Breaking News

ಲಿಂಗದ ರೂಪದಲ್ಲಿ ಭಗವಂತನನ್ನು ಕಾಣಬಹುದು ,ಮಾಜಿ ಶಾಸಕಿ ಪರಿಮಳನಾಗಪ್ಪ ಅಭಿಮತ.

Former MLA Parimalanagappa believes that God can be seen in the form of a linga.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ ,ಸಿ .
ಹನೂರು :ಭೂಮಿಯ ಮೇಲಿರುವ ಪ್ರತಿಯೋಬ್ಬರು ತಾವು ಆತ್ಮ ಸ್ವರೂಪಿಯಾದ ಪರಮಾತ್ಮನನ್ನು ಯತಾರ್ಥವಾಗಿ ಅರ್ಥ ಮಾಡಿಸುವುದೇ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮೇಳದ ಉದ್ದೇಶ -ಮಾಜಿ ಶಾಸಕಿ ಪರಿಮಳ ನಾಗಪ್ಪ ಅಭಿಪ್ರಾಯ
ರಮಾಪುರ -ಜಗತ್ತಿನಲ್ಲಿ ಅನೇಕರು ಅನೇಕ ರೀತಿಯಲ್ಲಿ ಪರಮಾತ್ಮನ ಬಗ್ಗೆ ವಿಚಾರವನ್ನು ತಿಳಿಸುತ್ತಾರೆ. ಆದರೆ ಈಶ್ವರೀಯ ವಿಶ್ವವಿದ್ಯಾಲಯದವರು ಒಬ್ಬ ಪರಮಾತ್ಮನ ಯತಾರ್ಥ ಪರಿಚಯದ ಬಗ್ಗೆ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನದ ಮೂಲಕ ಅರಿವು ಮೂಡಿಸುತ್ತಿದ್ದಾರೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪರವರು ಇಂದು ಅಭಿಪ್ರಾಯ ಪಟ್ಟರು.
ಅವರು ಕೊಳ್ಳೇಗಾಲ ತಾಲ್ಲೋಕಿನ
ರಮಾಪುರ ಗ್ರಾಮದಲ್ಲಿ ಒಂದು ವಾರ ನಡೆಯುವ ಗ್ರಾಮ ದೇವತೆ ಅಕ್ಕ ಮಾರಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ, ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಚೈತನ್ಯ ದೇವಿಯರ ಪುಣ್ಯ ದರ್ಶನ, ಹಾಗೂ ಉದ್ಭವಲಿಂಗ ದರ್ಶನದ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಮೂಲೆ ಮೂಲೆಯಲ್ಲಿರುವ ದ್ವಾದಶ ಜೋತಿರ್ಲಿಂಗಳ ಮಾದರಿಯನ್ನು ಒಂದೇ ವೇದಿಕೆಯಲ್ಲಿ ಗ್ರಾಮೀಣ ಜನತೆಗೆ ಹತ್ತಿರದಿಂದ ಪುಣ್ಯ ದರ್ಶನ ಮಾಡಿಸಿ ಅವರಲ್ಲಿ ಮಾನವೀಯ ಮೌಲ್ಯಗಳ ಜಾಗೃತಿಯನ್ನು ಮೂಡಿಸುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಶಾಘ್ಲನೀಯ ಕಾರ್ಯ ಎಂದು ಪ್ರಶಂಸಿದರು. ಇಲ್ಲಿ ಸರ್ವ ಧರ್ಮದವರಿಗೂ ಒಬ್ಬನೇ ಭಗವಂತ, ಭಗವಂತ ಒಬ್ಬ ನಾಮ ಹಲವು,ಈಶ್ವರ್ ಏಕ್ ಮಹಿಮಾ ಅನೇಕ್, ಸಬ್ಕಾ ಮಾಲಿಕ್ ಏಕ ಹೈ, ಈ ಸಿದ್ದಾಂತ ಎಲ್ಲರಿಗೂ ಪೂರಕವಾಗಿದೆ ಎಂದರು
