Aunt elected as Nagamangala TAPCMS president..




ನಾಗಮಂಗಲದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ದ ಅಧ್ಯಕ್ಷರಾಗಿ ತುಪ್ಪದಮಡುವಿನ ಚಿಕ್ಕಮ್ಮರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಅಧ್ಯಕ್ಷ ಸ್ಥಾನ ತೆರವಾಗಿದ್ದು ಪ್ರಭಾರ ಅಧ್ಯಕ್ಷರಾಗಿ ಗೀತ ಗೋವಿಂದರವರು ಇವರಿಗೆ ಇದ್ದು, ಈ ದಿನ ಚಿಕ್ಕಮ್ಮ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅವಿರೋದ್ಯವಾಗಿ ಆಯ್ಕೆಯಾಗುವುದರ ಮೂಲಕ ನಾಗಮಂಗಲ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಅಧ್ಯಕ್ಷರಾಗಿ ಪದಗ್ರಹಣ ಮಾಡಿದಂತಹ ಚಿಕ್ಕಮ್ಮ ರವರು ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದು ಹಾಗೂ ಪಡಿತರ ವಿತರಣೆ ರಸಗೊಬ್ಬ ಮಾರಾಟ, ಪೆಟ್ರೋಲ್ ಬಂಕ್ ಹಾಗು ಇತರ ಮಳಿಗೆಗಳನ್ನು ಹೊಂದಿದ್ದು ಇದರ ಯಶಸ್ಸಿಗೆ ಶ್ರಮಿಸುವುದಾಗಿ ತಿಳಿಸಿದರು.. ಟೀ ಮರಿಯಪ್ಪ ಹಾಗೂ ಮಾದಪ್ಪಗೌಡ ರಂತಹ ಶಾಸಕರು ಈ ಸೊಸೈಟಿಯನ್ನು ಪ್ರಾರಂಭಿಸುವುದರ ಮೂಲಕ ನಾಗಮಂಗಲದ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿರುತ್ತಾರೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನನ್ನ ಮೇಲಿದೆ ಇದನ್ನು ಯಶಸ್ವಿಯಾಗಿ ಮೇಲ್ಮಟ್ಟಕ್ಕೆ ಕೊಂಡಯುತ್ತೇನೆ ಎಂದು ತಿಳಿಸಿದರು.. ಟಿಎಪಿಸಿಎಂಎಸ್ ಅಧ್ಯಕ್ಷರಾದ ಆಯ್ಕೆಯಾದ ಶ್ರೀಮತಿ ಚಿಕ್ಕಮ್ಮ ರನ್ನು ಸಚಿವರಾದ ಎನ್ ಚೆಲುವರಾಯಸ್ವಾಮಿ ರವರ ಅಣ್ಣ ಲಕ್ಷ್ಮಿಕಾಂತ್ ರವರ ಮಗ ಸುನಿಲ್ ರವರು ಅಭಿನಂದಿಸಿದರು, ಇದೇ ಸಂದರ್ಭದಲ್ಲಿ ನಾಗಮಂಗಲ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಸಂತ ಮಣಿ , ಗೀತಾ ದಾಸೇಗೌಡ, ಪುಟ್ಟಮ್ಮ ಮಾಯಣ್ಣ ಗೌಡ ಸಾರೇಮಿಗಲುಕೊಪ್ಪಲು ರಮೇಶ್, ತುಪ್ಪದಮಡೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರುಗಳು ಎಲ್ಲರೂ ಸಹ ಚಿಕ್ಕಮ್ಮ ರವರನ್ನು ಅಭಿನಂದಿಸಿದರು..