Indefinite strike by civic employees enters second day




ಕೊಟ್ಟೂರು :ಕೊಟ್ಟೂರು ಪಪಂ ಕಚೇರಿ ಮುಂಭಾಗದಲ್ಲಿ ಸಂಘದ ಪೌರಕಾರ್ಮಿಕರು ಸೇರಿದಂತೆ ಪದಾಧಿಕಾರಿಗಳು, ಪೌರ ಕಾರ್ಮಿಕ ಎರಡನೇ ದಿನ ಮುಂದುವರೆದಿದ್ದು ಮುಷ್ಕರದಿಂದ ಕಚೇರಿ ಕೆಲಸಗಳು ಸೇರಿ ಎಲ್ಲ ಸೇವೆಗಳು ಸ್ಥಗಿತಗೊಂಡಿದೆ.
ರಾಜ್ಯ ಪೌರ ನೌಕರರ ಸಂಘದ ರಾಜ್ಯಧ್ಯಕ್ಷ ಕೆ ಪ್ರಭಾಕರ್ ಅವರು ಬುಧವಾರ ಮಾತನಾಡಿ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ೧೯ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ರಾಜ್ಯ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು ಈ ಮುಷ್ಕರದ ಬಗ್ಗೆ 29.05.2025 ರಂದು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಚರ್ಚೆಸಲು ಕೋರಿದರೆ ನಮ್ಮ ನೌಕರರ ಸಂಘದ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದರು
ಈ ಸಂದರ್ಭದಲ್ಲಿ ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಕೊಟ್ರೇಶ್, ಉಪಾಧ್ಯಕ್ಷ ಎಚ್.ಶಂಕ್ರಪ್ಪ, ಕಾರ್ಯದರ್ಶಿ ಮಂಜುನಾಥ ಎ, ಸಂಘಟನಾಕಾರ್ಯದರ್ಶಿ ಎನ್.ವಿಜಯಕುಮಾರ, ಖಜಾಂಚಿ ಎಸ್.ಪರುಸಪ್ಪ, ಬಿ.ರವಿ, ಬಿ.ರಮೇಶ ನಿರ್ದೇಶಕರಾದ ಸುಭದ್ರಮ್ಮ, ಸುಮಿತ್ರಮ್ಮ, ಈ ದಿನದ
ಮುಷ್ಕರಕ್ಕೆ ೬೦ ಜನ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಈ ಮುಷ್ಕರದ ಹಿನ್ನೆಲೆಯಿಂದ ಪಟ್ಟಣದಲ್ಲಿ ಸ್ವಚ್ಛತೆ ಮತ್ತು ಇತರೇ ಸ್ಥಳೀಯ ಕೆಲಸಗಳಿಗೆ ತೊಂದರೆಯಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಾರ್ವಜನಿಕರಾದ ಉಷಾ , ಪತ್ರಿಕೆಗೆ ತಿಳಿಸಿದರು