Request from farmers’ association for development of Hanur taluk in the cabinet: Gowde Gowda.

ವರದಿ : ಬಂಗಾರಪ್ಪ . ಸಿ .
ಹನೂರು : ಇದೇ ಮೊದಲ ಬಾರಿಗೆ ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡುವಂತ ನಿರ್ಣಯವನ್ನು ತೆಗೆದುಕೊಳ್ಳಲು ಸೂಕ್ತ ತಿರ್ಮಾನ ಮಾಡಬೇಕೆಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಗೌಡೇಗೌಡ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಮಂತ್ರಿಗಳು ಸೇರಿದಂತೆ ಇಡಿ
ಕರ್ನಾಟಕ ಸರ್ಕಾರವೆ ಇಲ್ಲಿಗೆ ಬರುತ್ತಿದೆ ಆದ್ದರಿಂದ
ಜಿಲ್ಲಾದಿಕಾರಿಗಳಿಗೆ ತಹಸಿಲ್ದಾರರ ಮುಖಾಂತರ ಹನೂರು ತಾಲ್ಲೂಕಿನ ಅಭಿವೃದ್ಧಿಗೆ ಅಗಾ ಬೇಕಿರುವ ಸಮಸ್ಯೆಗಳ ಪಟ್ಟಿಯನ್ನು ಸಲ್ಲಿಸುತ್ತ ಹೆಚ್ಚಿನ ಅನುಧಾನ ಹನೂರು ತಾಲ್ಲೂಕಿಗೆ ನೀಡಬೇಕೆಂದು ಹಕ್ಕು ಒತ್ತಾಯ ಪತ್ರ
ಮಾನ್ಯರೆ.
ಈ ಮೆಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಹನೂರು ತಾಲ್ಲೂಕು ಎಂದು ಘೋಷಣೆ ಮಾಡಿ ಸುಮಾರು ವರ್ಷಗಳು ಕಳೆದಿದ್ದು ಇಲ್ಲಿ ವರೆಗು ತಾಲ್ಲೂಕು ಕೇಂದ್ರದಲ್ಲಿ ಇರ ಬೇಕಾದ ಯಾವುದೇ ಕೇಂದ್ರಗಳು ಕಛೇರಿಗಳು ಇತರ ಇಲಾಖೆಯ ಸಮಸ್ಯೆಗಳ ಪಟ್ಟಿಯನ್ನು ಈ ಕೆಳ ಕಂಡಂತ್ತೆ ಸಲ್ಲಿಸಿರುತ್ತೇವೆ
ಹನೂರು ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನ ಸೌದ ನಿರ್ಮಾಣ ಮಾಡಿ ಕೊಡಬೇಕು
ಹನೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯ ಮೆಲದರ್ಜೇಗೆ ಏರಿಸಿಕೊಡಬೇಕು ಹಾಗು ಗ್ರಾಮಿಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಹೆಚ್ಚಿನ ವೈದ್ಯರನ್ನು ನೇಮಕ ಮಾಡಿಕೂಡ ಬೇಕು.
ಹನೂರು ತಾಲ್ಲೂಕಿನಲ್ಲಿ ಕೋರ್ಟ್ ಕಚೇರಿಯನ್ನು ನಿರ್ಮಾಣಕೊಡ ಬೇಕು.
ಹನೂರು ತಾಲ್ಲೂಕಿಗೆ ಕ.ರಾ.ರ.ಸಾ.ನಿ ಡಿಪೋ ಶಿರ್ಘದಲ್ಲಿ ಮಾಡಿಕೊಡಬೇಕು.
. ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಮತ್ತು ಕೃಷಿ ಇಲಾಖೆ ತಾಲ್ಲೂಕು ಕೇಂದ್ರಗಳನ್ನು ನೀರ್ಮಾಣ ಮಾಡಿಕೊಡ ಬೇಕು
.ಹನೂರು ತಾಲ್ಲೂಕನಲ್ಲಿ 12 ಪಶು ಆಸ್ಪತ್ರಗಳಿದ್ದು ಒಬ್ಬರೆ ವೈದ್ಯರು ಇರುವುದರಿಂದ ವೈದ್ಯರನ್ನು ನೇಮಕ ಮಾಡಿ ಕೊಡಬೇಕು ಮತ್ತೆ ಅಜೀಪುರದಲ್ಲಿ ಸಶು ಆಸ್ಪತ್ರೆಯನ್ನು ನಿರ್ಮಾ ಮಾಡಿಕೊಡಬೇಕು.
