನಾಯ್ಕ ಮಾತನಾಡಿ, ರಮೇಶ ಗಾಣಿಗೇರ ಅವರು ವೃತ್ತಿಯ ಜೊತೆಗೆ ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ೩೫೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ವೃತ್ತಿ ತಾತ್ಪರ್ಯತೆ ಮೆರೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅವರು ಇತ್ಯರ್ಥ ಮಾಡಿದ ೩೫೦೦ ಕೋರ್ಟ್ ಕೇಸ್ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ, ಮಮತೆಯ ತೊಟ್ಟಿಲು, ಹಲವಾರು ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಉತ್ತಮ ಸವಲತ್ತುಗಳನ್ನು ಕೊಡಲು ಆಗ್ರಹಿಸಿ ಕಾರ್ಯರೂಪಕ್ಕೆ ತಂದಿರುವುದು, ಅಂಜನಾದ್ರಿ ಬೆಟ್ಟ, ಬೆಣಕಲ್ ಮೊರೆರ ಬೆಟ್ಟ ಅಭಿವೃದ್ಧಿಗೆ ಅಧಿಕಾರಿಗಳಿಗೆ ಆದೇಶ ನೀಡಿರುವುದು, ನಗರದಲ್ಲಿ ಮಕ್ಕಳ ಭಿಕ್ಷಾಟನೆ ತಡೆದಿರುವುದು ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳ ಬಗ್ಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ|| ಸೋಮರಾಜು ಅವರು ಮಾತನಾಡಿ ಅವರ ಸೇವಾ ಅವಧಿಯಲ್ಲಿ, ಕಾನೂನು ಕಾಲೇಜು ಅಭಿವೃದ್ಧಿಗೆ ಮಾರ್ಗದರ್ಶನ, ಸಹಕಾರ ನೀಡಿದ್ದಾರೆ ಅಭಿನಂದಿಸಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಾ|| ಎ. ಸೋಮರಾಜು, ಡಾ|| ಜಿ. ಚಂದ್ರಪ್ಪ, ಶ್ರೀ ಚನ್ನಬಸಯ್ಯ ಸ್ವಾಮಿ, ಡಾ .ಶರಣಬಸಪ್ಪ ಕೋಲ್ಕಾರ, ಡಾ|| ಪಂಪಾಪತಿ, ಸೋಮನಾಥ ಪಟ್ಟಣಶೆಟ್ಟಿ ವಕೀಲರು, ಶಿವಪ್ಪ ಗಾಳಿ, ಮಹಾಲಿಂಗಪ್ಪ ಬನ್ನಿಕೊಪ್ಪ, ರಾಚಪ್ಪ ಸಿದ್ದಾಪುರ, ಎ.ಕೆ.ಮಹೇಶಕುಮಾರ, ಮಂಜುನಾಥ ಮಸ್ಕಿ, ಜಂಬಣ್ಣ ಐಲಿ, ಡಾ|| ಶಶಿಕಲಾ, ಸೌಮ್ಯ ಶಾವಿ, ಅರ್ಜುನ, ಪಂಪಾಪತಿ, ಹರನಾಯಕ ಇನ್ನೂ ಹಲವಾರು ಮಹನೀಯರು ಉಪಸ್ಥಿತರಿದ್ದು, ತಮ್ಮ ಸಂಘಟನೆಯ ಪರವಾಗಿ ಶ್ರೀ ರಮೇಶ್ ಗಾಣಿಗೇರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸಾವಿತ್ರಿ ಅವರನ್ನು ಆತ್ಮೀಯವಾಗಿ ಸತ್ಕರಿಸಿ ಸನ್ಮಾನಿಸಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *