Breaking News

ರೈಸ್‌ಮಿಲ್‌ನಲ್ಲಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರಕ್ಕಾಗಿ ಒತ್ತಾಯ: ಮುಸ್ತಫಾ ಪಠಾಣ್

Demand for compensation for workers who died in rice mill: Mustafa Pathan

ಜಾಹೀರಾತು
WhatsApp Image 2025 04 19 At 2.50.02 PM

ಗಂಗಾವತಿ: ರೈಸ್ ಮಿಲ್ ಅಕ್ಕಿ ಸಂಗ್ರಹಿಸುವ ಟ್ಯಾಂಕ್ ಒಡೆದ ಪರಿಣಾಮ ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಗಂಗಾವತಿಯ ರಾಯಚೂರು ರಸ್ತೆಯಲ್ಲಿ ಇರುವ ಸರೋಜ ಆಗ್ರೋ ಇಂಡಸ್ಟಿçÃಸ್ ನಲ್ಲಿ ಗುರುವಾರ ನಡೆದಿದೆ.
ಮಹೆಬೂಬ ನಗರದ ಇಲಾಹಿ ಕಾಲೋನಿ ನಿವಾಸಿ ಸೈಯದ್ ಅಹ್ಮದ್ ಪೀರ್ (೨೬) ಮೃತ ಪಟ್ಟ ಕಾರ್ಮಿಕನಾಗಿದ್ದು, ಎಂದಿನAತೆ ರೈಸ್ ಮಿಲ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಏಕಾಏಕಿ ೨೦೦ ಟನ್ ನಷ್ಟು ಅಕ್ಕಿ ಸಂಗ್ರಹ ಮಾಡುವ ಟ್ಯಾಂಕ್ ಒಡೆದಿದ್ದರಿಂದ ಅಕ್ಕಿ ಕೆಳಗೆ ಸಿಲುಕಿ ಅಹ್ಮದ್ ಮೃತಪಟ್ಟಿದ್ದಾನೆ. ಇಡೀ ಕುಟುಂಬವೇ ಮೃತ ಕಾರ್ಮಿಕನ ಮೇಲೆ ಅವಲಂಬಿತವಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಘಟನೆಗೆ ಕಾರಣವಾದ ಎನ್.ಆರ್.ರೈಸ್ ಮಿಲ್ ಮಾಲಿಕರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಟ್ಯಾಂಕ್ ಬದಲಾವಣೆ ಮಾಡಲು ಅಥವಾ ದುರಸ್ಥಿ ಕೈಗೊಳ್ಳಲು ಮಿಲ್ಲಿನ ಕಾರ್ಮಿಕರು ಹಲವಾರು ಬಾರಿ ಮಾಲಿಕರಿಗೆ ತಿಳಿಸಿದ್ದರೂ, ಕಾರ್ಮಿಕರ ಜೀವಗಳನ್ನು ಲೆಕ್ಕಿಸದೇ ತಮ್ಮ ಲಾಭಕ್ಕೋಸ್ಕರ ಅಕ್ಕಿ ಟ್ಯಾಂಕ್ ಸರಿಯಾಗಿ ನಿರ್ವಹಣೆ ಮಾಡದೇ ಇರುವುದೇ ಈ ದುರ್ಘಟನೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಮಿಲ್ಲಿನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ ಕಡಿಮೆ ವೇತನ ನೀಡಿ, ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿಯಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ಕೊಡಬೇಕಾದ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡದೇ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಾರ್ಮಿಕರ ಜೀವದೊಂದಿಗೆ ಮಾಲೀಕರು ಚೆಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಇಂತಹ ರೈಸ್ ಮಿಲ್ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಕಾರ್ಮಿಕನ ಕುಟುಂಬಕ್ಕೆ ೩೦ ಲಕ್ಷ ರೂಪಾಯಿಗಳ ಪರಿಹಾರ ಒದಗಿಸಿಕೊಡಬೇಕು ಎಂದು ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಮುಸ್ತಫಾ ಪಠಾನ್ ಆಗ್ರಹಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಈ ಹಿಂದೆ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರು ೨೦೦೭ರಲ್ಲಿ ಕಾರ್ಮಿಕರಿಗೆ ಪಿಂಚಿಣಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಮದುವೆ ಸಹಾಯಧನ, ಅಪಘಾತ, ಸಾವುಗಳಂತಹ ಘಟನೆಗಳಿಂದ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾರ್ಮಿಕ ಬೋರ್ಡ್ಗೆ ಎರಡು ಸಾವಿರ ಕೋಟಿ ಅನುದಾನ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಮತ್ತೊಮ್ಮೆ ಇಕ್ಬಾಲ್ ಅನ್ಸಾರಿ ಅವರನ್ನು ಶಾಸಕ, ಸಚಿವರನ್ನಾಗಿ ಮಾಡಿದರೆ ಕಾರ್ಮಿಕ ಬೋರ್ಡಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುದಾನ ಕೊಡಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದರ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.