Breaking News

ಮ ಬೆಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ .

The body of an unidentified woman was found in Mt.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ: ಬಂಗಾರಪ್ಪ .ಸಿ .
ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ
ಅಪರಿಚಿತ ಮಹಿಳೆಯೊಬ್ಬಳು ಅಂತರಗಂಗೆಯ ಬಳಿಯಿರುವ ಅಣೆಕಟ್ಟು ಪ್ರದೇಶದಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ….
ಇಂದು ದಿನಾಂಕ 21. 5 2025
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಡ್ಯಾಂ ನಲ್ಲಿ 50 ರಿಂದ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ಡ್ಯಾಮ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಬುಧವಾರ ಬೆಳಗ್ಗೆ ತಿಳಿದು ಬಂದಿದೆ….
ವಿಷಯ ತಿಳಿದ ತಕ್ಷಣ
ಪೊಲೀಸರ ಬೇಟಿ : ಮಹಿಳೆಯೊಬ್ಬರು ಡ್ಯಾಮ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಸುದ್ದಿ ತಿಳಿದ ತಕ್ಷಣ ಮಲೆ ಮಹದೇಶ್ವರ ಬೆಟ್ಟದ ಇನ್ಸ್ಪೆಕ್ಟರ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೃತಪಟ್ಟ ಮಹಿಳೆಯ ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಇಡಲಾಗುವುದು ಸಂಬಂಧಪಟ್ಟವರು ಯಾರಾದರೂ ಪೋಷಕರು ಬಂದು ಶವವನ್ನು ಗುರುತಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ .
ಮೂರು ದಿನದ ಸಮಯದಲ್ಲಿ ಬರದಿದ್ದಲ್ಲಿ ಪೊಲೀಸರೇ ಮೃತಪಟ್ಟ ಮಹಿಳೆಗೆ ಚಾಮರಾಜನಗರ ಜಿಲ್ಲೆಯಲ್ಲಿನ ಶವಗಾರ ಅಥವಾ ಇನ್ನಿತರ ಸ್ಥಳದಲ್ಲಿ ಮುಕ್ತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *