Kannada Sena demands that actor Kamal Haasan apologize to Kannadigas for his controversial statement.

ಗಂಗಾವತಿ. ತಮಿಳು ಭಾಷೆ ತಾಯಿ ಭಾಷೆಯಾಗಿದ್ದು ಆ ಭಾಷೆಯ ಮಗಳ ಭಾಷೆ ಕನ್ನಡ ಭಾಷೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಕಮಲ್ ಹಾಸನ್ ಅವರು ಬೇಶರಥಾಗಿ ಕನ್ನಡಿಗರಿಗೆ ಕ್ಷಮೆ ಯಾಚಿಸಲೇಬೇಕೆಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೆಕಿನ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಕುರಿತು ನಗರಸಭೆಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಕಮಲ್ ಹಾಸನ್ ತಮ್ಮ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ನಡೆದ ಸಮಾರಂಭದಲ್ಲಿ ಯಾವುದೇ ಆಧಾರವಿಲ್ಲದೆ. ವಿನಾಕಾರಣ ವಿವಾದವನ್ನು ಜೊತೆಗೆ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮಿಳುನಾಡು ಜನತೆಯನ್ನು ಮೆಚ್ಚಿಸುವದಕ್ಕಾಗಿ ತಮಿಳು ಭಾಷೆಯ ಮೂಲ ಭಾಷೆಯಾಗಿದೆ ಇದರ ಲಿಪಿಯನ್ನು ಕನ್ನಡ ಬಳಸಿಕೊಂಡಿದೆ ಎಂಬ ಹೇಳಿಕೆಯನ್ನು ಸೇನೆ ತೀವ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಕ್ಷಮೆಯಾಚಿಸ ಬೇಕು ಇಲ್ಲವಾದಲ್ಲಿ. ಅವರ ನಟನೆಯ ಯಾವುದೇ ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆ ಆಗದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ. ಸೇನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವಿಜಯಲಕ್ಷ್ಮಿ ಹೊಳೆನೂರ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಶಿವಪ್ಪ ವಿನೊಬ ನಗರ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತಾ ತಾಲೂಕ ಮಹಿಳಾ ಘಟಕದ ಅಧ್ಯಕ್ಷರು ಶೃತಿ ಕಾರ್ಯದರ್ಶಿ ಅಂಜನಪ್ಪ ಇತರರು ಉಪಸ್ಥಿತರಿದ್ದರು
Kalyanasiri Kannada News Live 24×7 | News Karnataka
