
ಗಂಗಾವತಿ: ಗಂಗಾವತಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ಅನರ್ಹತೆಯಿಂದ ತೆರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದಲ್ಲಿ ಸರ್ವ ಸಮಾಜಗಳ ವಿಶ್ವಾಸಗಳಿಸಿರುವ ಮತ್ತು ನಿರಂತರ ಜನರಟ್ಟಿಗೆ ಇರುವ ಸರಳ ಸಜ್ಜನಿಕೆಯ ಅಪರೂಪದ ಅನುಭವಿ ಹಿರಿಯ ರಾಜಕಾರಣಿ ಹಾಗು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರು ವರೀಷ್ಟರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಆರ್.ಶ್ರೀನಾಥ್ ಅವರ ಕುಟುಂಬದ ಸೇವೆ ದೊಡ್ಡದಿದ್ದು , ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ನೆಲೆ ನಿಲ್ಲಲು ಇವರ ತಂದೆ ಮಾಜಿ ಸಂಸದ ಹೆಚ್.ಜಿ.ರಾಮುಲು ಅವರ ಕೊಡುಗೆ ತ್ಯಾಗ ದೊಡ್ಡದಿದೆ ಹೈಕಮಾಂಡ್ ಇದನ್ನು ಪರಿಗಣಿಸಬೇಕು, ಮಾಜಿ ಪ್ರಧಾನಿಗಳಾದ ಇಂದಿರಾಗಾAದಿ, ರಾಜೀವ್‌ಗಾಂಧಿ ಇವರಿಗೆ ಪರಮಾಪ್ತರಾಗಿದ್ದ ಇವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದ ಕಾಲದಲ್ಲಿ ಆರ್ಥಿಕ ಶಕ್ತಿ ತುಂಬಿದವರು, ಕುಟುಂಬದ ಸೇವೆಯನ್ನು ಪರಿಗಣಿಸಬೇಕು ಅಲ್ಲದೆ ಶ್ರೀನಾಥ್ ಅವರು ಕಳೆದ ೩೫ ವರ್ಷಗಳಿಂದಲೂ ರಾಜಕಾರಣದಲಿದ್ದು, ಅಧಿಕಾರದಲ್ಲಿಲ್ಲದಿದ್ದರೂ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದು ರಾಜ್ಯ ನಾಯಕರೂ ಗಮನಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ೨೦ ವರ್ಷಗಳಿಂದಲೂ ಇಲ್ಲಿನ ಹೇಮಗುಡ್ಡದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ದಸರಾ ಉತ್ಸವ, ಸಾಮೂಹಿಕ ವಿವಾಹ, ಒಂಭತ್ತು ದಿನ ಅನ್ನಸಂತರ್ಪಣೆ, ಪ್ರತಿ ವರ್ಷ ಗವಿ ಮಠಕ್ಕೆ ೫ ಲಕ್ಷ ರು ದೇಣಿಗೆ, ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ವಿಶೇಷ ಸೇವೆ, ದುರ್ಬಲರು ಅಸಕ್ತರಿಗೆ ಅನ್ಯಾಯವಾದಲ್ಲಿ ಬಹಿರಂಗವಾಗಿಯೇ ಪ್ರತಿಭಟನೆಗೆ ನಿಲ್ಲುತ್ತಾರೆ, ಕೇಂದ್ರ ಸರಕಾರ ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾದಾಗ ಅದರ ಅಪಾಯ ಅರಿತ ಅವರು, ರೈತರು ಸೇರಿದಂತೆ ಸಾರ್ವಜನಿಕರೊಂದಿಗೆ ಬೃಹತ್ ಹೋರಾಟದ ಮೂಲಕ ಪ್ರತಿಭಟಿಸಿ ಕೇಂದ್ರ ಸರಕಾರದ ಯೋಜನೆ ಸ್ಥಗಿತಗೊಳ್ಳುವಂತೆ ಮಾಡಿದರು. ಈ ಭಾಗದ ಬಡವರ, ರೈತರ, ಶೋಷಿತರ, ಹಿಂದುಳಿದ, ಮೇಲ್ವರ್ಗದ ಧ್ವನಿಯಾಗಿ ಅತ್ಯಂತ ಕಾಳಜಿ ಪೂರ್ವಕವಾಗಿ ಸಮಾಜ ಸೇವೆ ಮಾಡುತ್ತಿದ್ದು, ಜನರ ಕಷ್ಟಗಳಿಗೆ ಮಿಡಿಯುತ್ತಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಸಮಾಜದೊಟ್ಟಿಗೆ ಬೆರೆತು ಬದುಕುತ್ತಿರುವ ಶ್ರೀನಾಥ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಮುಷ್ಟೂರ್ ಒತ್ತಾಯಿಸಿದ್ದಾರೆ.