Breaking News

ಸಮಾಜದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವೆ:ಶಿವಕುಮಾರ

I will work honestly for the development of society: Shivakumar

ಜಾಹೀರಾತು


ಕೊಪ್ಪಳ, ಮೇ ೨೨ : ಸಮಾಜವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಹಿರಿಯರ ಹಾಗೂ ಮುಖಂಡರ ಸಲಹೆ ಹಾಗೂ ಸಹಕಾರ ಪಡೆದು ಸಮಾಜದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವದಾಗಿ ಜಿಲ್ಲಾ ಹಡಪದ ಅಪ್ಪಣ್ಣ ಮತ್ತು ಕ್ಷಾರಿಕ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಶಿವಕುಮಾರ ಕಾಶಿನಾಥ ಕಾರಟಗಿ ಹೇಳಿದರು.
ಅವರಿಂದು ಇಲ್ಲಿನ ಬಸವಪ್ರೀಯ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಮಾಜವನ್ನು ತಾಲೂಕು, ಹೋಬಳಿ ಮತ್ತು ಗ್ರಾಮೀಣ ಮಟ್ಟದಲ್ಲಿ ಪದಾಧಿಕಾರಿಗಳ ರಚನೆ ಮೂಲಕ ಸಂಘಟನಾತ್ಮಕವಾಗಿ ಸಮಾಜವನ್ನು ಗಟ್ಟಿಗೊಳಿಸಲಾಗುವುದು ಎಂದರು. ನಂತರ ಸಂಘದ ಗೌರವಾಧ್ಯಕ್ಷ ಮಂಜುನಾಥ ಹಂದ್ರಾಳ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರವು ಅತ್ಯವಶ್ಯವಾಗಿದೆ. ಸಮಾಜದ ಸಂಘಟನೆಗೆ ಪ್ರತಿಯೊಬ್ಬರು ಸಮಯ ಮೀಸಲಿರಿಸಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಆಗಾಗ ನೀಡಬೇಕೆಂದರು.
ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಚಂದ್ರಪ್ಪ ಇಟಗಿ, ಅಮಾತೆಪ್ಪ ನಾಗಪ್ಪ ವಣಗೇರಿ. ಸಂತೋಷ ಕೊಟ್ರಪ್ಪ ಕುಕನೂರು ಪ್ರಧಾನ ಕಾರ್ಯದರ್ಶಿಯಾಗಿ ದ್ಯಾಮಣ್ಣಮಾದಿನೂರ. ಖಜಾಂಚಿ ಅಣ್ಣಪ್ಪ ಮೈಲಾರಪ್ಪ ಇಟಗಿ ಉಪಕಾರ್ಯದರ್ಶಿಯಾಗಿ ಸುರೇಶ ನಂದಿಹಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಪ್ಪ ಹೊಸಳ್ಳಿ, ಸಂತೋಷ ಮಲ್ಲಾಪೂರ, ಈರಣ್ಣ ಬಳೂಟಗಿ, ಮುತ್ತಪ್ಪ ಬೆಣಕಲ್ಲ್ , ಗಣೇಶ ಹಂಚಿನಾಳ. ದೇವರಾಜ ಬೇವೂರು. ಸಹಕಾರ್ಯದರ್ಶಿಯಾಗಿ ವಸಂತ ಹಿರೇಮ್ಯೋಗೇರಿ, ಚನ್ನಬಸಪ್ಪ ಕಾರಟಗಿಯವರನ್ನು ಆಯ್ಕೆಗೊಳಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಸಪ್ಪ ಹಲಗೇರಿ, ನಿಂಗಪ್ಪ ಹಂದ್ರಾಳ. ಮಹಾದೇವಪ್ಪ ಕಾರಟಗಿ, ಏಳು ತಾಲ್ಲೂಕುಗಳ ಅಧ್ಯಕ್ಷರು. ಉಪಾಧ್ಯಕ್ಷರು. ಸಹಕಾರ ಸಂಘದ ಅಧ್ಯಕ್ಷರಾದ ಮುತ್ತಪ್ಪ ಮಾದಿನೂರ, ಉಪಾಧ್ಯಕ್ಷ ನಾಗರಾಜ್ ನರೇಗಲ್, ಶರಣಪ್ಪ ಇಟಗಿ, ಚಂದ್ರು ಜವಳಗೇರಿ ಇತರರು ಉಪಸ್ಥಿತರಿದ್ದರು.
……………

About Mallikarjun

Check Also

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಟೈ, ಬೆಲ್ಟ್, ಐಡಿ ಕಾರ್ಡ್, ಪೋಟೊ ಉಚಿತ ವಿತರಣೆ

Free distribution of ties, belts, ID cards, and photographs to government school students with the …

Leave a Reply

Your email address will not be published. Required fields are marked *