Breaking News

ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿಮೇ14ರಂದು ಶಿಕ್ಷಣ,ಆರೋಗ್ಯ, ಉದ್ಯೋಗ,ಬೆಲೆ ಏರಿಕೆ ವಿರುದ್ಧ ಜನ ಹೋರಾಟ.

People’s struggle on May 14th under the leadership of the SUCI Communist Party against education, health, employment, and price hikes.

ಜಾಹೀರಾತು

ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ  ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಧ್ಯೆ ಮೇ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಜನ ಹೋರಾಟದ ವಿಚಾರಗಳನ್ನು ಪ್ರಚಾರ ಮಾಡಲಾಯಿತು.
ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಮುಖಂಡರದ ಶರಣು ಪಾಟೀಲ್ ಮಾತನಾಡಿ  ಗ್ರಾಮೀಣ ಉದ್ಯೋಗ ರಾತ್ರಿಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಕೃಷಿ ಕೂಲಿಕಾರಗೆ ಕೂಲಿಯನ್ನು ರೂ. 600 ಕ್ಕೆ ಮಾನವ ದಿನಗಳನ್ನು  200ಕ್ಕೆ ಹೆಚ್ಚಿಸಲು ದಿನಾಂಕ 14 ರಂದು ಬೃಹತ್ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯು ಹಲವಾರು ಜನ ಕುಟುಂಬಕ್ಕೆ ಆಸರೆಯಾಗಿದೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಉದ್ಯೋಗ ಖಾತ್ರಿ 370 ರು ನಿಗದಿಯಾಗಿದ್ದರು ಜೀವನ ನಡೆಸಲು ಸಾಕಾಗುತ್ತಿಲ್ಲ. ಸರ್ಕಾರ ಕೂಡಲೇ ಕೂಲಿಯನ್ನು 600 ಕ್ಕೆ ಹೆಚ್ಚಿಸಬೇಕು. ಮತ್ತು ನೂರು ದಿನ ಮಾನವ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕೆಂದು ಇದೇ ಮೇ 14 ರಂದು ಬೃಹತ್ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಪ್ರತಿಯೊಬ್ಬರೂ ಕೂಡ ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಮಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೇಟ್ ಆಗಿರತಕ್ಕಂತ. ಸೋಮವ್ವ, ಗಂಗ್ಮಾಳವ, ಕಾರ್ಮಿಕರಾದ ನಾಗಪ್ಪ ತೋಟದ, ನಿಂಗಪ್ಪ, ಗ್ಯಾನಪ್ಪ, ನಾಗರಾಜ್, ಸೋಮಪ್ಪ, ಮಾರ್ತಪ್ಪ, ಹನುಮಪ್ಪ, ಶಿವಪ್ಪ, ಹನುಮವ್ವ, ಕರಿಯಪ್ಪ, ಈಶಪ್ಪ. ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.