Regarding confusion regarding the order of celebration of Basava Jayanti by Shri Shankar Bidari, State President of Abhavilimahasabha:

ಸನ್ಮಾನ್ಯ ಶ್ರೀ ಶಂಕರ ಬಿದರಿ ಅವರು ಅಭಾವಿಲಿ ಮಹಾಸಭಾ ಆದೇಶ ಹೊರಡಿಸಿ ತಮ್ಮ ಸಂಘಟನೆಯ ತಾಲೂಕಾ ಜಿಲ್ಲಾ ಘಟಕಗಳಿಗೆ ಬಸವ ಜಯಂತಿ ನಿರ್ದೇಶನ ಕೊಟ್ಟಿದ್ದಾರೆ, ಅದರಂತೆ ಬಸವ ಜಯಂತಿ ದಿವಸ 770 ಅಮರಗಣಾಂಗಗಳ ಜೊತೆಗೆ ಜಗದ್ಗುರು ರೇಣುಕಾಚಾರ್ಯರ ಕೂಡಿಸಿ 771 ಶರಣರ ಜಯಂತಿ ನೆರವೇರಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದಾರೆ. ಮೊದಲು ಅಭಾವಿಲಿ ಮಹಾಸಭಾ ಮತ್ತು ಪಂಚಾಚಾರ್ಯರು ಸೇರಿ ಬಸವಣ್ಣನವರು ಧರ್ಮ ಸ್ಥಾಪಕರು ಮತ್ತು ಧರ್ಮಗುರು ಎಂದು

ಒಪ್ಪಿಕೊಳ್ಳಬೇಕು, ಆವಾಗ ನಿಮ್ಮ ಸಂಘಟನೆಯಿಂದ ಪ್ರಕಟಣೆ ಹೊರಡಿಸಬೇಕು, ಆವಾಗ ನೀವು ಬಸವ ಜಯಂತಿ ಆಚರಣೆ ಬಗ್ಗೆ ,ಲಿಂಗಾಯತ ಪರ ಬಸವ ಪರ ಸಂಘಟನೆಗಳ ಜೊತೆ ಸಭೆ ಸೇರಿ ಮುಂದಿನ ನಿರ್ಣಯ ತೆಗೆದುಕೊಳಲ್ಲೂ ಅರ್ಹರಾಗುತ್ತಿರಿ. ಇಲ್ಲಾಂದರೆ ನೀವು ಬಸವ ಜಯಂತಿ ಬಗ್ಗೆ ನಿರ್ಣಯ ಮಾಡುವದು, ಮತ್ತೆ ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದೀರಿ ಎನ್ನುವ ಸಂದೇಶ ಸಮಾಜಕ್ಕೆ ಮುಟ್ಟುತ್ತದೆ. ನಿಮಗೆ ಸಮಾಜ ಬಗ್ಗೆ ಒಳ್ಳೆಯ ಸದುದ್ದೇಶ ಇದೆ ಅಂದರೆ ನೀವು ಅಭಾವಿಲಿ ಮಹಾಸಭಾ ರಾಜ್ಯ ಸಮಿತಿಯಿಂದ ಅಲ್ಲ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸಮಿತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು.
ಇವಾಗ ಬಹಳಷ್ಟು ಗೊಂದಲದಲ್ಲಿದ್ದ ಲಿಂಗಾಯತ ಸಮಾಜವನ್ನು ಅಭಾವಿಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಸನ್ಮಾನ್ಯ ಡಾ ಶಾಮನೂರು ಶಿವಶಂಕರಪ್ಪ ಸುಧಾರಿಸುವ ಕ್ರಮ ತೆಗೆದುಕೊಳ್ಳುತ್ತಿದ್ದಾರೆ, ವಿಶ್ವಗುರು ಬಸವೇಶ್ವರ ಕರ್ನಾಟಕ ರಾಜ್ಯ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು, ಆದರಿಂದ ಅಭಾವಿಲಿ ಮಹಾಸಭಾ ಮತ್ತು ಶ್ರೀ ಶಾಮನೂರು ಬಗ್ಗೆ ಗೊಂದಲ ಕಡಿಮೆ ಆಗಿ ಲಿಂಗಾಯತ ಬಸವಪರ ಸಂಘಟನೆಗಳಲ್ಲಿ ಸೌಹಾರ್ದ ಏರ್ಪಡುತ್ತಿದೆ.
