Organizations should care about everyone: Editor Vijay Shankar

ಏಳು ಜಿಲ್ಲೆಗಳಲ್ಲಿ ನೂತನ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ ರಾಜ್ಯಾಧ್ಯಕ್ಷರ ಕರೆ,,

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ರಾಜ್ಯದಲ್ಲಿ ವಿನೂತನ ಹೆಜ್ಜೆಗೆ ಮುನ್ನುಡಿ ಬರೆದಿರುವ ರಾಜ್ಯಾಧ್ಯಕ್ಷ ಜಿ. ಎಂ ರಾಜಶೇಖರ್,,
ವರದಿ:ಪಂಚಾಕ್ಷರಯ್ಯ ಹಿರೇಮಠ
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಇಲಕಲ್ : ರಾಜ್ಯದಲ್ಲಿ ನೂತನ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ ತರುವ ಮೂಲಕ ಪ್ರತಿ ಜಿಲ್ಲೆಯ ತಾಲೂಕಿನ ಪ್ರತಿಯೊಬ್ಬ ಪತ್ರಕರ್ತರ ಕೂಗಿಗೆ ದ್ವನಿಯಾಗಿ ನಿಲ್ಲುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯದಲ್ಲಿ ಪತ್ರಕರ್ತರ ನೆಲೆಗೆ ಬಲವಾಗಿ ನಿಲ್ಲುವ ಉದ್ದೇಶದೊಂದಿಗೆ ನಮ್ಮ ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ್ ಅವರು ನಿಲ್ಲಲಿದ್ದಾರೆ.
ಇಂದಿನ ದಿನ ಮಾನಗಳಲ್ಲಿ ಸಂಘಗಳು ಕೇವಲ ತಮ್ಮ ಸ್ವಹಿತಕ್ಕಾಗಿ ಹುಟ್ಟಿಕೊಳ್ಳುತ್ತವೆ, ಯಾವೊಬ್ಬ ಸದಸ್ಯರು ಸಂಘಟನೆಗಳಿಂದ ಬಲಿಷ್ಠರಾಗಿಲ್ಲಾ, ಹಾಗೂ ನಮ್ಮ ಹಿಂದೆ ನಮ್ಮ ಸಂಘಟನೆ ಇದ್ದು ನಮಗೆ ಕಷ್ಟ ನಷ್ಟಗಳಲ್ಲಿ ಭಾಗಿಯಾಗುತ್ತದೆ ಎನ್ನುವ ಅಛಲ ನಂಬಿಕೆಯು ಇಲ್ಲದಂತಾಗಿದೆ. ಆದರೆ ನಮ್ಮರಾಜ್ಯಾಧ್ಯಕ್ಷರಾದ ರಾಜಶೇಖರ್ ಅವರು ಹುಟ್ಟು ಹಾಕಿರುವ ಸಂಘಟನೆ ಪ್ರತಿಯೊಬ್ಬ ಪತ್ರಕರ್ತನಿಗೂ ಭರವಸೆಯ ಬೆಳಕಾಗಲಿದೆ.
ಇಂದು ನಾವು ಹುಟ್ಟು ಹಾಕುವ ಸಂಘಟನೆಯು ಸಾವಿರಾರು ಪತ್ರಕರ್ತರಿಗೆ ನೆಲೆಯಾಗಲು ಸಹಕಾರಿಯಾಗಲಿದೆ. ಒಬ್ಬ ಒಳ್ಳೆಯ ಬರಹಗಾರನಿಗೆ ನಮ್ಮ ಸಂಘಟನೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಹಳ್ಳಿಗಾಡಿನ ಹಲವಾರು ಪ್ರತಿಭಾವಂತ ಪತ್ರಕರ್ತರಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯವನ್ನು ನಮ್ಮ ಸಂಘಟನೆ ಮಾಡಲಿದೆ ಎಂದು ಹೇಳಿದರು.
ಮತ್ತು ನಮ್ಮ ಈ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು 31ಜಿಲ್ಲೆಗೂ ವಿಸ್ತರಿಸಲಾಗುತಿದ್ದು, ಈಗಾಗಲೇ ಕೇಲವೊಂದಿಷ್ಟು ಜಿಲ್ಲೆಗಳಲ್ಲಿ ಬಲಿಷ್ಠವಾಗಿ ಕಾರ್ಯನಿರ್ವಹಿಸುತ್ತಿವೆ.
ನಮ್ಮ ಸಂಗಟನೆಯಲ್ಲಿ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ, ದೃಷ್ಯ ಮಾಧ್ಯಮ, ಯುಟ್ಯೂಬ್, ವೆಬ್ ನ್ಯೂಸ್ ಸೇರಿದಂತೆ ಇನ್ನೀತರ ಪತ್ರಕರ್ತರಿಗೂ ನಮ್ಮ ಸಂಘವು ಅವಕಾಶ ಕಲ್ಪಿಸಲಿದೆ. ಜೊತೆಗೆ ಹಿರಿಯ ಪತ್ರಕರ್ತರಿಗೆ ಹಾಗೂ 25 ವರ್ಷದಿಂದ ನಿರಂತರ ಪತ್ರಿಕೆ ತರುತ್ತಿರುವ ಆಯಾ ಪತ್ರಿಕಾ ಸಂಪಾದಕರಿಗೆ, ತಂಡದವರಿಗೆ ರಾಜ್ಯಮಟ್ಟದಲ್ಲಿ ಗೌರವ ನೀಡಲಿದೆ.
ನಮ್ಮ ಸಂಘದಲ್ಲಿ ಕುಟುಂಬ ಆರೋಗ್ಯ ಭದ್ರತೆಗೆ 10ಲಕ್ಷ ಇನ್ಸೂರೆನ್ಸ್, ಮತ್ತು ಪತ್ರಕರ್ತರ ಕ್ಷೇಮ ನಿಧಿ ಹಾಗೂ ಕ್ರೀಯಾಶೀಲ ವರದಿಗಳಿಗೆ 5 ಪ್ರಶಸ್ತಿಗಳು, ತಲಾ 10ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ನೀಡಲಿದೆ. ನಮ್ಮ ಸಂಘದಲ್ಲಿ ಯಾರಾದರೂ ಪತ್ರಕರ್ತರೂ ನಿಧನ ಹೊಂದಿದಾಗ ಭಾಗಿಯಾಗಿ ಧನ ಸಹಾಯ ಮಾಡಲಾಗುವುದು.
ಕೇಂದ್ರ ಮಂತ್ರಿ ಮಂಡಲ ಸೇರಿದಂತೆ ಜನಪ್ರತಿನಿಧಿಗಳ ಅಧಿಕಾರಿಗಳ ಆಯಾ ಜಿಲ್ಲೆಯ ಪತ್ರಕರ್ತರ ಮಾಹಿತಿ ಒಳಗೊಂಡ ವೆಬ್ ಸೈಟ್ ಹೀಗೆ ಪ್ರಥಮ ಹಂತದಲ್ಲಿ ನಮ್ಮ ಸಂಘ ಕೇಲವು ಅನೂಕೂಲ ಮಾಡಿಕೊಡಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್, ರಾಜ್ಯ ಸಮಿತಿ ಸದಸ್ಯರಾದ ಸಿದ್ದೆಗೌಡ ಚನ್ನಾಪುರ, ಕೊಪ್ಪಳ, ಗಂಗಾವತಿ, ಶ್ರೀ ದಾನಯ್ಯ ಹಿರೇಮಠ , ವಿಜಯಪುರ, ಶ್ರೀ ಡಿ,ಬಿ,ವಿಜಯಶಂಕರ್, ಬಾಗಲಕೋಟೆ, ಶಂಕರ ಕುದರಿ ,ಗದಗ, ಪಂಚಾಕ್ಷರಯ್ಯ ಹಿರೇಮಠ ,ಕೊಪ್ಪಳ, ಮಾರುತಿ, ಬನ್ನವಗೋಳ, ಬೆಳಗಾವಿ, ಹಾಗೂ ದವಲಶೇಢಂ, ಶಾಮ್ ಮುಧೋಳ, ಉದಯ್, ಹಾಗೂ ರಾಜ್ಯಸಮಿತಿ ಸದಸ್ಯರು ,ಪತ್ರಿಕಾ ಪ್ರತಿನಿಧಿಗಳು ಹಾಜರಿದ್ದರು