Breaking News

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village.

ಜಾಹೀರಾತು
Screenshot 2025 05 31 19 16 36 33 E307a3f9df9f380ebaf106e1dc980bb6

ಸಂಯೋಜನೆ ಹೆಸರಿನಲ್ಲಿ 6200 ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಉಳೇನೂರು ಗ್ರಾಮದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನ.

ಅಭಿಯಾನದಲ್ಲಿ ಉಳೇನೂರಿನ ಸ್ಥಳೀಯ ಸಮಿತಿಯ ಮುಖಂಡ ಮತ್ತು ಎಐಡಿಎಸ್ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಮಾತನಾಡಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಶಿಕ್ಷಣವನ್ನು ಖಾಸಗೀಕರಣ ಮಾಡಲು ಮುಂದಾಗಿವೆ. ಈಗಿರುವ ಕಾಂಗ್ರೆಸ್ ಸರ್ಕಾರವು ಈಗ 6000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿದೆ, ಇದನ್ನು ವಿರೋಧಿಸಿ 50 ಲಕ್ಷ ಸಹಿ ಸಂಗ್ರಹ ನಡೆಯುತ್ತಿದ್ದು ರಾಜ್ಯದಾದ್ಯಂತ ಜನಗಳು ಮತ್ತು ಪೋಷಕರು ನಮ್ಮೊಟ್ಟಿಗೆ ಹೋರಾಟವನ್ನು ಸಂಘಟಿಸುವ ಮೂಲಕ ಈಗಾಗಲೇ ಮುಚ್ಚುವ ಪಟ್ಟಿಯಲ್ಲಿರುವ ಶಾಲೆಗಳ ಪೈಕಿ 3 ಶಾಲೆಗಳು ಉಳಿಸಿದ್ದಾರೆ. ಉಳೆನೂರು ಸುತ್ತ ಬೆನ್ನೂರು ತಾಂಡಾ, ಶಾಲಿಗನೂರು, ಈಳಿಗನೂರು ಕ್ಯಾಂಪ್, ಬುದಗುಂಪ ಸೇರಿದಂತೆ ಕಾರಟಗಿ ಭಾಗದಲ್ಲಿಯೇ 10 ಶಾಲೆಗಳು ಮುಚ್ಚುವ ಪಟ್ಟಿಯಲ್ಲಿವೆ. ರಾಜ್ಯ ಸರ್ಕಾರ ಕಡಿಮೆ ದಾಖಲಾತಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಬಡವರ ವಿರೋಧಿ ನಡೆಯನ್ನು ವಿರೋನಾವೆಲ್ಲರೂ ಹೋರಾಡಬೇಕೆಂದು ಕರೆ ನೀಡಿದರು.

ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರವಿಕಿರಣ್ ಅವರು ಈ ಸಹಿ ಸಂಗ್ರಹ ಅಭಿಯಾನವನ್ನು ಉಳೇನೂರಿನ ಜನತೆ ಬೆಂಬಲಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿಂಧು. ಕೆ, ಕಾರ್ಯಕರ್ತರಾದ ಸದಾಶಿವ,ಬಾಬು,ದೀಪ, ದುರ್ಗಮ್ಮ, ವಿಜಯಲಕ್ಷ್ಮಿ ದೇವಮ್ಮ,ರಮೇಶ್, ಲಕ್ಷ್ಮಣ,ಶಾಂತಮ್ಮ, ರುದ್ರೇಶ್,ಹುಲ್ಲೇಶ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

About Mallikarjun

Check Also

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.