Food distribution on the occasion of the birth anniversary of N. Muthapparai, the founder president of Jayakarnataka Sangathan

ಗಂಗಾವತಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ದಿ|| ಎನ್.ಮುತ್ತಪ್ಪ ರೈ ಅವರ ಜನ್ಮದಿನದ ಅಂಗವಾಗಿ ನಗರದ ಕಂಪ್ಲಿ ರಸ್ತೆಯಲ್ಲಿರುವ ನವಜೀವನ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಬಳ್ಳಾರಿ ರಾಮಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಮ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎನ್. ಮುತ್ತಪ್ಪ ರೈ ಕನ್ನಡ ನಾಡು-ನುಡಿಗಾಗಿ, ಸಂಸ್ಕೃತಿ, ಪರಂಪರೆಗಾಗಿ, ಬಡವರ ಧ್ವನಿಯಾಗಿ, ಅಶಕ್ತರ ಪರವಾಗಿ, ಧೀನ ದಲಿತರ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಇಂದು ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರಸೂಲ್‌ಸಾಬ ದಾಸನಾಳ, ಸಂಘಟನೆಯ ಪದಾಧಿಕಾರಿಗಳಾದ ಆಟೋ ಜಯಣ್ಣ, ಯೇಸು, ಆನಂದ, ತವರಪ್ಪ, ಕಾಶೀಮಸಾಬ್, ಶಾಮೀದಸಾಬ್, ಅಟಲ್‌ಸಾಬ್, ದೇವೆಂದ್ರಗೌಡ, ದುರುಗೇಶ, ಮದ್ದಾನೆಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.