Breaking News

ಮಂಗಳೂರಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

Cultural leader Jagajyoti Vishwaguru Basavanna’s birth anniversary celebrated in Mangalore

ಜಾಹೀರಾತು
Screenshot 2025 04 30 19 56 51 78 6012fa4d4ddec268fc5c7112cbb265e7


ಕೊಪ್ಪಳ-30 ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಸರ್ಕಲ್ ನಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ವಿಶ್ವಗುರು ಬಸವಣ್ಣನವರ 920ನೇ ಜಯಂತಿ ಅವರ ಭಾವಚಿತ್ರಕ್ಕೆ ವೇದಮೂರ್ತಿ ಶ್ರೀ ರೇವಣಸಿದ್ದಯ್ಯ ಅರಳಲೆಹಿರೇಮಠ ಪೂಜ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ರವೀಂದ್ರನಾಥ ಕೊಟ್ರಪ್ಪ ತೋಟದ ಪತ್ರಕರ್ತರು ಮಾತನಾಡಿ ವಿಶ್ವಗುರು ಬಸವಣ್ಣ ಅವರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕು, ಅಸಮಾನತೆ, ಭೇದಭಾವ, ಅಸ್ಪೃಶ್ಯತೆಯನ್ನು ವಿರೋಧಿಸಿ ಸಾಮಾಜಿಕ ಸುಧಾರಣೆಗಳನ್ನು ಸಾಕಾರಗೊಳಿಸಿದ ಕ್ರಾಂತಿಪುರುಷ ಬಸವಣ್ಣ ಎಂದು ಅವರು ಹೇಳಿದರು. ವಚನ ಚಳವಳಿಯ ಅನುಭವಿ ಸಂತ ಅಲ್ಲಮ ಪ್ರಭುದೇವರು ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಕರೆದಿದ್ದಾರೆ ಈ ಪದ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಹೋನ್ನತ ರೂಪಕವಾಗಿದೆ ಎಂದು ಹೇಳಿದರು ಬಸವಣ್ಣನವರು 12ನೇ ಶತಮಾನದಲ್ಲಿ ಕೈಗೊಂಡ ಕಾರ್ಯವಿಧಾನ ಇಂದಿಗೂ ನಿಬ್ಬೆರಗುಗೊಳಿಸುತ್ತದೆ.
ಭಾರತದ ಚರಿತ್ರೆಯಲ್ಲಿ 12ನೇ ಶತಮಾನ ಸಾಮಾಜಿಕ ಸುಧಾರಣೆಯ ಕಾಲ ಈ ಸಮಯದಲ್ಲಿ ಕಾಯಕ ದಾಸೋಹ ಮತ್ತು ಸಮಾನತೆಯ ವಿಚಾರಧಾರೆಗಳು ಜನರನ್ನು ಮೇಲಕ್ಕೆತ್ತಿ ಉದ್ದರಿಸಿದವು ಅವರಿವರನ್ನದೆ ಪ್ರತಿಯೊಬ್ಬರನ್ನೂ ಕಾಯಕ ತತ್ವದ ಆಧಾರದಲ್ಲಿ ತನ್ನವರನ್ನಾಗಿ ಸ್ವೀಕರಿಸಿತು ಎಂದು ಹೇಳಿದರು. ಜಾತಿ ವ್ಯವಸ್ಥೆಯಲ್ಲಿ ಕೆಲವರ್ಗದಲ್ಲಿದ್ದ ದುರ್ಬಲ ದಮನಿತ ಸಮುದಾಯಗಳ ಸಬಲೀಕರಣ ಆಗಿತ್ತು ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಸಮಾಜೋಧಾರ್ಮಿಕ ಆಂದೋಲನವು ಬಡವ – ಬಲ್ಲಿದ, ಗಂಡು-ಹೆಣ್ಣು, ಮೇಲು- ಕೀಳು, ಇಂತಹ ತಾರತಮ್ಯಗಳನ್ನು ದೂರ ತಳ್ಳಿ ಅಂತರಂಗ ಸುದ್ದಿ ಬಹಿರಂಗ ಶುದ್ದಿಯನ್ನು ಬಸವಣ್ಣನವರು ಸಾರಿದರು ಎಂದು ಈ ಸಂದರ್ಭದಲ್ಲಿ ಹೇಳಿದರು.