೭ ಹನೂರು ವಿಧಾನಸಭಾ ಕ್ಷತ್ರವು ರಾಜ್ಯದಲ್ಲಿ ಅತಿಹೆಚ್ಚು ವಿಶಾಲಾವಾದ ಕ್ಷೇತ್ರವಾಗಿದ್ದು ಇಲ್ಲಯ ರಸ್ತೆಗಳು ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿದ್ದು ಈ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ಕಲ್ಪಿಸಿ ರಸ್ತೆಗಳ ಅಭಿವೃದ್ಧಿ ಮಾಡಿಕೊಡ ಬೇಕು.
ಹನೂರು ತಾಲ್ಲೂಕಿನ ಹೆಚ್ಚಿನ ಕೃಷಿ ಪ್ರದೇಶವು ಅರಣ್ಯದ ಹಂಚಿ ಪ್ರದೇಶದಲ್ಲಿ ಇದ್ದು ಕಾಡುಪ್ರಾಣಿಗಳಿಂದ ಬೆಳೆ, ಸಾಕುಪ್ರಾಣಿಗಳು, ಹಾಗು ಮನುಷ್ಯರಿಗೆ ಹೆಚ್ಚಿನ ಕಾಡು ಪ್ರಾಣಿಗಳಿಂದ ಹಾನಿಗೊಳಗಾಗುತ್ತೇವೆ ಇದರಿಂದ ಮೆಲೇ ಮಹದೇಶ್ವರ ವನ್ಯಜೀವಿ ಹಾಗೂ ಕಾವೇರಿ ವನ್ಯಜೀವಿ ವಲಯದಲ್ಲಿ ಅನೆ ಟ್ರಂಚ್ ಮತ್ತು ರೈಲ್ವೆ ಬ್ಯಾರಿಕೇಡ್ ಗಳನ್ನು ನಿರ್ಮಿಸಿಕೊಡಬೇಕು. ಪ್ರಮುಖವಾಗಿ ತಾಲ್ಲೂಕಿನ ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೆರಿದ ಉಯಲನತ್ತ ಮತ್ತೆ ಸೂಳೆರಿಪಾಳ್ಯ ಪಂಚಾಯಿತಿಗೆ ಸರಿದ ಉಡುತೊರೆ – ಹಳ್ಳ ಜಲಾಷಯದ ಕಡೆ ಆನೆಗಳಿಂದ ರಕ್ಷಣೆಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ – ಮಾಡಿಕೊಡಬೇಕು ಹಾಗೂ ಮಾರ್ಟಳಿ ಗ್ರಾಮಪಂಚಾತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೆ ಅನೆ ಟ್ರಂಚ್ ಮತ್ತು ರೈಲ್ವೆ ಬಾರಿಕೇಟ್‌ಗಳನ್ನು ನಿರ್ಮಾಣ ಮಾಡಿಕೊಡಬೇಕು ಮತ್ತು ಹೋಗ್ಯ ಗ್ರಾಮ ಪಂಚಾತಿಗೆ ಸೆರಿದ ನೆಲ್ಲೂರಿಂದ ಜೆಲ್ಲಿಪಾಳ್ಯದ ವರೆಗು ಆನೆ ಟ್ರಂಚ್ ಮತ್ತು ಬ್ಯಾರಿಕೇಡ್ ಗಳನ್ನು ನಿರ್ಮಾಣಮಾಡಿಕೊಡ ಬೇಕು.
