Breaking News

ವಡ್ಡರಹಟ್ಟಿ & ಆಗೋಲಿ ಗ್ರಾ.ಪಂ.ಗಳಲ್ಲಿ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮ

ನರೇಗಾ ಯೋಜನೆಯ ಸೌಲಭ್ಯ ಪಡೆಯಿರಿ ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಸಲಹೆ

ಜಾಹೀರಾತು

Let’s Work and Women Empowerment Campaign Program in Vaddarahatti & Agoli Gram Panchayats

ಗಂಗಾವತಿ  : ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿಯೇ ಕೂಲಿ ಕೆಲಸ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಎಲ್ಲರೂ ಯೊಜನೆ ಲಾಭ ಪಡೆದುಕೊಳ್ಳುವಂತೆ ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರು ಸಲಹೆ ನೀಡಿದರು.

ತಾಲೂಕಿನ ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಡ್ಡರಹಟ್ಟಿ & ಆಗೋಲಿ ಗ್ರಾ.ಪಂ.ಗಳ ಕೂಲಿಕಾರರಿಗಾಗಿ ನರೇಗಾ ಯೋಜನೆಯ ಐಇಸಿ ಚಟುವಟಿಯಡಿ ಸೋಮವಾರ ಆಯೋಜಿಸಿದ್ದ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ಶುರುವಾಗಿದ್ದು, ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಗ್ರಾಪಂಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು. ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬಗಳು ಮತ್ತು ದುರ್ಬಲ ವರ್ಗಗಳ ಕುಟುಂಬಗಳ ಗುರುತಿಸುವುದು, ಮಹಿಳೆಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶ ಈ ಅಭಿಯಾನ ಹೊಂದಲಾಗಿದೆ ಎಂದರು.
ಸ್ತ್ರೀ ಚೇತನ ಅಭಿಯಾನದಡಿ ಮಹಿಳೆಯರಿಗಿರುವ ಸೌಲಭ್ಯಗಳು ಹಾಗೂ ನರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಲ್ಲರೂ ಅಭಿಯಾನದ ಅನುಕೂಲ ಪಡೆಯಬೇಕು ಎಂದರು.

ಗ್ರಾ.ಪಂ. ಸಿಬ್ಬಂದಿಗಳು ದಿನಕ್ಕೆ ಎರಡು ಬಾರಿ ಎನ್ ಎಂಎಂಎಸ್ ಆ್ಯಪ್ ಹಾಜರಿ ಕಡ್ಡಾಯವಾಗಿ ಹಾಗೂ ಪಾರದರ್ಶಕವಾಗಿ ಹಾಕಬೇಕು ಎಂದು ಸೂಚಿಸಿದರು.

ಈ ವೇಳೆ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ಕೂಲಿಕಾರರ ಕೆಲಸದ ಪ್ರಮಾಣದ ಮೇಲೆ ಕೂಲಿ ನಿಗದಿಯಾಗುತ್ತದೆ. ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ಇದರಿಂದ ಕೆರೆಗಳ ಅಭಿವೃದ್ಧಿ ಆಗುತ್ತವೆ ಎಂದರು. ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು ನರೇಗಾ ಯೋಜನೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಆಗೋಲಿ ಗ್ರಾಪಂ ಅಧ್ಯಕ್ಷರಾದ ಅಮಾಜಪ್ಪ, ಪಿಡಿಓ ಕಾಶೀನಾಥ ಹಂಚಿನಾಳ, ವಡ್ಡರಹಟ್ಟಿ ಗ್ರಾಪಂ ಸದಸ್ಯರಾದ ಭರತ್ ಕುಮಾರ್, ಮೇರಾಜ್ ದಳಪತಿ, ಹೊನ್ನುರಬೀ, ವಿವಿಧ ಗ್ರಾಪಂ ನರೇಗಾ ತಾಂತ್ರಿಕ ಸಹಾಯಕರಾದ ಕೊಟ್ರೇಶ ಜವಳಿ, ಉದಯಕುಮಾರ್, ಶರಣಯ್ಯ, ಗಾದಿಲಿಂಗಪ್ಪ, ಗ್ರಾಪಂ ಸಿಬ್ಬಂದಿಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು, ಕಾಯಕಬಂಧುಗಳು ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.