Breaking News

ಪಜಾಪಭುತ್ವಕ್ಕೆ ಶಕ್ತಿ ತುಂಬುವ ಪಂಚಾಯತ್ ರಾಜ್ ವ್ಯವಸ್ಥೆ: ಪಾರ್ಶ್ವನಾಥ ಉಪಾಧ್ಯೆ

Panchayat Raj system to give power to the Pajapabhutva: Parswanath Upadhyay

ಜಾಹೀರಾತು
Screenshot 2025 04 25 16 03 25 64 6012fa4d4ddec268fc5c7112cbb265e7

ಸಾವಳಗಿ-ಅರಟಾಳ: ಲೋಕ ಸಭೆ, ವಿಧಾನ ಸಭೆಯಲ್ಲಿ ಸರ್ಕಾರ ತಗೆದುಕೊಂಡ ಸಾರ್ವಜನಿಕ ಕೆಲಸಗಳನ್ನು ನೇರವಾಗಿ ಗ್ರಾಮ ಪಂಚಾಯತಿಗೆ ಒದಗಿಸುವುದು ಪಂಚಾಯತ ರಾಜ್‌ದ ಕೆಲಸವಾಗಿದೆ ಎಂದು ಜಮಖಂಡಿ ಜಾನಪದ ಸಾಹಿತ್ಯ ಪರಿಷತ ತಾಲೂಕಾ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯೆ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಸಭಾಭವನದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಮುಖ್ಯತಿಥಿಯಾಗಿ ಮಾತನಾಡಿ, . ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗಾಮ ಪಂಚಾಯತ ಸದಸ್ಯರಿಗೆ ಸಾರ್ವಜನಿಕರು ಸಹಕಾರ ಕೊಟ್ಟಾಗ ಅಭಿವೃದ್ಧಿ ಕಾಣುತ್ತೇವೆ. ಇದಕ್ಕೆ ಉದಾಹರಣೆ ನಿಮ್ಮೂರಿನ ನೂತನವಾಗಿ ನಿರ್ಮಾಣವಾಗಿ ಉದ್ಘಾಟನೆಗೊಂಡ ಗಾಮ ಪಂಚಾಯತಿ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಗಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ನಿರೂಪಿಸಿದಿರಾ. ಪಂಚಾಯತ ಗ್ರಾಮೀಣಾಭಿವೃದ್ಧಿ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸರಕಾರ ಹಲವಾರು ಯೋಜನೆಗಳನ್ನು ತಂದಿದೆ. ಅವುಗಳನ್ನು ನಾವು ಸದುಪಯೋಗ ಪಡಿಸಿಕೊಂಡರೆ ಮಾತ್ರ ಅಭಿವೃದ್ಧಿ ಹೊಮದಲು ಸಾಧ್ಯ ಎಂದರು.

ಗಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎ. ಜಿ. ಎಡಕೆ ಮಾತನಾಡಿ, ಸುಮಾರು ಎಳು ವರ್ಷಗಳಿಂದ ಅರಟಾಳ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಅವರಸಹಕಾರದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆಗೊಂಡಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಲಿಕಾರ್ಮಿಕರಿಗೆ ಸಾಕಷ್ಟು ನರೇಗಾ ಕೆಲಸವನ್ನು ಕೊಟ್ಟಿದ್ದೆವೆ. ಸಾರ್ವಜನಿಕರಿಗೆ ವಯಕ್ತಿಕ ಕಾಮಗಾರಿ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ನರೇಗಾ ಯೋಜನೆಯಡಿ ಕೂಲಿಕಾರ್ಮಿಕರು ಕೆಲಸಕ್ಕೆ ಬರುತ್ತಾರೆ ಎಂದರು.

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ನಿಮಿತ್ಯ ಕಾರ್ಯಕಮದಲ್ಲಿ ಹಿರಿಯರು, ಯೋಧರು, ರಾಜಕೀಯ ಮುಖಂಡರನ್ನು ಗ್ರಾಮ ಪಂಚಾಯತಿಯವರು ಸನ್ಮಾನಿಸಿದರು.

ಗಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ, ಗ್ರಾಪಂ ಸದಸ್ಯ ಸರಸ್ವತಿ ಕಾಂಬಳೆ, ರಾಮಪ್ಪ ಪೂಜಾರಿ, ಮಹಾದೇವ ಡಂಗಿ, ದುಂಡನಗೌಡ ಪಾಟೀಲ, ಯಲ್ಲಪ್ಪ ಹಟ್ಟಿ, ರಮೆಶ ಹಟ್ಟಿ, ಸಿದ್ದಪ್ಪ ಮಮದಪೂರ, ಡಾ|| ವಿಲಾಸ ಜಂಬಗಿ, ಶಂಕರ ಹಟ್ಟಿ, ಮಾಳಪ್ಪ ಕಾಂಬಳೆ, ಚಂದಪ್ಪ ಮಾದರ, ಸತ್ಯಪ್ಪ ಪೂಜಾರಿಹಣಮಂತ ಹಟ್ಟಿ, ವಾಸನಗೌಡ ಜಂಬಗಿ, ಎಮ್. ಪಿ. ಪಾಟೀಲ, ಬಾಲಪ್ಪ ಜಂಬಗಿ, ಮಲ್ಲಪ್ಪ ನಾಯಿಕ ಇದ್ದರು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.