ಹನೂರು ತಾಲ್ಲೂಕಿನ ಸೊಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ → ಉಡುತೊರೆಹಳ್ಳ ಜಲಾಶಯಕ್ಕೆ ಮತ್ತು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸೆರಿದ ಕೀರೆಪಾತಿ ಡ್ಯಾಮ್ ಮತ್ತ ಹೊಗ್ಯ ಪಂಚಾಯಿತಿರಿದ ಮಿನ್ನತಹಳ್ಳ ಜಲಾಷಯಕ್ಕೆ ಕಬಿನಿ ಜಲಾಶಯದಿಂದ ಏತನೀರಾವರಿ ಮುಲಕ ನೀರು ತುಂಬಿಸಿ ಕೊಡಬೇಕು.ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಪ್ತಿಗೆ ಬರುವ ವೆಟ್ಟಿ ಕಾಡು ಅಂತನಿಯ್ ರ್ ಕೊಯಿಲ್ ವ್ಯಾಪ್ತಿಗೆ ಬರುವ ಹಾಲೆರಿಕೆರೆಗೆ ಕಾವೇರಿ ಹೊಳೆಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಮುಕಾಂತರ ನೀರು ತುಂಬಿಕೊಡ ಬೇಕಾಗಿ ಮನವಿ.ತಾಲೂಕಿನ ರಾಮಾಪುರ ಹೊಬಳಗೆ ಸೆರಿದ ಕೇರೆಪಾತಿ ಸರ್ವೆ ನಂ 18 ರಲ್ಲಿ 1700 ಎಕರೆ ಜಮೀನು ಜೋಂಟಿ ಇದ್ದು ಹಾಗೆ ಹೊಗ್ಯಂ ಸರ್ವ ನಂ 239 ರಲ್ಲಿ 2700.35 ಸೆಂಟು ವಿಸ್ತೀರ್ಣ
ಜಮೀನಿದ್ದು ಒಂದೆ ಸರ್ವೆ ನಂಬರಲ್ಲಿ ಇರುವುದರಿದ ಇಲ್ಲಿಯ ರೈತರಿಗೆ ಬಹಳ ತೊಂದರೆಯಾಗುತ್ತಿದೆ ಶಿರ್ಘದಲ್ಲಿ ಪೋಡಿ ಮಾಡಿಕೊಡ ಬೇಕು. ಹನೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷರ ಕೊರತೆಯಿದ್ದು ಹೆಚ್ಚಿನ ಶಿಕ್ಷರನ್ನು ನೇಮಿಸಿ ಕೋಡ ಬೇಕು ಎಂದು ಮನವಿ ಮತ್ತು ಸೊಳಎರಿಪಾಳ್ಯ ಗ್ರಾಮ ಪಂಚಾಯಿತಿ ಶಾಲೆ ಹಾಗೂ ಹೊಗ್ಯ ಗ್ರಾಮ ಪಂಚಾಯಿತಿಗರ ಸೆರಿದ ಕುಡೂರು ಪದವಿ ಪೂರ್ವ ಕಾಲೇಜೂ ನಿರ್ಮಾಣ ಮಾಡಿ ಕೊಡಬೇಕೆಂದು ಮನವಿ.
ಹೊಗ್ಯಂ ಪಂಚಾಯಿತಿವ್ಯಾಪ್ತಿಯಲ್ಲಿ ಕೆ.ಇ.ಬಿ ಪವರ್ ಸ್ಟೇಷನ್ ನಿರ್ಮಿಸಿ ಕೋಡಬೇಕು ಹಾಗೂ ರಾಜ್ಯಂದ್ಯಾತ ಅಕ್ರಮ ಸಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮಗೊಳಿಸುವಂತೆ ತಮ್ಮಲ್ಲಿ ಮನವಿ. ಗೋಪಿನಾಥ ಪಂಚಾಯಿತಿವ್ಯಾಪ್ತಿಗೆ ಬರುವ ಪರಂಪರೆ ಅರಣ್ಯ ವಾಸಿಗಳಿಗೆ ಮೂಲಬೂತ ಹಕ್ಕು ಮತ್ತು ಸೌಕರ್ಯ ಮತ್ತು ಹಕ್ಕು ಪತ್ರ ಒದಗಿಸಿಕೊಡಬೇಕು. ಮತ್ತು ಪುದುಕಾಡು, ಅಪ್ಪು ಕಾವಟ್ಟಿ, ಜಂಬುಪಟ್ಟಿ ಮಾರಿಕೊಟೆ, ಪುಂಗಂ ಅತ್ತೂರು ಅಲಂಬಾಡಿ ಗ್ರಾಮಗಳಿಗೆ ಗ್ರಾಮ ಠಾಣೆಯನ್ನು ಸೇರಿಸಕೊಡಬಡಬೇಕು. ಹನೂರು ತಾಲೂನ ಮಲೈ ಮಹದೇಶ್ವರ ಬೆಟ್ಟ ಪಂಚಾಯಿತಿಯ ಇಂಡಿಗನಾತ ಗ್ರಾಮದಲ್ಲಿ ಲೋಕಸಭೆಯ ಚುನಾವಣೆಯ ಸಂರ್ಬದಲ್ಲಿ ಸಡೆದ ಗಲಭೆಯ ಪ್ರಕರಣದಲ್ಲಿ ಎಲ್ಲಾರ ಮೇಲೆ ಪ್ರಕರಣ ದಾಕಲಾಗಿರುವುದರಿಂದ ಅ ಊರಿನ ಅಮಾಯಕರನ್ನು ಕೈಬಿಡಬೇಕೆಂದು .
