Breaking News

ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಬೇಸಿಗೆ ಶಿಬಿರ ಸಹಕಾರಿ ,ಮಂಜುಳಾ ಶಿವಪ್ಪ ಹ್ತತಿಮರದ ಅಭಿಮತ

Summer camps help in engaging in creative activities, says Manjula Shivappa

ಜಾಹೀರಾತು

ವಡ್ಡರಹಟ್ಟಿಯಲ್ಲಿ ಚಿಣ್ಣರಿಗಾಗಿ ಬೇಸಿಗೆ ಶಿಬಿರ ಆರಂಭ

ಬಲೂನ್ ಉದುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಗ್ರಾಪಂ ಸದಸ್ಯರು, ಅಧಿಕಾರಿಗಳು

ಗಂಗಾವತಿ : ವಡ್ಡರಹಟ್ಟಿ ಗ್ರಾಮದಲ್ಲಿ ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಏ.29 ರಿಂದ ಮೇ 13 ರವರೆಗೆ ಗ್ರಾ.ಪಂ. ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ ಉಪಯೋಗ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷರಾದ ಮಂಜುಳಾ ಶಿವಪ್ಪ ಹ್ತತಿಮರದ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರದಿಂದ ಮಂಗಳವಾರದಿಂದ ಆರಂಭಿಸಿದ ಗ್ರಾಮೀಣ ಮಕ್ಕಳ 15 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

8 ರಿಂದ 13 ವರ್ಷದೊಳಗಿನ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಪ್ರತಿದಿನ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲಾಗುವುದು. ರಜೆ ದಿನಗಳಲ್ಲಿ ಮ್ಕಕಳಲ್ಲಿ ಓದುವ, ಬರೆಯುವ, ಕಲಾತ್ಮಕ ಚಟುವಟಿಗಳಲ್ಲಿ ಹಾಗೂ ಆಟಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಮಕ್ಕಳನ್ನು ಪಠ್ಯೇತರ ಚಟುವಟಿಗಳತ್ತ ತೊಡಗಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ ನಡೆಸಲಾಗುತ್ತಿದೆ. ಶಿಬಿರದಲ್ಲಿ ದಿನಕ್ಕೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ 40 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕರೆದುಕೊಂಡು ಬರುವ ಹಾಗೂ ಮನೆಗೆ ಕೆರೆದುಕೊಂಡು ಹೋಗುವ ಜವಾಬ್ದಾರಿ ಪಾಲಕರದ್ದಾಗಿರುತ್ತದೆ ಎಂದು ತಿಳಿಸಿದರು.