ಆದರೆ ಬಿದರಿ ಅವರ ಗೊಂದಲ ಮೂಡಿಸುವ ಅವೈಜ್ಞಾನಿಕ , ಸಂಸ್ಕಾರ ರಹಿತ, ಒಮ್ಮತ ಇಲ್ಲದ ನಿರ್ಣಯದಿಂದ ಸಮಾಜದಲ್ಲಿ ಮತ್ತೆ ಗೊಂದಲ ಮೂಡುತ್ತಿದೆ. ಅಭಾವಿಲಿ ಮಹಾಸಭಾ ಸಭೆಯಲ್ಲಿ ಕೂಡ ವಿರೋಧ ಆಗಿತ್ತು ಎನ್ನುವ ನಂಬಲರ್ಹ ಮೂಲಗಳಿಂದ ಸುದ್ದಿ ಇದೆ. ಆದರೆ ನಾನು ಒಬ್ಬ ಐಪಿಎಸ್ ಅಧಿಕಾರಿ ಅನ್ನುವ ಹಮ್ಮಿನಿಂದ ಗದರಿಸಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವರು ಹಿರಿಯರು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಯಾರೇ ಮಹಾಪುರುಷರ ಜಯಂತಿ ದಿವಸ ಮತ್ತೊಬ್ಬ ಮಹಾಪುರುಷರ ಜಯಂತಿ ಆಚರಣೆ ಮಾಡುತ್ತೇವೆ ಅನ್ನೋದು ಮೂರ್ಖತನದ ಪರಮಾವಧಿ, ಇದನ್ನು ಯಾರು ಒಪ್ಪುವಂತಹ ನಿರ್ಣಯ ಇಲ್ಲ. ಸಂಪೂರ್ಣ ಕುಟುಂಬದವರ ಹುಟ್ಟು ಹಬ್ಬ ಒಂದೇ ದಿವಸ ಆಗಲಿ ಎಂದು ಬಿದರಿ ಅವರು ತಮ್ಮ ಕುಟುಂಬದಲ್ಲಿ ಆಚರಣೆಗೆ ಮೊದಲು ತರಲಿ, ನಂತರ ಸಮಾಜಕ್ಕೆ ಬುದ್ಧಿ ಹೇಳಲಿ . ಆಯಾ ಶರಣರ ಅನುಯಾಯಿಗಳು ಈಗಾಗಲೇ ತಮ್ಮ ತಮ್ಮ ಶರಣರ ಜಯಂತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ, ಅವರ ಜೊತೆ ಲಿಂಗಾಯತ ಪರ ಬಸವ ಪರ ಸಂಘಟನೆಗಳು ಕೈಜೋಡಿಸಿ, ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಸೌಹಾರ್ದ ವಾತಾವರಣ ನಿರ್ಮಾಣ ಆಗಿದೆ. ಆದರಿಂದ ಸಮಾಜಕ್ಕೆ ಯಾವುದೇ ತೊಂದರೆ ಆಗುತ್ತಿಲ್ಲ, ಆದರೆ ಆಯಾ ಶರಣರ ಅನುಯಾಯಿಗಳಿಗೆ ಜನ್ಮದಿನಾಚರಣೆ ಆಚರಣೆ ಬೇಡ ಅಂದರೆ ಅವರ ಅಸ್ಮಿತಿಗೆ, ಗೌರವಕ್ಕೆ ಧಕ್ಕೆ ಆಗುತ್ತದೆ, ಹಾಗು ಸಣ್ಣ ಸಣ್ಣ ಸಮಾಜಕ್ಕೆ ದೊಡ್ಡವರಿಂದ ದಬ್ಬಾಳಿಕೆ ಎನ್ನುವ ಭಿನ್ನಾಭಿಪ್ರಾಯ ಮೂಡುತ್ತದೆ.
ಈಗಾಗಲೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಸರಕಾರ ದಿನ ನಿಗದಿ ಪಡಿಸಿ ಸರಕಾರ ವತಿಯಿಂದ ಜಯಂತಿ ಆಚರಣೆ ಮಾಡುತ್ತಿದ್ದಾರೆ, ರೇಣುಕಾಚಾರ್ಯ ಅನುಯಾಯಿಗಳಿಗೆ ಬಿದರಿ ಅವರ ದ್ವಂದ್ವ ನಡೆಯಿಂದ ಬೇಜಾರಾಗುತ್ತದೆ. ಲಿಂಗಾಯತ ಧರ್ಮ ಮತ್ತು ಧರ್ಮಗುರು ಬಸವಣ್ಣನವರನ್ನು ನಂಬುವವರು ಯಾರು ರೇಣುಕಾಚಾರ್ಯ ಜಯಂತಿ ವಿರೋಧ ಮಾಡಿಲ್ಲ, ಆದರೆ ನಿಮ್ಮ ನಡೆಯಿಂದ ಭಿನ್ನಾಭಿಪ್ರಾಯ ಮೂಡುತ್ತಿವೆ.
ಪೂಜ್ಯ ಪಂಚಾಚಾರ್ಯರು ಬಿದರಿ ರವರ ನಡೆಗೆ ಸ್ವಾಗತ ಮಾಡಿದ್ದು ಆಶ್ಚರ್ಯ ಮೂಡಿಸುವಂತದ್ದು, ಈ ಗೊಂದಲ ನಿರ್ಮಾಣ ಮಾಡಲು ಇವರ ಕುತಂತ್ರ ಎದ್ದು ಕಾಣುತ್ತಿದೆ. ಪೂಜ್ಯ ಪಂಚಾಚಾರ್ಯರು ಒಂದು ವೇಳೆ ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಒಟ್ಟಾಗಿ ಮಾಡುವದೇ ಆದರೆ ಸರಕಾರಕ್ಕೆ ಪತ್ರ ಬರೆದು ರೇಣುಕಾಚಾರ್ಯರ ಜಯಂತಿ ಮತ್ತು ಇನ್ನಿತರರ ಜಯಂತಿ ರದ್ದು ಮಾಡಿ ಎಲ್ಲಾ 770 ಅಮರಗಣಾಂಗಗಳ ರೇಣುಕಾಚಾರ್ಯರ ಜಯಂತಿ ಸೇರಿ ಬಸವ ಜಯಂತಿ ದಿನವೇ ಆಚರಣೆ ಮಾಡುವಂತೆ ಒತ್ತಾಯಿಸಿ. ಸನ್ಮಾನ್ಯ ಶ್ರೀ ಶಂಕರ ಬಿದರಿ ಇದೆ ನಿರ್ಣಯ ಅಭಾವಿಲಿ ಮಹಾಸಭಾ ರಾಷ್ಟ್ರ ಸಮಿತಿ ಕೂಡ ನಿರ್ಣಯ ಕೈಗೊಂಡು ಸರಕಾರಕ್ಕೆ ಪತ್ರ ಸಲ್ಲಿಸಲಿ, 770 ಅಮರಗಣಾಂಗಗಳ ರೇಣುಕಾಚಾರ್ಯರ ಜಯಂತಿಗಳು ಮಾಡುವದು ಬಿಟ್ಟು ಎಲ್ಲಾ ಜಯಂತಿಗಳು ಬಸವ ಜಯಂತಿ ದಿವಸ ಆಗಲಿ ಎಂದು ಪತ್ರ ಬರೆದು ಮನವಿ ಸಲ್ಲಿಸಿ.
ಬಿದರಿ ಅವರು ಪ್ರಗತಿಪರ ಚಿಂತಕರು ಆದರೆ ನೀವು ಈ ಕೆಳಗಿನ ನಿರ್ಣಯಗಳು ತೆಗೆದುಕೊಳ್ಳಿ:
1) ಪೂಜ್ಯ ಪಂಚಾಚಾರ್ಯರು ಆಧುನಿಕ ಯುಗದಲ್ಲಿ , ತಾಂತ್ರಿಕ ಯಾಂತ್ರಿಕ ವಿಶ್ವದಲ್ಲಿ ಅಡ್ಡಪಲ್ಲಕ್ಕಿ ಭಕ್ತರ ಹೆಗಲ ಮೇಲೆ ಕೂತು ಮೆರವಣಿಗೆ ಮಾಡುವದನ್ನು ನಿಷೇಧಿಸಿ, ಉತ್ತಮವಾದ ಸುಂದರವಾದ ರಥಗಳ ಮೆರವಣಿಗೆ ಆಗಲಿ. ( ಸಮಾಜದಲ್ಲಿ ಗೊಂದಲ ಬೇಡ, ಪಂಚಾಚಾರ್ಯರು ನಮ್ಮವರಲ್ಲ ಅಂದ ಮೇಲೆ ಅವರ ಅಡ್ಡಪಲ್ಲಕ್ಕಿ ಉತ್ಸವಕ್ಕೆ ನಮ್ಮ ವಿರೋಧ ಬೇಡ ಎಂದು ನಾನು 2014 ರಲಿ ಬೆಂಗಳೂರು ಸ್ವತಂತ್ರ ಉದ್ಯಾನದಲ್ಲಿ ಜರುಗಿದ ಲಿಂಗಾಯತ ಧರ್ಮ ಸಮಾವೇಶದಲ್ಲಿ ಪೂಜ್ಯ ಮಾತೆ ಮಹಾದೇವಿ ಮಾತಾಜಿಯವರಲ್ಲಿ ಪ್ರಸ್ತಾವ ಮಾಡಿದೆ, ಅದಕ್ಕೆ ಪೂಜ್ಯ ಡಾ ಸಾರಂಗ ಸುಲಪುಲ ಮಠ ಅವರು ಅನುಮೋದಿಸಿದರು, ಮಾತಾಜಿ ಒಪ್ಪಿಗೆ ಸೂಚಿಸಿದರು)
2) ಪೂಜ್ಯ ಪಂಚಾಚಾರ್ಯರು ಬಂಗಾರ ಕಿರೀಟ ಬಿಟ್ಟು ಶಿವ ಶೈವ ಸಂಸ್ಕೃತಿಯ ಹಾಗೆ ರುದ್ರಾಕ್ಷಿ ಕಿರೀಟ ಧರಿಸಲಿ, ಸರಳತೆ ಮೂಡಿ ಬರಲಿ. ಇದರಿಂದ ಭಕ್ತರಲ್ಲಿ ಜನರಲ್ಲಿ ಸಾಮರಸ್ಯ ಮೂಡುತ್ತದೆ.
3) ಎಲ್ಲರೂ ಸೇರಿ ಲಿಂಗಾಯತ ಧರ್ಮ ಒಪ್ಪುವ ಹಾಗೆ ನಿರ್ಣಯ ತೆಗೆದುಕೊಳ್ಳಿ. ಭಾರತ ದೇಶದ ಸನಾತನ ಸಮಾಜದಲ್ಲಿ ಶೈವ ವೈಷ್ಣವ ಎನ್ನುವ ಎರಡು ಪಂಥಗಳು ಇವೆ ಎಂದು ಇತಿಹಾಸದಲ್ಲಿ ಇದೆ. ಅದರಂತೆ ಶಿವ ಪಾರ್ವತಿ ಆರಾಧಿಸುವ ಶೈವ ಪಂಥದ ಎಂಟು ಶಾಖೆಗಳಲ್ಲಿ ವೀರಶೈವ ಒಂದು, ಇದು ಹೇಗೆ ಧರ್ಮ ಆಗುತ್ತದೆ, ಯಾವ ಇತಿಹಾಸದಲ್ಲಿಯು ಇಲ್ಲ. ಪೂಜ್ಯ ಜಗದ್ಗುರುಗಳು ದ್ವಂದ್ವದಲ್ಲಿ ಇದ್ದಾರೆ ಅವರು ಒಂದು ಸಲ ವೀರಶೈವ ಹಿಂದೂ ಧರ್ಮದ ಒಂದು ಪಂಗಡ ಅನ್ನುತ್ತಾರೆ, ಮತ್ತೊಮ್ಮೆ ವೀರಶೈವ ಧರ್ಮ ಅನ್ನುತ್ತಾರೆ, ಮತ್ತೊಮ್ಮೆ ವೀರಶೈವ ಲಿಂಗಾಯತ ಅನ್ನುತ್ತಾರೆ. ಈ ಗೊಂದಲಗಳಿಂದ ಲಿಂಗಾಯತ ಸಮಾಜಕ್ಕೆ ಸರಕಾರದಲ್ಲಿ ಯಾವುದೇ ಮಾನ್ಯತೆ ಸಿಗುತ್ತಿಲ್ಲ. ವೀರಶೈವ ಲಿಂಗಾಯತ ಒಂದೇ ಅಂದರು ಕೇವಲ ಲಿಂಗಾಯತ ಎಂದು ಪ್ರಸ್ತಾವ ಕಳಿಸಿದರೆ ಮಾನ್ಯತೆ ಸಿಗುತ್ತದೆ, ಆದರಿಂದ ಸಮಾಜಕ್ಕೂ ಸೌಲಭ್ಯ ಸಿಗುತ್ತವೆ. ಜಗದ್ಗುರುಗಳು ಸಮಾಜಕ್ಕಾಗಿ ಸ್ವಪ್ರತಿಷ್ಠೆ ಬಿಡಬೇಕು.
4) ದೇಹವೇ ದೇಗುಲ, ಇಷ್ಟಲಿಂಗವು ದೇವರು ಸೃಷ್ಟಿಕರ್ತ ಕುರುಹು ಆಗಿದ್ದರಿಂದ ಗುಡಿ ಗೋಪುರ ದೇವಾಲಯಗಳು ನಿಷಿದ್ಧ ಎಂದು ಬಸವಾದಿ ಶರಣರು ತತ್ವ ಸಿದ್ದಾಂತ ಹೇಳುತ್ತದೆ. ಬಿದರಿ ಅವರೇ ಇದನ್ನು ಜಾರಿಗೆ ತನ್ನಿ, ದೇವಾಲಯಗಳು ನಿಷಿದ್ಧ ಮಾಡಿ, ನಿಮ್ಮ ವೈಚಾರಿಕ ವಿಚಾರಗಳಿಗೆ ಹೊಂದುಕೊಳ್ಳುತ್ತದೆ.
ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳು ವೀರಶೈವವು ಸೇರಿ ಒಂದುಗೂಡಿಸಿ, ಎಲ್ಲರೂ ಸೇರಿ ಎಲ್ಲಾ ಆಚರಣೆಗಳು ಒಮ್ಮತದಿಂದ ಮಾಡೋಣ. ನಿಮ್ಮ ಆದೇಶ ಹೇಗೆ ಅಂದರೆ ರೋಗಿಗೆ ಮೇಕಪ್ ಮಾಡಿದ್ದ ಹಾಗೆ, ಮೊದಲು ಸಮಾಜಕ್ಕೆ ಅಂಟಿಕೊಂಡ ರೋಗಗಳು ವಾಸಿ ಮಾಡಬೇಕು, ನಂತರ ಮೇಕಪ್ ಮಾಡಬೇಕು.
ಈ ನಿಮ್ಮ ಗೊಂದಲದ ಆದೇಶ ಯಾರಿಗೂ ಒಪ್ಪಿಗೆ ಇಲ್ಲ ತಾವು ಕೂಡಲೇ ಆದೇಶ ಹಿಂಪಡೆದು, ನಿಮ್ಮ ಸಂಘಟನೆಯ ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಬಸವ ಜಯಂತಿ ಮೊದಲಿನಂತೆ ಆಚರಿಸಲು ಆದೇಶಿಸಿ.
ಜಯ ಬಸವ, ಜಯ ಲಿಂಗಾಯತ, ಜಯ ಭಾರತ

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.