ಸುರೇಶ ಮಡಿವಾಳರ ಎನ್‌ಜಿಓ ಕುಕನೂರ ತಾಲೂಕಾ ಉಪಾಧ್ಯಕ್ಷರು ಮಾತನಾಡಿ ಬಸವಣ್ಣನವರು ನಮ್ಮ ವಿಶ್ವದಲ್ಲೇ ವಿಶ್ವಗುರು ಎಂದೆ ಪ್ರಖ್ಯಾತಿ ಪಡೆದ ಕ್ರಾಂತಿಕಾರಿ ಶರಣ ಎಂದು ಹೇಳಿದರು ಬಸವಣ್ಣನವರು ಧರ್ಮಕ್ಕೆ ವೈಚಾರಿಕ ವಿವೇಕದ ಸ್ಪರ್ಶ ನೀಡಿದರು ಇಡೀ ಜಗತ್ತಿಗೆ ಅನ್ವಯವಾಗುವಂತೆ ಜೀವನ ಸಂವಿಧಾನವನ್ನು ನೀಡಿದ ಮಾನವ ಸಂವಿಧಾನ ಶಿಲ್ಪಿ ಎಂದು ಹೇಳಿದರು. ಮುಂದಿನ ವರ್ಷ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮದ ಶಿಕ್ಷಕರ ಗುರು ಬಳಗದವರು ಹಿರಿಯರು ಯುವಕರು ಎಲ್ಲರೂ ಸೇರಿಕೊಂಡು ಬಸವಣ್ಣನ ಜಯಂತಿ ಎಂದು ವಚನಗೋಷ್ಠಿ ಬಸವಣ್ಣನವರ ಆದರ್ಶಮಯ ಜೀವನದ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮದ ಹಿರಿಯರಾದ ಶೇಖರಗೌಡ್ರ ಪೊಲೀಸ ಪಾಟೀಲ ಮಾತನಾಡಿ ಕಾಯಕ ದಾಸೋಹ ಬಸವಣ್ಣನವರ ದೃಷ್ಟಿಯಲ್ಲಿ ಪ್ರತಿಯೊಬ್ಬ ಶರಣರಿಗೂ ಕಾಯಕ ಅನಿವಾರ್ಯ “ಕಾಯಕವೇ ಕೈಲಾಸ” ಎಂಬ ವಿಶ್ವಮಾನ್ಯ ಆರ್ಥಿಕ ಸಿದ್ದಾಂತ ವಿಶ್ವಕ್ಕೆ ದೊರೆತ ಬಹುದೊಡ್ಡ ತತ್ವ ಎಂದು ಹೇಳಿದರು ಮುಂದಿನ ವರ್ಷ ನಮ್ಮ ಗ್ರಾಮದಲ್ಲಿ ಬಸವಣ್ಣನವರ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ನಾನು ಸಹಿತ ತನು ಮನದ ಸೇವೆಯನ್ನು ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಸರ್ವ ಸದಸ್ಯರು,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಶಂಕ್ರಪ್ಪ ಉಳ್ಳಾಗಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಯಂಕಣ್ಣ ಉಪ್ಪಾರ, ಶರಣಪ್ಪ ಎಮ್ಮಿ, ಶಂಕ್ರಪ್ಪ ನಿಂಗಾಪುರ, ವೀರೇಶ ವಿರೂಪಾಕ್ಷಪ್ಪ ಉಮಚಗಿ, ಅಬ್ದುಲಸಾಬ ಕಾಲಿಮಿರ್ಚಿ, ರೈಮಾನಸಾಬ ಗೋಡೆಕಾರ, ವೀರೇಶ ಗಟ್ಟೆಪ್ಪ ಉಮಚಗಿ, ವಿರೇಶ ಉಳ್ಳಾಗಡ್ಡಿ, ರುದ್ರಗೌಡ್ರ ಪಾಟೀಲ, ಬಸಪ್ಪ ಕರಡಿ, ಮಂಜುನಾಥ ಶಿವಲಿಂಗಪ್ಪ ವಿವೇಕಿ, ನಾಗರಾಜ ವಿವೇಕಿ, ಬಸವರಾಜ ಉಮಚಗಿ, ನಿಂಗನಗೌಡ್ರ ಪೋಲೀಸಪಾಟೀಲ, ಶಂಕರಗೌಡ್ರ ಕೀರ್ತಗೌಡ್ರ, ನೀಲನಗೌಡ್ರ ಪೋಲೀಸಪಾಟೀಲ, ವಿರೇಶ ಇಟಗಿ, ದೇವರಾಜ ಇಟಗಿ, ರಾಜೇಂದ್ರ ಚಿನ್ನೂರ, ಬಸವರಾಜ ರಾಮಣ್ಣ ತೊದ್ಲರ, ಪಂಚಯ್ಯ ಗಣಾಚಾರಿ, ಪ್ರಥಮ್ ಮಾಲಿಪಾಟೀಲ, ಮಂಜುನಾಥ ಲದ್ದಿ, ಮುತ್ತು ಲದ್ದಿ, ಬಸವರಾಜ ಗೆದಗೇರಿ, ಮಹೇಶ ಗೋಗಿ, ಮೈಲಾರಪ್ಪ ಗೊಂಡಬಾಳ ಗುರುಲಿಂಗಪ್ಪ ಗೊಂಡಬಾಳ ಬಸವರಾಜ್ ವಿವೇಕಿ ಬಸವರಾಜ ನಿಂಗಾಪೂರ,ಕಲ್ಯಾಣಪ್ಪ ತೊದ್ಲರ, ಬಸವರಾಜ ಹಳ್ಳಿಕೇರಿ,ಶಿವುಪುತ್ರಪ್ಪ ಪೂಜಾರ, ಹನುಮಂತಪ್ಪ ಮುತ್ತಾಳ ರೇವಣಕಿ, ಬಸವರಾಜ ಪೂಜಾರ, ಶಶಿ ಪೂಜಾರ, ಕೃಷ್ಣ ಛಲವಾದಿ, ಶಿವು ಛಲವಾದಿ, ಮೊದಲಾದವರು ಉಪಸ್ಥಿತರಿದ್ದರು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.