Breaking News

ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ. ಕಾಲಂನಲ್ಲಿ ಮಾದಿಗ ಎಂದು ನಮೂದಿಸಿ. ಕೊಪ್ಪ ಶಾಂತಪ್ಪ.

Give correct information to the officials who come to your door. Enter Madiga in the column. Koppa Shantappa

ಜಾಹೀರಾತು
IMG 20250411 WA0048

ತಿಪಟೂರು :ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲು ವರದಿ ನೀಡುವ ಕುರಿತು ಪರಿಶಿಷ್ಟ ಜಾತಿದತ್ತಾಂಶ ಸಂಗ್ರಹಕ್ಕಾಗಿ ಜಾತಿ ಸಮೀಕ್ಷ ನಡೆಸುತ್ತಿದ್ದು,ರಾಜ್ಯದಾದ್ಯಂತ ನಡೆಯುವ ಜಾತಿಗಣತಿ ವೇಳೆ ಗಣತಿದಾರರು ನಿಮ್ಮ ಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಪ್ರತಿಯೊಬ್ಬ ಮಾದಿಗ ಬಂಧುಗಳು ಸಹ ಮಾದಿಗ ಎಂಬುದಾಗಿ ನಮೂದಿಸಬೇಕು.ಇದರಿಂದ ಸರ್ಕಾರಕ್ಕೆ ನಿಖರವಾದ ಜಾತಿ ಅಂಕಿ ಸಂಖ್ಯೆಯ ದತ್ತಾಂಶದೊರೆಯಲಿದೆ ಎಂದು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ತಿಳಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟಜಾತಿ ಮಾದಿಗ ಸಂಘಟನೆಗಳ ಸಭೆ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಶೋಷಿತ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ, ಮೀಸಲಾತಿ ಸೌಲಭ್ಯ ಕೆಲವೇ ಕೆಲಸ ಸ್ಪೃಷ್ಯ ಪರಿಶಿಷ್ಟ ಜಾತಿಗಳ ಪಾಲಾಗುತ್ತಿದ್ದೆ,ಎಂದು ಕಳೆದ ಮೂರು ದಶಕಗಳಿಂದ ದಲಿತಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ, ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ಘನ ಸುಪ್ರೀಂ ಕೋರ್ಟ್ ಒಳಮೀಸಲಾತಿ ಅಗತ್ಯಕುರಿತು ನಿರ್ದೇಶನ ನೀಡಿದ್ದು,ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯಸರ್ಕಾರ ಒಳಮೀಸಲಾತಿ ಜಾರಿ ಮಾಡಲು. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ್ದು, ಆಯೋಗವೂ ಸಹ ಪರಿಶಿಷ್ಟ ಜಾತಿಗಳ ನಿಖರ ಅಂಕಿಅಂಶ ಸಂಗ್ರಹಿಸುವ ಉದೇಶದಿಂದ ಜಾತಿಗಣತಿಗೆ ಮುಂದಾಗಿದೆ, ತಿಪಟೂರು ತಾಲ್ಲೋಕಿನ ಮಾದಿಗ ಬಂಧುಗಳು ಗಣತಿದಾರರು ನಿಮ್ಮ ಮನೆಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ,ಜನಸಂಖ್ಯೆಯ ಸರಿಯಾದ ಮಾಹಿತಿ ಸಂಗ್ರಹಿಸಲು ಸಹಕರಿಸಿ, ಅಲ್ಲದೇ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡುವುದರಿಂದ ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಸಾಧ್ಯವಾಗುತ್ತದೆ,ನಗರ ಪ್ರದೇಶದಲ್ಲಿ ವಾಸಮಾಡುವ ಮಾದಿಗ ಬಂಧುಗಳು ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸಿ, ನೀವು ಜಾತಿಗಣತಿ ವೇಳೆ ಸರಿಯಾದ ಮಾಹಿತಿ ನೀಡದೆ,ಗಣತಿಮುಗಿದ ನಂತರ ಸರಿಪಡಿಸಲು ಸಾಧ್ಯವಿಲ್ಲ ಇದರಿಂದ ಮುಂದಿನ ನಿಮ್ಮ ಪೀಳಿಗೆಗೆ ನೀವೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದ್ದರು.ಶಿವಕುಮಾರ್ ಮತ್ತಿಘಟ್ಟ ಮಾತನಾಡಿ.ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗರು ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಸಹ,ಕೆಲವ್ಯಕ್ತಿಗಳು ಗೊಂದಲ ಸೃಷ್ಠಿಮಾಡಿ,ಸರ್ಕಾರದ ದಿಕ್ಕುತಪ್ಪಿಸುವ ಕೆಲಸಗಳಾಗಿವೆ ಆದರಿಂದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡಬೇಕು,ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಜಾತಿಕೀಳಿರಿಮೆಯಿಂದ ಉಪಜಾತಿ ಕಲಂ ನಲ್ಲಿ ತಪ್ಪು ಮಾಹಿತಿ ನೀಡಿ,ನಿಮ್ಮ ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಿಕೊಳ್ಳಬೇಡಿ ನಿಮಗಾಗಿ ಒದಗಿಬಂದಿರುವ ಸದಾವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ.ಟಿ ಕೆ ಕುಮಾರ್. ಕುಪ್ಪಾಳು ರಂಗಸ್ವಾಮಿ.ಹರೀಶ್ ಗೌಡ,ಪೆದ್ದಿಹಳ್ಳಿ ನರಸಿಂಹಯ್ಯ, ರಾಘವೇಂದ್ರ ಯಗಚೀಕಟ್ಟೆ,ಕಲ್ಲೇಶ್ ಶೆಟ್ಟಿಹಳ್ಳಿ ಚಿಕ್ಕಬಿದ್ರೆ ಸ್ವಾಮಿ ಗಾಂಧಿನಗರ ಬಸವರಾಜು,ರಮೇಶ್ ಮಾರನಗೆರೆ.ಮಂಜು
ಗುರುಗದಹಳ್ಳಿ,
ಲಕ್ಕಿಹಳ್ಳಿ ತಿಮ್ಮಯ್ಯ,ಲೋಕೇಶ್ ಉಮೇಶ್ ,ಗೌಡನಕಟ್ಟೆ ಬಸವರಾಜು, ಬಳ್ಳೆಕೆರೆ ಪ್ರಕಾಶ್ ಸೇರಿದಂತೆ ಹಲವು ಮುಖಂಡರುಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.