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ಇಡೀ ಜಗತ್ತಿನಲ್ಲಿ ಭಗವಂತನಿಗಿಂತ ಅತಿ ದೊಡ್ಡದಾದಂತ ಕಾರ್ಯ ಯಾರಿಂದಲೂ ಸಹ ಮಾಡಲು ಸಾಧ್ಯವಿಲ್ಲ ಈ ಪತಿತ ಜಗತ್ತನ್ನು ಪಾವನ ಜಗತ್ತು ದೈವೀ ಮೌಲ್ಯಗಳ ಜಗತ್ತನ್ನಾಗಿ ಪರಿವರ್ತಿಸಿ. ಒಂದೇ ರಾಜ್ಯ ಒಂದೇ ಭಾಷೆ ಒಬ್ಬರ ಕೈಯಲ್ಲಿ ಆಡಳಿತ ಇರುವ ರಾಜ್ಯ ಯಾವುದನ್ನು ಗಾಂಧೀಜಿಯವರು ಕನಸು ಕಂಡಿದ್ದರು ರಾಮರಾಜ್ಯ ಎಂದು ಅದನ್ನ ಬೈಬಲ್ನಲ್ಲಿ ದೇವರ ರಾಜ್ಯ ಅಥವಾ ಪ್ಯಾರಡೈಸ್ ಕುರಾನ್ ನಲ್ಲಿ ಜನ್ನತ್ ಅಥವಾ ಅಲ್ಲನ ಹೂದೋಟ ಅದನ್ನೇ ಹಿಂದುಗಳು ಸ್ವರ್ಗ ವೈಕುಂಠ ಲಕ್ಷ್ಮಿ ನಾರಾಯಣರ ರಾಜ್ಯ ಎಂದು ಕರೆಯುತ್ತಾರೆ. ಅಂತಹ ಶಾಂತಿಯ ಜಗತ್ ನಿರ್ಮಾಣದ ಕರ್ತವ್ಯವನ್ನು ಮಾಡಿದುದರ ಸ್ಮಾರಕವಾಗಿಯೇ ನಾವು ಭಾರತದ್ಯಂತ ದ್ವಾದಶ ಜ್ಯೋತಿರ್ಲಿಂಗಗಳನ್ನ ಸ್ಮಾರಕ ರೂಪದಲ್ಲಿ ಕಾಣಬಹುದಾಗಿದೆ ಅದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜನತೆಗೆ ಆಧ್ಯಾತ್ಮ ಜ್ಞಾನವನ್ನು ಚಿತ್ರಗಳ ಮೂಲಕ ಮನದಟ್ಟು ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜೀ ಆಶೀರ್ವಚನ ನೀಡಿ ಇಲ್ಲಿ ಬಂದಿರುವರೆಲ್ಲರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಜ್ಯೋತಿ ಲಿಂಗ ದರ್ಶನ ಮಾಡಿಸುವುದರ ಮೂಲಕ ಸಹಕಾರಿಗಳಾಗುತ್ತೀರಾ ಎಂದು ಶುಭ ಕೋರಿದರು.
ಈ ಓಂ ಶಾಂತಿ ಮಂಟಪದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನವ ಚೈತನ್ಯ ದುರ್ಗೆಯರ ಪುಣ್ಯ ದರ್ಶನ ಹಾಗೂ ಉದ್ಭವ ಲಿಂಗದ ದರ್ಶನ, ದ್ವಾದಶ ಜ್ಯೋರ್ತಿಲಿಂಗಗಳ ಪುಣ್ಯ ದರ್ಶನ ಚಿತ್ರ ಪಠಗಳ ಮೂಲಕ ವಿಶ್ವ ದರ್ಶನ ಪ್ರದರ್ಶನ ಮಾಡಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹನೂರು ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶ್ರೀ ಯುತ ಬಿಂದು ಅಕ್ಕನವರು. ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ, ಬಿಂದು, ಶಾಂಭವಿ, ಪುಷ್ಪ, ಸಂತೋಷ ಶ್ರೀನಿವಾಸ ಶಂಕರ ಗಿರೀಶ ನಾಗರಾಜ ಊರಿನ ಪ್ರಮುಖರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *