Jihadists with violent mindset should be severely punished: Jagadish Soodi

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು ಬೆಂಗಳೂರು ಮತ್ತು ಮಲೆನಾಡು ಭಾಗದಲ್ಲಿ ಕಾನೂನು ಸುವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆದಿದೆ. ಪೊಲೀಸ್ ಇಲಾಖೆಯ ವೈಫಲ್ಯವೂ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಭಾಜಪ ಮುಖಂಡ ಜಗದೀಶ ಸೂಡಿ ಹೇಳಿದರು.
ಶುಕ್ರವಾರದಂದು ಸಾಯಂಕಾಲ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಅವರು ದೇಶದ ಗಡಿಯಲ್ಲಿ ಉಗ್ರರ ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡುತ್ತಿದ್ದಾರೆ ರಾಜ್ಯದ ಮಂಗಳೂರಲ್ಲಿ ಹಿಂದೂ ಯುವಕರನ್ನು ಕೊಲೆ ಮಾಡಲಾಗುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಕಡೆ ಆರೋಪ ಮಾಡುವ ಸಿದ್ದರಾಮಯ್ಯ ಮತ್ತು ಸಚಿವರು ಪ್ರವೀಣ ನೆಟ್ಟಾರು ಕೊಲೆ ಸೇರಿದಂತೆ ಯಾವ ಅರೋಪಿಗಳಿಗೆ ಶಿಕ್ಷೆಗೆ ಒಳಪಟ್ಟಿದ್ದಾರೆ ಎಂಬುದುನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಧರ್ಮ ಯಾವುದೇ ಇರಲಿ ಕೊಲೆ ಮಾತ್ರ ಮಾಡಬಾರದು ಒಂದು ಭಾರಿ ಹೋದ ಜೀವ ಮತ್ತೆ ಬಾರದು, ಉಗ್ರ ಮನಸ್ಥಿತಿಯ ಯಾವುದೇ ಧರ್ಮದ ಯುವಕರು ಆದ್ರೆ ಶಿಕ್ಷೆಯಾಗಬೇಕು, ಉಗ್ರ ಮನಸ್ಥಿತಿಯ ಬದಲಾಗಬೇಕು ಎಂದು ಹೇಳಿದರು.
ನಂತರದಲ್ಲಿ ರಾಜು ದ್ಯಾಂಪೂರ ಹಿಂದೂ ಯುವಕರ ಕೊಲೆ ಖಂಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಭಾಜಪ ಮಂಡಲ ಅಧ್ಯಕ್ಷರಾದ ಮಾರುತಿ ಹೊಸಮನಿ, ಬಸವರಾಜ ಹಾಳಕೇರಿ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಕರಬಸಯ್ಯ ಬಿನ್ನಾಳ, ಮಲ್ಲಿಕಾರ್ಜುನ್ ಚೌದ್ರಿ, ಶಿವರಾಜಗೌಡ ಯಲ್ಲಪಗೌಡ್ರು, ಕನಕಪ್ಪ ಬ್ಯಾಡರ್, ಮಂಜುನಾಥ ಮಾಲಗಿತ್ತಿ, ರಾಜು ದ್ಯಾಂಪೂರ., ವಿನಾಯಕ ಸರಗಣಚಾರಿ, ವಿರೇಶ ಸಬರದ ಸೇರಿದಂತೆ ಇತರ ಹಿಂದೂ ಕಾರ್ಯಕರ್ತರು ಇದ್ದರು.