Appeal to Minister to clear confusion on Basava Jayanti

ಬೀದರ್ : ಬಸವ ಜಯಂತಿ ದಿವಸ ಪಂಚಾಚಾರ್ಯ ಯುಗಮಹೋತ್ಸವ್ ಆಚರಿಸಲು ನಿರ್ಧರಿಸಿದ್ದ ವೀರಶೈವ ಮಹಾಸಭಾ ಕಾರ್ಯಕ್ರಮ ವಿರುದ್ಧ ನಿಯೋಗ ಇಂದು ಬೀದರ ಅಂಬೇಡ್ಕರ್ ವೃತ್ತ. ಪ್ರವಾಸಿ ಮಂದಿರರಲ್ಲಿರುವ ಸಚಿವರ ಕಚೇರಿ
, ಶ್ರೀ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಮತ್ತು ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ರಾಷ್ಟ್ರೀಯ ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭೆ ಅವರು ಭೇಟಿ ಆಗಿ, ಕಾರ್ಯಕ್ರಮ ತಡೆ ಹಿಡಿದು ಸಮುದಾಯದ ಗೊಂದಲ ನಿವಾರಣೆ ಮಾಡಲು ಮನವಿ ಸಲ್ಲಿಸಿಲಾಗಿತ್ತು.

ಸಚಿವರು ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಹಿರಿಯರ ಜೊತೆ ಚರ್ಚಿಸಿ ಕಾರ್ಯಕ್ರಮದಲ್ಲಿ ಇದ್ದ ತೊಂದರೆ ನಿವಾರಣೆ ಮಾಡಿ ಮೊದಲಿನ ತರಹ ಕೇವಲ ಬಸವ ಜಯಂತಿ ಆಚರಣೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ನಿಯೋಗಕ್ಕೆ ಮುಂದೆ ಯಾವುದೇ ಹೋರಾಟ ಮಾಡಬಾರದು ಎಲ್ಲರೂ ಒಟ್ಟಾಗಿ ಸಾಗೋಣ ಎಂದು ತಿಳಿಸಿದರು.
ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.