Breaking News

ವಡ್ಡರಹಟ್ಟಿಯಲ್ಲಿ ಏ.4 ರಂದು ಉದ್ಯೋಗ ಮೇಳ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಮಾಹಿತಿ

Vaddarahatti Gram PDO Suresh Chalwadi Information

ಜಾಹೀರಾತು

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹಳೇ ಗ್ರಾಪಂ ಕಟ್ಟಡದಲ್ಲಿ ಗ್ರಾಪಂ ವ್ಯಾಪ್ತಿಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ್ ಕೊಪ್ಪಳ, ತಾ.ಪಂ. ಗಂಗಾವತಿ, ಗ್ರಾಪಂ ವಟ್ಡರಹಟ್ಟಿ ಹಾಗೂ ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿ ಅವರ ಸಹಯೋಗದಲ್ಲಿ ದಿನಾಂಕ 04-04-2025 ರಂದು ಬೆಳಗ್ಗೆ 9.30 ರಿಂದ 12 ಗಂಟೆಯವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಲು ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆಯಡಿ ರಿಟೈಲ್ ಸ್ಟೋರ್ ಆಪರೇಷನ್ಸ್ ಅಸಿಸ್ಟೆಂಟ್ ಹಾಗೂ ಬ್ಯಾಕ್ ಆಫೀಸ್ ಅಸಿಸ್ಟೆಂಟ್ –ಹಣಕಾಸು ಸೇವೆಗಳ ಹುದ್ದೆಗಳಿಗೆ ತರಬೇತಿ ಹಾಗೂ ನೇಮಕ ಮಾಡಿಕೊಳ್ಳಲು ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿ ಅವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 18 ರಿಂದ 30 ವರ್ಷದೊಳಗಿನವರು ಅಸಿಸ್ಸಟೆಂಟ್ ಹಾಗೂ ಬ್ಯಾಕ್ ಆಫೀಸ್ ಅಸಿಸ್ಟೆಂಟ್ –ಹಣಕಾಸು ಸೇವೆಗಳ ಹುದ್ದೆಗಳಿಗೆ ಮೇಳದಲ್ಲಿ ಪಾಲ್ಗೊಂಡು ಸಂದರ್ಶನ ಹಾಗೂ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುತ್ತಾರೆ. ಉದ್ಯೋಗ ಮೇಳಕ್ಕೆ ಆಗಮಿಸುವವರು ಅಗತ್ಯ ದಾಖಲೆಗಳಾದ ಬಿಪಿಎಲ್ ಪಡಿತರ ಚೀಟಿ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಗುರುತಿನ ಚೀಟಿ, ಇತ್ತೀಚಿನ 5 ಪಾಸ್ ಪೋಟೋ, ,ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಉತ್ತೀರ್ಣ, ಪಿಯುಸಿ, ಐಟಿಐ, ಡಿಪ್ಲೊಮಾ ಡಿಗ್ರಿ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು. ಈ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಹಾಜರಾಗಬೇಕು.
18 ವರ್ಷ ಮೇಲ್ಪಟ್ಟ 30 ವರ್ಷದ ಒಳಗಿರುವ ಎಲ್ಲಾ ವಿದ್ಯಾವಂತರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಡ್ಡರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ನಿರುದ್ಯೋಗಿ ವಿದ್ಯಾವಂತರು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಉದ್ಯೋಗ ಮೇಳದ ಉಪಯೋಗ ಪಡೆದುಕೊಳ್ಳಬೇಕು. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಉಚಿತ ಆಹಾರ, ವಸತಿ ಸೌಲಭ್ಯಗಳೊಂದಿಗೆ 3 ತಿಂಗಳು ತರಬೇತಿ ಇರುತ್ತದೆ. ಹೆಚ್ಚಿನ ಮಾಹಿತಿಗೆ ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿಯ ಉದಯರಾಜ್ ಅವರ ಮೊ.ನಂ. 7090699499 ಗೆ ಸಂಪರ್ಕಿಸಲು ತಿಳಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.