Gangavathi MLA Gali Janardhana Reddy sentenced to seven years in prison by CBI special court

ಬೆಂಗಳೂರು,ಮೇ.06 : ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ಆದೇಶ, ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ ಎದುರಾಗಿದೆ. ಮೈನಿಂಗ್ ಕೇಸ್‌ನಲ್ಲಿ ರೆಡ್ಡಿ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್, 7 ವರ್ಷಸಿಬಿಐ ವಿಶೇಷ ಕೋರ್ಟ್. ಈಗ ರೆಡ್ಡಿಗೆ ಶಾಸಕ ಸ್ಥಾನದಿಂದ ಅನರ್ಹವಾಗುವ ಭೀತಿ ಎದುರಾಗಿದೆ.
ದೇಶಾದ್ಯಂತ ಸಂಚಲನ ಸೃಷ್ಟಿ ಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಗಂಗಾವತಿ ಕ್ಷೇತ್ರದಿಂದ ಗೆದ್ದಿದ್ದ ಜನಾರ್ದನ ರೆಡ್ಡಿ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ 2 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾದರೆ ಅನರ್ಹ ಸಾಧ್ಯತೆಯಿದೆ. 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲುವಂತಿಲ್ಲ. ಅಲ್ಲದೇ, ಸದ್ಯದ ಶಾಸಕ ಸ್ಥಾನ ಸಹ ಅನರ್ಹವಾಗಬಹುದು. ಇದೆಲ್ಲವೂ ಸಿಬಿಐ ಕೋರ್ಟ್‌ನ ಆದೇಶ ಜಾರಿಯಾದರೆ ಮಾತ್ರ ಸಾಧ್ಯ. ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರೆ ಯಾವುದೇ ತೊಂದರೆಯಿಲ್ಲ.
1951 ರ ಪ್ರಜಾಪ್ರತಿನಿಧಿ ಕಲಂ 8(3) ಅಡಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹರಾಗ್ತಾರೆ. ಅಲ್ಲದೇ, ಮುಂದಿನ 6 ವರ್ಷಗಳ ತನಕ ಚುನಾವಣೆಗೆ ರ್ಸ್ಪಧಿ ಸುವಂತಿಲ್ಲ. 3 ತಿಂಗಳ ಒಳಗೆ ಕೋರ್ಟ್ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದೆ. ಅಲ್ಲಿ ಅರ್ಜಿ ಪುರಸ್ಕರಿಸಿದರೆ ಶಾಸಕ ಸ್ಥಾನ ಅನರ್ಹತ್ವಕ್ಕೆ ತಡೆ ಬೀಳಲಿದೆ.
ಓಬಳಾಪುರಂ ಮೈನಿಂಗ್ ಕಂಪನಿ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. 2008 ರಿಂದ 2013 ರ ಅವಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿತ್ತು.
ಜನಾರ್ಧನ ರೆಡ್ಡಿ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ, ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.