12th Annual Vardanti Festival at the Gyan Ganapati Temple of the Daivajna Brahmin Samaj

ಗಂಗಾವತಿ ನಗರದ ದೈವಜ್ಞ ಬ್ರಾಹ್ಮಣ ಸಮಾಜದ ಜ್ಞಾನ ಗಣಪತಿ ದೇವಸ್ಥಾನದಲ್ಲಿ 12ನೇ ವರ್ಷದ ವರ್ದಂತಿ ಉತ್ಸವ, ಕಲಾರುದ್ದಿ ಹೋಮ, ದೈವಜ್ಞ ಸಭಾಭವನ ಹಾಗೂ ಅನ್ನಪೂರ್ಣ ಭೋಜನಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಇವರ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್, ಡಾಕ್ಟರ್ ಶಿವಾನಂದ್ ಬಾವಿಕಟ್ಟಿ, ದೈವಜ್ಞ ಸಮಾಜದ ಅಧ್ಯಕ್ಷರಾದ ಮಂಜುನಾಥ್ ವರ್ಣಿಕರ್, ಉಪಾಧ್ಯಕ್ಷರಾದ ವೆಂಕಟೇಶ್ ರಾಯ್ಕರ್, ಸಮಾಜದ ಹಿರಿಯರಾದ ಶ್ರೀಪಾದ ರಾಯ್ಕರ್, ಸುಬ್ರಹ್ಮಣ್ಯ ರಾಯ್ಕರ್, ಜಗದೀಶ್ ರೇವಣೇಕರ್, ವೆಂಕಟೇಶ್ ಕರ್ಡೆಕರ್, ರಾಜು ಪಾಲ್ಕರ್ ದೈವಜ್ಞ ಬ್ರಾಹ್ಮಣ ಸಮಾಜದ ತಾಯಂದಿರು, ಯುವಕರು, ಮುದ್ದು ಮಕ್ಕಳು ಉಪಸ್ಥಿತರಿದ್ದರು.