Breaking News

ಸಂಗೀತ ಸ್ವರಾಂಜಲಿ ಕಲಾ ತಂಡದಿಂದ ನಟ ಡಾ.ಅಂಬ್ರೇಶಅವರಜನ್ಮದಿನ ಆಚರಣೆ.

Actor Dr. Ambresha’s birthday celebration by the Sangeet Swaranjali art troupe.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದ ಕಾವಲುಗಾರನಂತೆನಟ ಡಾ.ಅಂಬ್ರೇಶ ಕೆಲಸಮಾಡಿದ್ದಾರೆ: ಪತ್ರಕರ್ತ ಸುದರ್ಶನ ವೈದ್ಯ

ಗಂಗಾವತಿ: ಕನ್ನಡದ ಕಾವಲುಗಾರನಂತೆ ನಟ ಡಾ.ಅಂಬ್ರೇಶ ಕೆಲಸ ಮಾಡಿದ್ದು ಕನ್ನಡಿಗರು ಅವರನ್ನು ಸದಾ ಸ್ಮರಣೆ ಮಾಡುತ್ತಾರೆಂದು ಹಿರಿಯ ಪತ್ರಕರ್ತರ ಸುದರ್ಶನ ವೈದ್ಯ ಹೇಳಿದರು.
ಅವರು ನಗರದ ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಮಾತಾ ಕರೋಕೆ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬ್ರೇಶ ಅವರ 73 ನೇಯ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ಭಾಷೆ,ನೆಲ,ಜಲದ ವಿಷಯದಲ್ಲಿ ಎಂತಹ ತ್ಯಾಗ ಮಾಡಲು ಡಾ.ಅಂಬ್ರೇಶ ಸಿದ್ದರಾಗಿದ್ದರು.ಕಾವೇರಿ ವಿಷಯದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಖಳ‌ನಟರಾಗಿ ಆಗಮಿಸಿ ನಾಯಕ ನಟರಾಗಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇವರನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ.ಪ್ರತಿ ವರ್ಷ ಜನ್ಮದಿನ ಆಚರಣೆ ಮಾಡಿ ಡಾ.ಅಂಬ್ರೇಶ ಕಾರ್ಯ ಸ್ಮರಿಸಬೇಕೆಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಕೆ.ನಿಂಗಜ್ಜ, ಸಂಗೀತ ಸ್ವರಾಂಜಲಿ ಕಲಾ ತಂಡದ ಹವ್ಯಾಸಿ ಕಲಾವಿದರಾದ ಹನುಮಂತಪ್ಪ ಹುಲಿಹೈದರ್,ಯಲ್ಲಪ್ಪ ಪೊಲ್ ಕಾಲ್,ಗಿರಿಜಮ್ಮ,ತಿಪ್ಪೇಸ್ವಾಮಿ ಹೊಸಮಠ,ಕಲಾವಿದರಾದ ಪರಶುರಾಮ ದೇವರಮನೆ,ಶಿವಪ್ಪ ಹುಳ್ಳಿ,ಕಾಜಹುಸೇನ ಮುಳ್ಳೂರು,ಹಾಜಿ ಅಲಿ,ಪ್ರವೀಶ ಸಾಣಾಪೂರ,ಕನಕಪ್ಪ ಹೊಸಳ್ಳಿ,ತಿಮ್ಮಣ್ಣ ಬಳ್ಳಾರಿ,ತಾಯಪ್ಪ ಮರ್ಚೇಡ್ ,ಆನಂದ ಪೇಂಟರ್ ಸೇರಿ ಅನೇಕರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *