Little Hearts School’s Maitri Siddapur and Khushi Taluka toppers who got extra marks in revaluation

ಗಂಗಾವತಿ : 2024-25 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೃಪ್ತಿ ಪಡದ ಲಿಟಲ್ ಹಾರ್ಟ್ ಸ್ಕೂಲ್ ನ ಹಲವಾರು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮೌಲ್ಯಮಾಪನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮೈತ್ರಿ ಸಿದ್ಧಾಪುರ ಹೆಚ್ಚುವರಿ ಎರಡು ಅಂಕಗಳನ್ನು ಪಡೆಯುವುದರ ಮುಖಾಂತರ 625ಕ್ಕೆ 613 ಅಂಕಗಳನ್ನು ಪಡೆದು ಗಂಗಾವತಿ ತಾಲೂಕ ಅನುದಾನ ರಹಿತ ಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ, ಕುಮಾರಿ ಖುಷಿ ಹೆಚ್ಚುವರಿ ಎರಡು ಅಂಕಗಳನ್ನು ಪಡೆದು 625ಕ್ಕೆ 612 ಅಂಕಗಳನ್ನು ಪಡೆದು ತಾಲೂಕಿಗೆ 2ನೇ ಸ್ಥಾನವನ್ನು ಪಡೆದಿರುತ್ತಾಳೆ.
ಕುಮಾರ್ ಸಾಕೇತ್ ಆಲಂಪಲ್ಲಿ ಹೆಚ್ಚುವರಿ 9 ಅಂಕಗಳನ್ನು ಪಡೆದು 625ಕ್ಕೆ 602 ಅಂಕಗಳನ್ನು ಪಡೆದಿರುತ್ತಾನೆ. ಕುಮಾರಿ ದಿವ್ಯ 21 ಹೆಚ್ಚುವರಿ ಅಂಕಗಳನ್ನು ಪಡೆದು 625ಕ್ಕೆ 598 ಅಂಕಗಳನ್ನು ಪಡೆದಿರುತ್ತಾಳೆ. ಕುಮಾರಿ ದಿವ್ಯಶ್ರೀ ಪೋಲ್ಕಲ್ 8 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 570 ಅಂಕಗಳನ್ನು ಪಡೆದಿರುತ್ತಾರೆ. ಕುಮಾರಿ ಕನ್ಯಾಮಣಿ 2 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 569 ಅಂಕಗಳನ್ನು ಪಡೆದಿರುತ್ತಾರೆ, ಕುಮಾರ ಕೆ ಅಭಿಷೇಕ್ 4 ಹೆಚ್ಚುವರಿ ಅಂಕಗಳನ್ನು ಪಡೆದು ಒಟ್ಟಾರೆ 467 ಅಂಕಗಳನ್ನು ಪಡೆದಿರುತ್ತಾರೆ. ಕುಮಾರ ಸುಹಾಸ ಐಲಿ 3 ಹೆಚ್ಚುವರಿ ಅಂಕಗಳನ್ನು ಪಡೆದು ಒಟ್ಟಾರೆ 577 ಅಂಕಗಳನ್ನು ಪಡೆದಿರುತ್ತಾರೆ. ಹಾಗೂ ಕುಮಾರಿ ಸುಹಾನಿ ಅಮಿನ್ 11 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾಳೆ ಎಂದು ತಿಳಿಸಲು ಸಂತೋಷವೆನಿಸುತ್ತದೆ.
ಗಂಗಾವತಿ ತಾಲೂಕಾ ಅನುದಾನರಹಿತ ಶಾಲೆಗಳ ಫಲಿತಾಂಶದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕುಮಾರಿ ಮೈತ್ರಿ ಸಿದ್ದಾಪುರ ಹಾಗೂ ಕುಮಾರಿ ಖುಷಿ ಯನ್ನು ಹಾಗೂ ಹೆಚ್ಚುವರಿ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ. ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಿಯಾ ಕುಮಾರಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.