Greater attention to basic amenities: MLA K. Nemirajanayake




ಕೊಟ್ಟೂರಿನ ಎಲ್‌ಬಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ
ಕಾಮಗಾರಿಗೆ ಶಾಸಕ ಕೆ.ನೇಮಿರಾಜನಾಯ್ಕ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದಲ್ಲಿನ 20 ವಾರ್ಡ್‌ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೆರೆಡು ತಿಂಗಳಲ್ಲಿ ಅನುದಾನ ಕಲ್ಪಿಸಿ, ಕಾಮಗಾರಿಗಳಿಗೆ ಚಾಲನೆ “ನೀಡಲಾಗುವುದುಎಂದುಶಾಸಕಕೆ.ನೇಮಿರಾಜನಾಯ್ಕ ಹೇಳಿದರು”
ಕೊಟ್ಟೂರು, ಪಟ್ಟಣದ ವಾರ್ಡ್ ಸಂಖ್ಯೆ 8, 10, 12 ಮತ್ತು 16ರಲ್ಲಿ 1.32 ಕೋಟಿ ರೂ.ಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ 40 ವರ್ಷಗಳಿಂದ ಸರಕಾರಿ ಆಸ್ಪತ್ರೆ ಹಿಂಭಾಗದ ರಸ್ತೆ ಈವರೆಗೂ ಅಭಿವೃದ್ಧಿಯಾಗಿರಲಿಲ್ಲ ಇದೀಗ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿಸಲಾಗುವುದು. ಅದರಂತೆ ಬಸವೇಶ್ವರ ಬಡಾವಣೆ, ದ.ರಾ.ಬೇಂದ್ರೆ ಶಾಲೆ, ಹಳೆ ಶೆಟ್ಟಿ ಹೋಟೆಲ್, ಬಾಲಾಜಿ ಕಲ್ಯಾಣ ಮಂಟಪ ರಸ್ತೆಗಳನ್ನು ಕೆಕೆಆರ್ ಡಿಬಿ ಮತ್ತು ಡಿಎಂಎಫ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು. ಇನ್ನೆರೆಡು ತಿಂಗಳಲ್ಲಿ ವಾರ್ಡ್ಗೆ ಕೋಟಿ ರೂ.ಗಳಂತೆ ಅನುದಾನ ಕಲ್ಪಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು.
ತುಂಗಭದ್ರಾ ನದಿ ಹಿನ್ನೀರಿನ ಬನ್ನಿಗೋಳು ಜಾಕ್ ವೆಲ್ ನಿಂದ ಸದ್ಯ ಹ.ಬೊ.ಹಳ್ಳಿ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ.
ಅಮೃತ ಯೋಜನೆಯಡಿ ಪಟ್ಟಣಕ್ಕೆ ತುಂಗಭದ್ರಾ ನದಿ ಹಿನ್ನೀರಿನಿಂದ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸರಬರಾಜು ಪೈಪ್ ಗಳ ಸುತ್ತ ಸಿಮೆಂಟ್ ಹಾಕುವ ಕೆಲಸ ನಡೆದಿದೆ.
ಈ ಕಾಮಗಾರಿ ಪೂರ್ಣಗೊಂಡ ನಂತರ ಕೊಟ್ಟೂರು ಪಟ್ಟಣದಲ್ಲಿ ನೀರಿನ ಸಮಸ್ಯೆ ತಪ್ಪಲಿದೆ. ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದೆ ಎಂದರು
ರಾಜ್ಯ ಸರಕಾರದ ಬೆಳೆ ಏರಿಕೆ ವಿರುದ್ದ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಜೆಡಿಎಸ್ ಬೆಂಬಲವಿದೆ. ಜಿಲ್ಲೆಯಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮದಲ್ಲಿ ತಾವು ಕಾರ್ಯಕರ್ತರೊಂದಿಗೆ ಭಾಗವಹಿಸುವುದಾಗಿ ಎಂದು ಹೇಳಿದರು
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಪಪಂ ಸದಸ್ಯ ಬೋರ್ವೆಲ್ ತಿಪ್ಪೇಸ್ವಾಮಿ, ಯುವ ಮುಖಂಡ ಎಂ.ಎಂ.ಜೆ. ಶೋಭಿತ್, ಮಾಜಿ ಸದಸ್ಯ ಪಿ.ಸುಧಾಕರಗೌಡ ಪಾಟೀಲ್, ಕೊಟ್ರೇಶ್ ಕಾಮಶೆಟ್ಟಿ ಫಕೀರಪ್ಪ, ಮುಖಂಡರಾದ ಗಂಗಮ್ಮನಹಳ್ಳಿ ಬಸವರಾಜ್, ಎ.ಮಹಾಂತೇಶ್, ಜೆ.ಕಾರ್ತಿಕ, ಎನ್.ಅಪ್ಪಾಜಿ, ಟೈಲರ್ ಕೊಟ್ರೇಶ್ ಸೇರಿದಂತೆ ಇತರರು ಇದ್ದರು