Breaking News

ಕಲ್ಯಾಣಿ ಸ್ಟೀಲ್ ಕಂಪನಿಯವರು ಗಿಣಿಗೇರಾ ಗ್ರಾಮದ ಪಕ್ಕದಲ್ಲಿ ಕರಿಬೂದಿ ಡಂಪ್ ಮಾಡುವುದನ್ನು ನಿಲ್ಲಿಸಲು ಮನವಿ

Appeal to Kalyani Steel Company to stop dumping black ash near Ginigera village

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ  ಕೈಗಾರಿಕೆಗಳಿಂದ ಈಗಾಗಲೇ ಪರಿಸರ ಮಾಲಿನ್ಯವಾಗುತ್ತಿದೆ. ಕಲ್ಯಾಣಿ ಸ್ಟೀಲ್ ಕಂಪನಿಯವರು  ಗಿಣಿಗೇರಾ ಗ್ರಾಮದ ಪಕ್ಕದಲ್ಲಿ  ಕರಿ ಬೂದಿಯನ್ನು ಟಿಪ್ಪರ್ ಮೂಲಕ  ತಂದು ಗುಡ್ಡ ದ ರೀತಿಯಲ್ಲಿ  ಡಂಪ್ ಮಾಡುತ್ತಿದ್ದಾರೆ . 30 ಮೀಟರ್ ಅಂತರದಲ್ಲಿರುವ  ಈ ಕರಿ ಬೂದಿಯಿಂದ  ಊರೊಳಗೆ ವ್ಯಾಪಾಕವಾಗಿ ದೂಳು ಬರುತ್ತಿದೆ. ಈ ವಿಷಕಾರಿ ದೂಳಿನಿಂದ  ಪಕ್ಕದ ಮನೆಗಳಲ್ಲಿ ವಾಸ ಮಾಡಲು ಆಗುತ್ತಿಲ್ಲ. ಗಾಳಿ ಬೀಸಿದರೆ ಊರಿನ ತುಂಬೆಲ್ಲ ಧೂಳಿನ ವಾತಾವರಣ ನಿರ್ಮಾಣವಾಗಿದೆ.
ಅಡುಗೆ ಮನೆಯಿಂದ ಹಿಡಿದು ಊಟ ಮಾಡುವ ತಾಟಿನವರೆಗೂ ದೂಳು ಆವರಿಸುತ್ತಿದೆ.
ಗ್ರಾಮದ ಪಕ್ಕದಲ್ಲಿ “ಪರಿಸರ ಬೆಳೆಸಿ ಗಿಡಗಳನ್ನು ನೆಡೆಸಿ” ದೂಳು ಬರೆದಂತ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಂಪನಿಯವರು ಕರಿಬೂದಿ ಡಂಪ್ ಮಾಡಿ ಸಾರ್ವಜನಿಕರಿಗೆ ಮತ್ತು ಗ್ರಾಮಕ್ಕಾಗುವ ತೊಂದರೆ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ.
ಊರಿನಲ್ಲಿ ಸಾಕಷ್ಟು ಅಸ್ತಮಾ, ಟಿಬಿ, ಕ್ಯಾನ್ಸರ್, ಮುಂತಾದ ರೋಗಗಳಿಂದ ಮಕ್ಕಳು, ವೃದ್ಧರು, ಹಾಗೂ ಜನಸಾಮಾನ್ಯರು ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ..
ಗ್ರಾಮದ ಪಕ್ಕದಲ್ಲಿ ಕರೀ ಬೂದಿ ಡಂಪ್ ಮಾಡದೆ ಬೇರೆ ಸ್ಥಳದಲ್ಲಿ  ಹಾಕಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯಿಂದ ಕಂಪನಿಯವರಿಗೆ ಕೇಳಿಕೊಂಡರು ಯಾವುದಕ್ಕೂ ಕಿವಿ ಕೊಡುತ್ತಿಲ್ಲ.
ಕಾರ್ಖಾನೆಯಿಂದಾಗುವ ಮಾಲಿನ್ಯ  ಮತ್ತು ಪರಿಸರಕ್ಕೆ ಸಂಬಂಧಿಸಿದ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ
ಗ್ರಾಮದಲ್ಲಿ ಜನರ ಆರೋಗ್ಯದ ಕುರಿತು ಪ್ರತಿ ತಿಂಗಳು ಆರೋಗ್ಯ ತಪಾಸಣಾ ಕ್ಯಾಂಪುಗಳನ್ನು ಮಾಡಿ ಜನರಿಗಾಗಿರುವ ಆರೋಗ್ಯ ತೊಂದರೆಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಮಾನ್ಯ ಪರಿಸರ ನಿಯಂತ್ರಣ ಅಧಿಕಾರಿಗಳಿಗೆ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಶರಣು ಗಡ್ಡಿ , ಮಂಗಳೇಶ ರಾಥೋಡ್, ಹನುಮಂತ ಕಟಗಿ,ಅನುರಾಧ, ಇನ್ನಿತರರು ಭಾಗವಹಿಸಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *