The role of officials is important in delivering government schemes to the people: Rayareddy




ಕಲ್ಯಾಣ ಸಿರಿ
ಕುಕನೂರ : ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅದರಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ.
ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹ ಜ್ಯೋತಿ* ಯೋಜನೆ ಗಳ ಮೂಲಕ ರಾಜ್ಯ ಬಡ ಜನರಿಗೆ ಕರ್ನಾಟಕ ಸರ್ಕಾರದ ಮೂಲಕ ಚೈತನ್ಯ ತುಂಬುವ ಕೆಲಸ ಆಗಿದೆ. ಒಟ್ಟು ಗ್ಯಾರಂಟಿ ಯೋಜನೆಗಳ ಮೂಲಕ ವರ್ಷಕ್ಕೆ 420 ಕೋಟಿ ಯಲಬುರ್ಗಾ ಕ್ಷೇತ್ರ ಒಂದಕ್ಕೆ ಅನುದಾನ ಸಿಕ್ಕಿದೆ ಎಂದರು.
ಕುಕನೂರ ಪಟ್ಟಣದಲ್ಲಿ ಎ.ಪಿ.ಎಮ್.ಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಿಸಿಯೂಟ ಸವಿದು ಇಂದಿರಾ ಕ್ಯಾಂಟೀನ್ ಸೌಲಭ್ಯ ವನ್ನು ಬಡ ಕೂಲಿಕಾರರು, ವಿದ್ಯಾರ್ಥಿಗಳು ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಇಲಾಖೆಯಡಿ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಪ್ರಥಮಬಾರಿಗೆ 20 ವಸತಿ ನಿಲಯಗಳು ಸ್ವಂತ ಕಟ್ಟಡದಲ್ಲಿ ಪ್ರಾರಂಭವಾಗಿರುವದು ತಾಲೂಕಿನ ಜನರಿಗೆ ಹೆಮ್ಮೆ, ಅದರಂತೆ ರಾಷ್ಟ್ರೀಯ ಹೆದ್ದಾರಿ, ಗದಗ ವಾಡಿ ರೈಲು ಯೋಜನೆ ಜನ ಸಾಮಾನ್ಯರ ಆರ್ಥಿಕ ಚಟುವಟಿಕೆಗಳು ಸುಧಾರಣೆಯಾಗಲು ಸಾಧ್ಯವಾಗಿದೆ ವಾರದಲ್ಲಿ ಐದು ಸಾವಿರ ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಅದರಂತೆ ತಾಲೂಕಿಗೆ ನರ್ಸಿಂಗ್ ಕಾಲೇಜ್ ಇದೇ ವರ್ಷದಿಂದ ಪ್ರಾರಂಭವಾಗಲಿದೆ. ಅದೇ ರೀತಿ ನೂತನ ತಾಲೂಕ ಕಂದಾಯ ಕಟ್ಟಡ ಬುದ್ದ ಬಸವ ಅಂಬೇಡ್ಕರ್ ಭವನ ಕ್ಡ, ಕುಕನೂರ ತಾಲೂಕಿಗೆ ಜೆಎಮ್ ಎಫ್ ಸಿ ಕೋರ್ಟ ಮಂಜೂರಾಗಿದೆ. ತಾಲೂಕ ಆಸ್ಪತ್ರೆ ಸಹ ಜಾರಿಯಾಗಿದ್ದು ಈ ಎಲ್ಲಾ ಕೆಲಸಗಳು ಕರ್ನಾಟಕ ಸರ್ಕಾರದಿಂದ ಆಗಿರುವುದು ಹೆಮ್ಮೆಯ ಕೆಲಸ ಎಂದರು.
2.0 ಅಮೃತ ಕುಡಿಯುವ ನೀರಿನ ಯೋಜನೆಗೆ 210 ಕೋಟಿಯಿಂದ ಪ್ರತಿಯೊಬ್ಬರಿಗೆ 135ಲೀಟರ್ ಕುಡಿಯುವ ನೀರು ಜೊತೆಗೆ ಎಲ್ ಎನ್ ಟಿಯಿಂದ 85ಲೀಟರ್ ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ, ಹೈವೆ, ಮುಂದಿನ ದಿನದಲ್ಲಿ ಕುದರಿಮೋತಿಯಿಂದ ಮುಂಡರಗಿ ಹೈವೆ ಮಾಡಲಾಗುವುದು ಎಂದರು.
15 ಗ್ರಾಮಗಳಿಗೆ ನೂತನ ಬಸ್ ನಿಲ್ದಾಣ ನಿರ್ಮಾಣ, ಮಸಬ ಹಂಚಿನಾಳನಲ್ಲಿ ನಾನೇ ಸುಸಜ್ಜಿತ ಬಸ್ ನಿಲ್ದಾಣ ಮಾಡಿಸಿದ್ದು, ಕುಕನೂರಿನ ಪ್ರತಿಯೊಂದು ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪ, ಸಿಡಿಪಿಒ, ಬಿಇಒ ಆಫೀಸ್ ಕುಕನೂರಿನಲ್ಲಿ ನೂತನ ಬಿಇಒ ಆಫೀಸ್ ನಿರ್ಮಾಣವಾಗಲಿದೆ.
ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಕೊರತೆಯಾಗದಂತೆ ಸಮರ್ಪಕವಾಗಿ ವಿತರಣೆಯಾಗಲಿದೆ. ಮುಂದಿನ ದಿನಗಳಲ್ಲಿ ಹಳ್ಳಿಗಾಡಿನ ರಸ್ತೆಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿಕೊಡಲಾಗುವುದು. ಯರೇಭಾಗ ಮತ್ತು ಮಸಾರಿ ರಸ್ತೆ ನಿರ್ಮಾಣ, ಹೊಲಗಳಿಗೆ ಓಡಾಡಲು ರೈತರಿಗೆ ಉತ್ತಮ ರಸ್ತೆಗಳನ್ನು ಸಹ ನಿರ್ಮಾಣ ಮಾಡಲಾಗುವುದು, ಇನ್ನೂ ಕೇಲವೆಡೆಗಳಲ್ಲಿ ಬ್ರೀಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಲಾಗುವುದು ಎಂದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳಿದ್ದಲ್ಲಿ ನಮ್ಮ ಯಲಬುರ್ಗಾ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಾಣೇಶ, ಇಒ ಸಂತೋಷ ಬಿರಾದರ, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗವೇಣಿ, ಶಿವಶಂಕರ್ ಕರಡಕಲ್, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಸಂಗಮೇಶ ಗುತ್ತಿ, ಸುದೀರ್ ಕೊರ್ಲಳ್ಳಿ, ಮುಖಂಡರಾದ ಸತ್ಯನಾರಾಯಣ ಹರಪನಹಳ್ಳಿ, ಖಾಸಿಂಸಾಬ ತಳಕಲ್, ಹನುಮಂತಗೌಡ ಚೆಂಡೂರ್, ಮಂಜುನಾಥ ಕಡೇಮನಿ, ರಾಮಣ್ಣ ಬಂಕದಮನಿ, ವೀರಯ್ಯ ತೊಂಟದಾರ್ಯಮಠ, ಗಗನ್ ನೋಟಗಾರ, ಸಿರಾಜ್ ಕರಮುಡಿ ಸೇರಿದಂತೆ ಇತರರು ಇದ್ದರು.