ಶಿಬಿರದಲ್ಲಿ ಚಿಣ್ಣರಿಗೆ ಸೃಜಾನಾತ್ಮಕ ಚಟುವಟಿಕೆ/ ಗಟ್ಟಿ ಓದು/ ಪತ್ರ ಬರೆಯುವುದು, ಗಣಿತ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆ, ಚೆಸ್ ಆಟದ ಬಗ್ಗೆ ಮಾಹಿತಿ/ ಕ್ರಾಪ್ಟ್ ಚಟುವಟಿಕೆ, ಕಥೆ ಹೇಳುವುದು/ಮಕ್ಕಳಿಂದ ಕಥೆ ಹೇಳಿಸುವುದು, ಗ್ರಾಮದ ಇತಿಹಾಸದ ಬಗ್ಗೆ ಇತಿಹಾಸ ತಜ್ಞರಿಂದ ಮಾಹಿತಿ ಒದಗಿಸುವುದು/ ಸರಕಾರಿ ಆಸ್ಪತ್ರೆ ವೀಕ್ಷಣೆ ಮತ್ತು ಮಾಹಿತಿ ಒದಗಿಸುವುದು. ಗಣಿತ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆ, ಚೆಸ್ ಆಟದ ಬಗ್ಗೆ ಮಾಹಿತಿ/ ಕ್ರಾಪ್ಟ್ ಚಟುವಟಿಕೆ, ಕಥೆ ಹೇಳುವುದು/ಮಕ್ಕಳಿಂದ ಕಥೆ ಹೇಳಿಸುವುದು, ಗ್ರಾಮದ ಇತಿಹಾಸದ ಬಗ್ಗೆ ಇತಿಹಾಸ ತಜ್ಞರಿಂದ ಮಾಹಿತಿ ಒದಗಿಸುವುದು/ ಸರಕಾರಿ ಆಸ್ಪತ್ರೆ ವೀಕ್ಷಣೆ ಮತ್ತು ಮಾಹಿತಿ ಒದಗಿಸುವುದು. ಅಥ್ಲೇಟಿಕ್ಸ್/ ಕರಾಟೆ ಆಟದಿಂದ ದ್ಯಹಿಕ ಬೆಳವಣಿಗೆ ಬಗ್ಗೆ ಮಾಹಿತಿ ಒದಗಿಸುವುದು/ಕಂಪ್ಯೂಟರ್ ಜ್ಞಾನದ ಬಗ್ಗೆ ಮಾಹಿತಿ. ಯುಟ್ಯೂಬ್ ಮೂಲಕ ವಿವಿಧ ಪಕ್ಷಿಗಳ ಬಗ್ಗೆ ತಿಳಿಸುವುದು ಮತ್ತು ಇದಕ್ಕೆ ಸಂಭಂದಿಸಿದ ಹೊರ ಸಂಚಾರಿ ವಿಕ್ಷಣೆ/ ಚಟುವಟಿಕೆ ಹಮ್ಮಿಕೊಳ್ಳುವುದು. ಪತ್ರ ಬರೆಯುವ ಬಗ್ಗೆ ಮಾಹಿತಿ / ರಸಪ್ರಸ್ನೆ ಕಾರ್ಯಕ್ರಮ, ಚಿತ್ರಕಲೆ ಸ್ಪರ್ಧೆ / ರಂಗೋಲಿ/ ಭಾಷಣ ಕಲೆ ಚಟುವಟಿಕೆ, ಪೊಸ್ಟ ಆಫೀಸ್ ವಿಕ್ಷಣೆ/ಗಾಯನ ಸ್ಪರ್ದೆ, ಮಕ್ಕಳ ಹಕ್ಕುಗಳ ಉಪನ್ಯಾಸ/ ಗ್ರಾಮ ಪಂಚಾಯತಿ ಕಚೇರಿ ವೀಕ್ಷಣೆ, ಬ್ಯಾಂಕ್ ವ್ಯವಹಾರ ವೀಕ್ಷಣೆ/ ಕೆರೆ ದಡ ಆಟ/ಪತ್ರ, ಗ್ರಂಥಾಲಯದಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸುವುದು/ಪತ್ರಿಕೆಗಳಲ್ಲಿ ಬರುವ ವಿವಿಧ ಮಕ್ಕಳ ಚಟುವಟಿಕೆಗಳ ತಿಳಿಸುವುದು. ಕಥೆ ಕವನ ನಾಟಕ ಬರೆಯಲು ಪ್ರೋತ್ಸಾಹಿಸುವುದು. ವಿವಿಧ ಹೊರಾಂಗಣ ಆಟ ಆಡಿಸುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶೇಷ : ಗ್ರಾಮೀಣ ಬೇಸಿಗೆ ಶಿಬಿರವನ್ನು ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗಣ್ಯರು ಬಲೂನ್ ಉದುವ ಮೂಲಕ ಚಾಲನೆ ನೀಡಿರುವುದು ಹಾಗೂ ಮಕ್ಕಳೊಂದಿಗೆ ಗ್ರಾಪಂ ಸದಸ್ಯರು ಆಟವಾಡಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಗ್ರಾಪಂ ಸದಸ್ಯರಾದ ಭರತ್ ಕುಮಾರ್, ಮೇರಾಜ್ ದಳಪತಿ, ಬಂಡೇ ನಾಯಕ, ಡಾ.ಪಂಚಾಕ್ಷರಿ, ಹೊನ್ನುರಬೀ, ಶಾಂತಮ್ಮ, ಶಿಕ್ಷಣ ಪ್ರೇಮಿಗಳು ಹಾಗೂ ಮುಖಂಡರಾದ ಶಿವಪ್ಪ ಹತ್ತಿಮರದ, ವಡ್ಡರಹಟ್ಟಿ ಕ್ಯಾಂಪ್ ಸಹಿಪ್ರಾ ಶಾಲೆ ಮುಖ್ಯಶಿಕ್ಷಕರಾದ ಸದಾನಂದ, ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಲಿಂಗೇಶ ಪೂಲಭಾವಿ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಆರ್ ಜಿಪಿಆರ್ ಫೆಲೋ ಸುಮಿತ್ರಾ ಮೆಣಸಿನಕಾಯಿ, ಎಸ್ ಬಿಐ ಬ್ಯಾಂಕ್ ಆರ್ಥಿಕ ಸಲಹೆಗಾರರಾದ ಟಿ. ಆಂಜನೇಯ ನಾಯಕ, ಗ್ರಂಥಾಲಯ ಮೇಲ್ವಿಚಾರಕಾರದ ವೀರೇಶ ಗಣೇಕಲ್, ಗ್ರಾಪಂ ಸಿಬ್ಬಂದಿಗಳು, ಅಜೀಂ ಪ್ರೆಮ್ ಜೀ ಪೌಂಡೇಶನ್ ಸಿಬ್ಬಂದಿಗಳು ಇದ್ದರು.

About Mallikarjun

Check Also

ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾವು ಅಧಿಕಾರಿಗಳ ಭೇಟಿ

Veerappa’s father Hanumappa Hire, who consumed poison, died, officials meet ಗಂಗಾವತಿ, ತಾಲೂಕಿನಮರಳಿ ಸಮೀಪದ ಆಚಾರ ನರಸಾಪುರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.