Breaking News

ಎಸ್. ಬಿ. ಐ. ಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Free eye check-up camp at S. B. I.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. – ಬ್ರಹ್ಮದೇವ ಸಿಂಗ್ ಮುಖ್ಯ ವ್ಯವಸ್ಥಾಪಕರು ಎಸ್ ಬಿ ಐ


ಗಂಗಾವತಿ,: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರು ರಕ್ಷಣೆ ಮಾಡಿಕೊಳ್ಳುವುದು ಅವರವರ ಕರ್ತವ್ಯ ಎಂದು ಭಾರತೀಯ ಸ್ಟೇಟ್ ಬ್ಯಾಂಕ್, ಗಂಗಾವತಿ ಮುಖ್ಯಶಾಖೆಯ ಮುಖ್ಯ ವ್ಯವಸ್ಥಾಪಕರಾದ ಬ್ರಹ್ಮದೇವ ಸಿಂಗರವರು ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು* *ದೇಹದ ಎಲ್ಲಾ ಅಂಗಾಂಗಗಳಲ್ಲಿ ಕಣ್ಣು ಸಹ ಸೂಕ್ಷ್ಮವಾದ ಮತ್ತು ದೃಷ್ಟಿ ನೀಡುವಂತಹ ಮುಖ್ಯವಾದ ಅಂಗವಾಗಿದೆ. ಹಾಗಾಗಿ ನಮಗೆ ಉತ್ತಮವಾದ ದೃಷ್ಟಿ ಮತ್ತು ಅದರ ರಕ್ಷಣೆಗಾಗಿ ನಾವು ಜವಾಬ್ಧರಾಗಿರುವುದು ಸಹ ಮುಖ್ಯವಾಗಿದೆ ಎಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು* *ಉಚಿತ ನೇತ್ರ ತಪಾಸಣ ಶಿಬಿರದ ಮುಖ್ಯ ಕೇಂದ್ರ ಬಿಂದು ಗಳಾದ ಮಾರುತಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ.ಎ. ಹನುಮಂತಪ್ಪನವರು ತಮ್ಮ ಭಾಷಣದಲ್ಲಿ ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷದಿಂದ ಕಣ್ಣು ಕಳೆದು ಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಹೊತ್ತು ನೀಡುವುದು ಅವಶ್ಯ ಎಂದು ತಿಳಿಸಿದರು. ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ದೈನಂದಿನ ವ್ಯವಹಾರಗಳ ಜೊತೆಗೆ ಸಾಮಾಜಿಕ ಕಳಕಳಿಯಿಂದ ಇಂದು ಗ್ರಾಹಕರಿಗೆ, ಮತ್ತು ನಗರದ ಎಸ್. ಬಿ. ಐ. ಶಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸುವುದು ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು* *ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ ಆಂಜನೇಯ ರವರು ಬ್ಯಾಂಕು ದಿನ ನಿತ್ಯಲು ಹಣಕಾಸಿನ ವ್ಯವಹಾರದ ಜೊತೆಗೆ ತಮ್ಮ ಗ್ರಾಹಕರ ಮತ್ತು ಸಿಬ್ಬಂದಿಗಳಿಗೂ ಕಣ್ಣಿನ ಬಗ್ಗೆ ಕಾಳಜಿ ವಹಿಸಿ ಎಂದು ದೃಷ್ಟಿ ಮತ್ತು ರಕ್ಷಣೆಗಾಗಿ ಇರುವಂತಹ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು* *ಈ ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ವತಿಯಿಂದ ನೇತ್ರ ವೈದ್ಯರಾದ ಡಾಕ್ಟರ್ ಹನುಮಂತಪ್ಪ ಅವರನ್ನು ಎಲ್ಲಾ ಸಿಬ್ಬಂದಿಯವರು ಸನ್ಮಾನಿಸಿ ಗೌರವಿಸಿದರು* *ಈ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳಾದ ಅಶೋಕ್, ಶ್ರೀನಿವಾಸ್, ರಮೇಶ್ , ಶಿವಪ್ರಸಾದ್, ಮೋಹನ್,ವಲಯ ಅಧಿಕಾರಿಗಳದ ಶಶಿಕುಮಾರ ಇನ್ನಿತರರು ಉಪಸ್ಥಿತರಿದ್ದರು* *ಅಲ್ಲದೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಗಳು, ಮಾರುತಿ ಕಣ್ಣಿನ ಆಸ್ಪತ್ರೆಯ ವಿಶೇಷ ಸಿಬ್ಬಂದಿಗಳು ಹಾಜರಿದ್ದು ಸುಮಾರು 60 ಜನರಿಗೆ ತಪಾಸಣೆ ನಡೆಸಿದರು*

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *