Breaking News

ಜೈನ ಮಹಿಳಾ ಮಂಡಳದಿಂದರೈಲ್ವೆ ನಿಲ್ದಾಣದಲ್ಲಿ ಬೆಂಚುಗಳು ಮತ್ತು ವಾಟರ್ ಕೂಲರ್ ಅಳವಡಿಕೆ


Jain Mahila Mandal installs benches and water coolers at railway station

ಜಾಹೀರಾತು

ಬೆಂಗಳೂರು; ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ಮಾರ್ಗದರ್ಶನದಲ್ಲಿ ವಿಜಯನಗರ ಶ್ರೀ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಳದಿಂದ ನಗರ ರೈಲು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಬೆಂಚುಗಳು ಮತ್ತು ವಾಟರ್ ಕೂಲರ್‌ಗಳನ್ನು ಅನಾವರಣಗೊಳಿಸಲಾಯಿತು.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ರಾಷ್ಟ್ರೀಯ ಅಧ್ಯಕ್ಷರಾದ ಸರಿತಾ ಡಾಗಾ ಮತ್ತು ಪ್ರಧಾನ ಕಾರ್ಯದರ್ಶಿ ನೀತು ಓಸ್ಟ್ವಾಲ್ ಸಾರಥ್ಯದಲ್ಲಿ ಈ ಜನೋಪಯೋಗಿ ಸೇವೆ ಕೈಗೊಳ್ಳಲಾಗಿತ್ತು.

ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ಕಮರ್ಷಿಯಲ್ ವಿಭಾಗದ ವ್ಯವಸ್ಥಾಪಕರಾದ ನಿವೇದಿತ ಎಸ್. ಬಾಲರೆಡ್ಡಿಯವರ್, ಸ್ಟೇಷನ್  ವ್ಯವಸ್ಥಾಪಕರಾದ ಆರ್.ಕೆ. ರಮೇಶ್, ಕಮರ್ಷಿಯಲ್ ಇನ್ಸ್ ಪೆಕ್ಟರ್ ಸುಮಂತ್ ಕುಮಾರರೆಡ್ಡಿ  ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸಂಚಾಲಕಿ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ವೀಣಾ ಬೈದ್, ರಾಷ್ಟ್ರೀಯ ಸಲಹೆಗಾರ್ತಿ ಮತ್ತು ಕರ್ನಾಟಕ ಉಸ್ತುವಾರಿ ಲತಾ ಜೈನ್, ವಿಜಯನಗರ ಸಭಾ ಅಧ್ಯಕ್ಷ ಮಂಗಲಜಿ ಕೋಚಾರ್, ಟಿಇಯುಪಿ ಅಧ್ಯಕ್ಷ ಕಮಲೇಶ್ಜಿ, ವಿಜಯನಗರ  ಶ್ರೀ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಸಂಘದ ಅಧ್ಯಕ್ಷರಾದ ಮಂಜು ಗಾಡಿಯಾ, ಸಂಯೋಜಕಿ ಬರ್ಖಾ ಪುಗಾಲಿಯಾ, ಸಚಿವೆ ದೀಪಿಕಾ ಗೋಖ್ರು ಮತ್ತಿತರರು ಉಪಸ್ಥಿತರಿದ್ದರು.

ಅಖಿಲ ಭಾರತ ಥೇರಾಪಂತ್ ಮಹಿಳಾ ಮಂಡಲ್ ನಡಿ ದೇಶದ ಎಲ್ಲಾ ಶಾಖೆಗಳ ಮೂಲಕ ಕೇಂದ್ರ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯನ್ನು ಸರ್ಮಪಿಸುವ ಕಾರ್ಯಕ್ರಮ ನಡೆಸುತ್ತಿದೆ.

ದೇಶದಾದ್ಯಂತ ಕಳೆದ 50 ವರ್ಷಗಳಿಂದ ನಿರಂತರ ಮತ್ತು ಕ್ರಿಯಾಶೀಲವಾಗಿ ಸಾರ್ವಜನಿಕ ಸೇವೆ ಮಾಡುತ್ತಿದೆ. 75 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೇರಾ ಪಂಥ್ ಮಹಾ ಗುರುಗಳಾದ ಮಹಾಶ್ರಮಣ್ ಜೀ ಮಾರ್ಗದರ್ಶನದಲ್ಲಿ ಜನೋಪಯೋಗಿ ಕೆಲಸಗಳು ಸಾಗುತ್ತಿವೆ. ಹಿಂದೆ ಜನಪರ ಆಂದೋಲನಗಳಾದ ಕನ್ಯಾ ಸುರಕ್ಷಾ, ಭೇಟಿ ಬಚಾವೋ ಭೇಟಿ ಫಡಾವೋ, ಭ್ರೂಣಹತ್ಯೆ ತಡೆಗಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

About Mallikarjun

Check Also

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಟೈ, ಬೆಲ್ಟ್, ಐಡಿ ಕಾರ್ಡ್, ಪೋಟೊ ಉಚಿತ ವಿತರಣೆ

Free distribution of ties, belts, ID cards, and photographs to government school students with the …

Leave a Reply

Your email address will not be published. Required fields are marked *