Gangavathi Rotary celebrates World Mother’s Day and awards talent

*ತಾಯಿಯ ಮಾತೃತ್ವ, ಅವರ ತ್ಯಾಗ, ಅವರ ಪ್ರೀತಿ ಮತ್ತು ಕಾಳಜಿಯ ಗೌರವಾರ್ಥವಾಗಿ ತಾಯಂದಿರ ದಿನವನ್ನು ವಿಶ್ವದಾದ್ಯಂತ ಮೇ ತಿಂಗಳು 2ನೇ ಭಾನುವಾರ ಆಚರಿಸಲಾಗುತ್ತದೆ* *ಎಂದು ಗಂಗಾವತಿ ಸಂಸ್ಥೆಯ ಅಧ್ಯಕ್ಷರಾದ ಟಿ ಆಂಜನೇಯ ರವರು ಇಂದು* *ಜಯನಗರದ ಎಂ. ಗುರುರಾಜ ಇವರು ನಿವಾಸದಲ್ಲಿ ತಾಯಿಂದರಾದ ಶ್ರೀಮತಿ ಶಕುಂತಲಮ್ಮ ವಿಠ್ಠಲ್ ಶೆಟ್ಟಿ*
ಇವರನ್ನು ಸನ್ಮಾನಿಸಿ ಮಾತನಾಡಿದರು
ಅಮ್ಮ ಎನ್ನುವ ಎರಡು ಅಕ್ಷರಗಳಲ್ಲಿ ವಾತ್ಸಲ್ಯ, ಪ್ರೀತಿ ಇದೆ. ಮಮತೆಯ ಅನುಬಂಧ ಇದೆ .ತ್ಯಾಗದ ಪ್ರತಿರೂಪ ಇದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಚ್.ಆರ್.ಸರೋಜಮ್ಮಪ್ರೌಢ ಶಾಲಾ ವಿದ್ಯಾರ್ಥಿ ಕೀರ್ತಿ ರಾಯ್ಕರ್ ಅವರನ್ನು ರೋಟರಿ ಸಂಸ್ಥೆ ಪರವಾಗಿ ಸನ್ಮಾನಿಸಿ ಅವರ ಮುಂದಿನ ಭವಿಷ್ಯದ ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದರು
ವಿಶ್ವ ತಾಯಂದಿರ ಕಾರ್ಯಕ್ರಮ ಕುರಿತು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀರಂಗ ದರೋಜಿ, ಸದಾನಂದ ಶೇಟ್ , ಎ.ಜಗದೀಶ, ಎಂ .ಗುರುರಾಜ ಶ್ರೇಷ್ಠಿ, ಮತ್ತು ಪ್ರಾಚಾರ್ಯರಾದ ಟಿ.ಸಿ. ಶಾಂತಪ್ಪ ರವರು ಮಾತನಾಡಿದರು
ತಾಯಿಂದರಾದ ಶ್ರೀಮತಿ ಶಕುಂತಲಮ್ಮ ವಿಠ್ಠಲ್ ಶ್ರೇಷ್ಠಿ ಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರೋಟರಿ ಇನ್ನೂ ಇಂತಹ ಹಲವು ಸೇವೆಗಳ ಜೊತೆ,ಹಿರಿಯರಿಗೆ ಗೌರವ, ಸಹಾಯ, ಸಹಕಾರ ನೀಡಿ ಜನಮನ್ನಣೆ ಗಳಿಸಲು ಶುಭ ಹಾರೈಸಿದರು
ಕುಮಾರಿ ಕೀರ್ತಿ ರಾಯ್ಕರ್ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾದ ರೋಟರಿ ನನಗೆ ಸನ್ಮಾನಿಸಿ, ಪ್ರೋತ್ಸಾಹ ನೀಡಿ ತನು, ಮನ ,ಧನ ಸಹಾಯ ನೀಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಪ್ರಕಾಶ್ ಛೋಪ್ರಾ, ದರೋಜಿ ಶ್ರೀರಂಗ ,ಟಿ. ಸಿ. ಶಾಂತಪ್ಪ ,ಎಂ ಗುರುರಾಜ, ಎ.ಜಗದೀಶ ,ಶ್ರೀಧರ್ ನಾಯಕ್, ದಿಲೀಪ್ ಮೋತಾ,,ರಾಘವೇಂದ್ರ ರಾಯಚೂರು, ಸದಾನಂದ ಶೇಟ್,ಸುರೇಶ್ ಸೋಲಂಕಿ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು