Membership campaign launched: Ashoka Swamy Herura.

ಗಂಗಾವತಿ: ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯವತಿಯಿಂದ ಸದಸ್ಯತ್ವ ಅಭಿಯಾನ ಆರಂಭಿಸಬೇಕೆಂದು ಗಂಗಾವತಿ ತಾಲೂಕು ವೀರಶೈವ ಮಹಾಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕರೆ ನೀಡಿದರು.ಅವರು ಗಂಗಾವತಿ ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಔತಣ ಕೂಟದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಘಟಕ, ಮಹಿಳಾ ಮತ್ತು ಯುವ ಘಟಕದವತಿಯಿಂದ ವಾರ್ಡ ಮತ್ತು ಗ್ರಾಮಗಳಲ್ಲಿ ಸಂಚಾಲಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಕಾರ್ಯವನ್ನು ಆರಂಭಿಸಬೇಕೆಂದು ಮೂರು ಘಟಕದ ಪದಾಧಿಕಾರಿಗಳನ್ನು ಕೋರಿದರು. ಪದಾಧಿಕಾರಿಗಳು ಮತ್ತು ಸದಸ್ಯರು ಒಳ ಪಂಗಡದಲ್ಲಿ ಪದಾಧಿಕಾರಿಗಳಾಗಿ ಗುರುತಿಸಿ ಕೊಳ್ಳದೆ ವೀರಶೈವ-ಲಿಂಗಾಯತ ಮಹಾ ಸಭಾದ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸೂಚಿಸಿದರು.
ಗಂಗಾವತಿ ತಾಲೂಕು ಮುಖ್ಯ ಘಟಕದ ಅಧ್ಯಕ್ಷ ಎಚ್.ಗಿರೇಗೌಡ,ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ ಮುದೇನೂರ ಹಿರೇಮಠ,ಪದಾಧಿಕಾರಿಗಳಾದ ಕರಬಸಪ್ಪ ಬೂದಗುಂಪಾ,ನಾಗೂರು,ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ್,ಪ್ರಧಾನ ಕಾರ್ಯದರ್ಶಿ ಬಸವರಾಜ ಹಿರೇಮಠ ಮುದೇನೂರ, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್ ಮತ್ತು ಕಾರ್ಯದರ್ಶಿ ಶಿಲ್ಪಾ ಶ್ರೀನಿವಾಸ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಮನೋಹರಗೌಡ ಹೇರೂರ,ಅನಿತಾ ರಾಜೇಂದ್ರ ಪ್ರಸಾದ,ಡಾ.ಮಂಜುನಾಥ ಪಾಟೀಲ್ ಮುಂತಾದವರು ಮಾತನಾಡಿದರು.