Dr. B.R. Ambedkar, the greatest leader of the country: Rayardi

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಯಲಬುರ್ಗಾ : ದೇಶದಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವಾಗಲೇ, ಸ್ವತಃ ಅಂಬೇಡ್ಕರ್ ಅವರು ಅಸ್ಪೃಷ್ಯತೆ ಅನುಭವಿಸಿ ಛಲದಿಂದ ಅಧ್ಯಯನ ನಡೆಸಿ ಸಂವಿಧಾನ ರಚಿಸುವ ಮೂಲಕ ದೇಶದಲ್ಲಿ ಸಮಾನತೆಗೆ ಬಲ ನೀಡಲು ಹೋರಾಡಿದ ದೇಶ ಕಂಡ ಅಪ್ರತಿಮ ಮಹಾನ್ ನಾಯಕರು ಅಂಬೇಡ್ಕರವರು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ತಾಲೂಕ ಆಡಳಿತ, ತಾಲ್ಲೂಕ ಪಂಚಾಯತಿ, ಪಟ್ಟಣ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ದೇಶ ಕಂಡಂತಹ ಮೊದಲನೇಯ ಮಹಾನ್ ಅರ್ಥಶಾಸ್ತ್ರಜ್ಞ ಅವರು ಕಡು ಬಡತನದಲ್ಲಿ ಹಲವು ಸಂಕಷ್ಟಗಳ ಮದ್ಯೆಯೇ ಅಧ್ಯಯನ ನಡೆಸಿ ಸ್ವಾತಂತ್ರ್ಯ ಪೂರ್ವದಲ್ಲಿ ಸಂಸತ್ ಸದಸ್ಯರಾಗಿ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದರು ಇಡೀ ವಿಶ್ವದಲ್ಲಿ ಅತೀ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಸಂವಿಧಾನವನ್ನು ರಚನೆ ಮಾಡಿದ ಕಿರ್ತೀ ಅವರದು ಎಂದರು.
12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಹಲವಾರು ಶರಣರು ಜಾತಿ ವ್ಯವಸ್ಥೆ ವಿರುದ್ದ ಅನುಭವ ಮಂಟಪ ಮಾಡುವ ಮೂಲಕ ಸಮಾನತೆಗೆ ಹೋರಾಟ ಮಾಡಿ ಕಲ್ಯಾಣದಲ್ಲಿ ಒಬ್ಬ ಪರಿಶಿಷ್ಠ ಜಾತಿಗೆ ಸೇರಿದ ವಧುವನ್ನು ಮೇಲ್ಜಾತೀಯ ಯುವಕನಿಗೆ ಮದುವೆ ಮಾಡುವ ಮೂಲಕ ಒಂದು ದೊಡ್ಡ ವಿಚಾರ ಹೊಂದಿ ಅನುಷ್ಠಾನಗೊಳಿಸಿದ್ದರಿಂದ ಕಲ್ಯಾಣದಲ್ಲಿ ಕ್ರಾಂತಿಯೇ ಆಯಿತು, ಅಲ್ಲಿಂದ ಪಟ್ಟ ಭದ್ರ ಹಿತಾಸಕ್ತಿಗಳು ಬಸವಣ್ಣನವರನ್ನು ಸೇರಿದಂತೆ ಇನ್ನಿತರೇ ಶರಣರನ್ನು ಹೋಡದೊಡಿಸಿದ್ದು ತಿಳಿದದ್ದೇ ಎಂದರು.
ಮುಂದೊರೆದ ಈ ಸಾಮಾಜಿಕ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸಿಗುವ ಮುನ್ನ ಸಂವಿಧಾನದ ಕಾನೂನಿನ ಬಲ ಕೊಟ್ಟಿದ್ದರಿಂದ ಇಂದು ಅಸ್ಪೃಷ್ಯರಿಗೆ, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ, ದಲಿತರು, ಎಲ್ಲಾ ಮಹಿಳೆಯರಿಗೆ ಸಮಾನತೆ ಸಿಕ್ಕಿದೆ. ಪುರುಷ ಪ್ರಧಾನ ವ್ಯವಸ್ಥೆ ಜಾರಿಯಲ್ಲಿದ್ದಾಗ ಮಹಿಳೆಯರಿಗೆ ಗರ್ಭಗುಡಿ ಪೂಜೆ ಮಾಡುವ ಹಕ್ಕಿಲ್ಲಾ, ಆಸ್ತಿಯಲ್ಲಿ ಹಾಗೂ ಕೇಲವೊಂದು ವಿಚಾರಗಳಲ್ಲಿ ಹಕ್ಕುಗಳಿರಲಿಲ್ಲಾ ಇವುಗಳೆಲ್ಲವಕ್ಕೂ ಇಂದು ಸಂವಿಧಾನದ ಕಾನೂನಿಂದ ಸಮಾನತೆ ಸಿಕ್ಕಿದೆ ಎಂದರೇ ಅದು ಬಾಬಾ ಸಾಹೇಬರಿಂದ ಎಂದರು.
ನಂತರದಲ್ಲಿ ಪರಿಶಿಷ್ಟ ಜಾತಿಯ ಎಸ್,ಎಸ್,ಎಲ್ ,ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮೊದಲು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಜಾನಪದ ನೃತ್ಯ, ಹಾಗೂ ಮಹಿಳೆಯರಿಂದ ಕುಂಭದ ಬದಲು ಸಂವಿಧಾನ ಪೀಠಿಕೆಯನ್ನು ಹೊತ್ತು ಸಾಗಿದ್ದು ವಿಶೇಷವಾಗಿತ್ತು.
ನಂತರ ಶಾಸಕ ಬಸವರಾಜ ರಾಯರಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಸೇರಿದಂತೆ ಅನೇಕ ಮುಖಂಡರು ವಿವಿಧ ಸಂಘಟನೆಯ ಅಧ್ಯಕ್ಷರು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಬಳ್ಳಾರಿ ತಹಸೀಲ್ದಾರ ಗುರುರಾಜ ಛಲವಾದಿ, ತಾಪಂ ಇಓ ಸಂತೋಷ ಪಾಟೀಲ್ ಬಿರಾದಾರ, ಬಿಇಓ ಸೋಮಶೇಖರ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶೀಧರ ಸಕ್ರಿ, ಪಿಡ್ಲೂಡಿ ಎಇಇ ಮಲ್ಲಿಕಾರ್ಜುನ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಪಂ ಮುಖ್ಯಾಧಿಕಾರಿ ನಾಗೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಮುಖಂಡರಾದ ಚಂದ್ರಶೇಖರಯ್ಯ ಹಿರೇಮಠ, ಅಂದನಾಗೌಡ ಉಳ್ಳಾಗಡ್ಡಿ, ಡಾ.ಶಿವನಗೌಡ ದಾನರಡ್ಡಿ, ರೇವಣೇಪ್ಪ ಸಂಗಟಿ, ಯಮನೂರಪ್ಪ ನಡುವಿನಮನಿ, ಪುಟ್ಟರಾಜ ಪೂಜಾರ, ಆನಂದ ಉಳ್ಳಾಗಡ್ಡಿ, ಛಲವಾದಿ ಸಮಾಜದ ತಾಲೂಕ ಅಧ್ಯಕ್ಷ ಅಂದಪ್ಪ ಹಾಲಕೇರಿ, ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ವಸಂತಕುಮಾರ ಭಾವಿಮನಿ, ಉಪನ್ಯಾಸಕ ಡಾ.ತಿಮ್ಮಾರಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.