Bysaran accident; Raichur District Police Department launches helpline

ಬೈಸರನ್ ದುರ್ಘಟನೆ; ರಾಯಚೂರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ
ರಾಯಚೂರು ಏಪ್ರಿಲ್ 23 (ಕರ್ನಾಟಕ ವಾರ್ತೆ): ಜಮ್ಮು ಕಾಶ್ಮೀರದ ಪಹಲ್ಗಾಮ ನ ಮೇಲ್ಭಾಗದಲ್ಲಿರುವ ಬೈಸರನ್ ಹುಲ್ಲುಗಾವಲಿನ ಸುತ್ತಲಿನ ದಟ್ಟ ಕಾಡುಗಳಿಂದ ಹೊರಬಂದ ಭಯೋತ್ಪಾದಕ ಗುಂಪು
ಏಪ್ರೀಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜನರನ್ನು ಹತ್ಯೆ ಮಾಡಿದೆ.
ಆದ್ದರಿಂದ ರಾಯಚೂರು ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕಾಗಿ ತೆರಳಿ, ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳ ಅಥವಾ ಸಂಬಂಧಿಕರ ಮಾಹಿತಿಯನ್ನು
ಪೊಲೀಸ್ ಪೊಲೀಸ್ ಕಂಟ್ರೋಲ್ ರೂಮ್: 9480803800, ಡಿಎಸ್‌ಪಿ, ರಾಯಚೂರು ಉಪ ವಿಭಾಗ: 9480803820, ಪಿಐ, ಡಿಸಿಆರ್‌ಬಿ ಘಟಕ, ರಾಯಚೂರು: 9480803809 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.