ರಾಮಾಪುರ ಗ್ರಾಮ ಪಂಚಾಯಿತಿವ್ಯಾಪ್ತಿಗೆ ಬರುವ ಗ್ರಾಮಗಳು ಪಳನಿಮೇಡು ಮಾಮಾರ್ ದೊಡ್ಡಿ ಪುದುರಾಮಾಪುರ ಕೆಂಪೆಯ್ಯನಟ್ಟಿಮತ್ತೆ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡಬೆಕು.
ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿಯ ಕಾತಾಳಿ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ಹಾಗೂ ಉಡುತೊರೆ ಹಳ್ಳ ಜಲಾಸಯವನ್ನು ನೋಟಿಪೀಕೆಷನ್ ಮಾಡಿಕೊಡಬೇಕು. ಮಾರ್ಟಳ್ಳಿ ಗ್ರಾಮದಲ್ಲಿ ಎಸ್.ಬಿ ಐ ಶಾಕೆಯನ್ನು ತೆರೆಯಬೇಕು. ಕಾಡುಪ್ರಾಣಿಗಳಿಂದ ಹಾನಿಯಾದರೆ ಸರ್ಕಾರದಿಂದ ಪರಿಹಾರ ಕೆಲವು ಸಿರಿ ದಾನ್ಯಗಳು ಕೈಬಿಟ್ಟಿರುವುದರಿದ ಅದನ್ನು ಪಟ್ಟಿಯಲ್ಲಿ ಸರಿಸಬೇಕು. ತಾಲ್ಲೂಕಿನ ಅಜೀಪುರ ಗ್ರಾಮ ಪಂಚಾಯಿತಿ ವ್ಯಪ್ತಿಯಲಗಲಿ ಹಲವಾರು ಗ್ರಾಮಗಳಿದ್ದು ಇಲ್ಲಿನ ಜನಗಳಗೆ ಅನಾರೊಗಕ್ಕೆ ಒಳಗಾದೆ ಹನೂರು ಮತ್ತು ರಾಮಾಪುರಕ್ಕೆ ಹೊಗಬೇಕು ಆದ್ದರಿಂದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಾಣಮಾಡಿಕೊಡಬೇಕು ಮತ್ತು ಬಸ್ ಸ್ಕಾಪ್ ನಿರ್ಮಾಣ ಮಾಡಿಕೊಡಬೇಕೆಂದು ಮನವಿ
ಕರ್ನಾಟಕ ರಾಜ್ಯ ರೈತ ಸಂಘದ ಇಂದು ಪತ್ರಿಕೆ ಘೋಷಣೆ ಕರೆದಿದ್ದು ,ಎಲ್ಲಾ ರೈತ ಸಂಘದ ಪದಾಧಿಕಾರಿಗಳು ಸಮ್ಮುಖದಲ್ಲಿ ತಿರ್ಮಾನಿಸಿ ನಂತರ ಸರ್ಕಾರಕ್ಕೆ ಮನವಿ ಮಾಡಲು ಒಕ್ಕೂರಲ ತಿರ್ಮಾನವಾಯಿತು .
ಇದೇ ಸಂದರ್ಭದಲ್ಲಿ
ಹನೂರು ತಾಲೂಕಿನ ಅಧ್ಯಕ್ಷ ಅಮ್ಜದ್ ಖಾನ್ ಜಿಲ್ಲಾ ಮಹಿಳ ಕಾರ್ಯದರ್ಶಿ ಪೋಗಡಿ , ತಾಲ್ಲೂಕು ಗೌರವಧ್ಯಕ್ಷ ರಾಜಣ್ಣ ,ಉಪಾಧ್ಯಕ್ಷ ಪಳನಿಸ್ವಾಮಿ .ಸಂಘಟನೆಯ ಕಾರ್ಯದರ್ಶಿ ಬಸವರಾಜು. ಹನೂರು ತಾಲ್ಲೂಕು ಮಹಿಳಾ ಅಧ್ಯಕ್ಷರಾದ ರಾಜಮ್ಮಣಿ ಸೇರಿದಂತೆ ರೈತ ಮುಖಂಡರುಗಳಾದ ಶಿವಣ್ಣ ,ನಾಗರಾಜು,ವೆಂಕಟೇಶ್ ,ಮುತ್ತಣ್ಣ .ಮಾದೇಶ್.ಪಳನಿಸ್ವಾಮಿ. ಬಾಲಸುಬ್ರಹ್ಮಣ್ಯಂ . ಪಚ್ವೆಗೌಡ ಇನ್ನಿತರರು ಹಾಜರಿದ್ದರು.